ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ಲಭ್ಯತೆ ಹೆಚ್ಚಳಕ್ಕೆ ಬಯೋಕಾನ್ -ಸೀರಂ ಇನ್‌ಸ್ಟಿಟ್ಯೂಟ್ ಪಾಲುದಾರಿಕೆ

|
Google Oneindia Kannada News

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕೊರೊನಾ ಲಸಿಕೆ ಲಭ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಬಯೋಕಾನ್ ಹಾಗೂ ಸೀರಂ ಇನ್‌ಸ್ಟಿಟ್ಯೂಟ್ ಒಟ್ಟಾಗಿದೆ.

ಎರಡು ಪ್ರಮುಖ ಬಯೋಟೆಕ್ ಕಂಪನಿಗಳಾದ ಬೆಂಗಳೂರು ಮೂಲದ ಬಯೋಕಾನ್ ಬಯಾಲಜಿಕ್ಸ್ ಲಿಮಿಟೆಡ್ (ಬಿಬಿಎಲ್) ಮತ್ತು ಪುಣೆ ಮೂಲದ ಸೆರಮ್ ಇನ್ಸ್ಟಿಟ್ಯೂಟ್ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ (ಎಸ್ಐಎಲ್ಎಸ್) ಕೋವಿಡ್ -19, ಡೆಂಗ್ಯೂ, ಎಚ್ಐವಿ ಮತ್ತು ಇತರೆ ಸಾಂಕ್ರಾಮಿಕ ರೋಗಗಳಿಗೆ ಲಸಿಕೆ ಮತ್ತು ಆಂಟಿಬಾಡಿ ಥೆರಪಿಟಿಕ್ಸ್ ಲಭ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಕಾರ್ಯತಂತ್ರದ ಪಾಲುದಾರಿಕೆ ಮಾಡಿಕೊಂಡಿವೆ.

ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಮಾರಣಾಂತಿಕ ರೋಗಕ್ಕೆ ಲಸಿಕೆ ಅಭಿಯಾನ ಆರಂಭ!ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಮಾರಣಾಂತಿಕ ರೋಗಕ್ಕೆ ಲಸಿಕೆ ಅಭಿಯಾನ ಆರಂಭ!

ಈ ಒಪ್ಪಂದದ ಭಾಗವಾಗಿ, ಬಿಬಿಎಲ್ 15 ವರ್ಷಗಳವರೆಗೆ ವಾರ್ಷಿಕ 100 ಮಿಲಿಯನ್ ಡೋಸ್ ಲಸಿಕೆಗಳನ್ನು ಪಡೆಯಲು ಬದ್ಧವಾಗಿದ್ದು, ಇದಕ್ಕಾಗಿ ಎಸ್ಐಎಲ್ಎಸ್ ಗೆ 4.9 ಶತಕೋಟಿ ಮೌಲ್ಯದ ಶೇ. 15 ರಷ್ಟು ಪಾಲು ನೀಡಿದೆ.

Biocon And Serum Institute Come Together With Strategic Alliance

ಬಿಬಿಎಲ್ ಜಾಗತಿಕ ಮಾರುಕಟ್ಟೆಗಳಿಗೆ ಕೋವಿಡ್-19 ಲಸಿಕೆ ಸೇರಿದಂತೆ ಸೆರಮ್ ಸಂಸ್ಥೆಯ ಲಸಿಕೆ ಬಂಡವಾಳವನ್ನು ವಾಣಿಜ್ಯೀಕರಣಗೊಳಿಸುತ್ತದೆ. ಇದು ಬಿಬಿಎಲ್‌ಗೆ ಹೆಚ್ಚುವರಿ ಬೆಳವಣಿಗೆಯಾಗಿದೆ ಎಂದು ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ.

ಶುಕ್ರವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಇದನ್ನು ಪ್ರಕಟಿಸಿದ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಮತ್ತು ಎಸ್‌ಐಐ ಮುಖ್ಯ ಕಾರ್ಯನಿರ್ವಾಹಕ ಅದಾರ್ ಪೂನಾವಾಲಾ, ಈ ಪಾಲುದಾರಿಕೆಯು ಎರಡು ಪ್ರಮುಖ ಕಂಪನಿಗಳ ಸಾಮರ್ಥ್ಯ ಮತ್ತು ಸಂಪನ್ಮೂಲಗಳ ಪೂರಕೆ, ಲಸಿಕೆಗಳು ಹಾಗೂ ಜೀವಶಾಸ್ತ್ರದ ಮೂಲಕ ಜಾಗತಿಕ ಆರೋಗ್ಯ ರಕ್ಷಣೆಯ ಮೇಲೆ ಮಹತ್ವದ ಪ್ರಭಾವ ಬೀರುವ ಗುರಿ ಹೊಂದಿದೆ ಎಂದು ಹೇಳಿದ್ದಾರೆ.

ಅಸ್ಟ್ರಾಜೆನೆಕಾ ಕೊರೊನಾ ಲಸಿಕೆ ತಯಾರಿಸುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಸರಬರಾಜು ಬದ್ಧತೆಗಳನ್ನು ಪೂರೈಸಲು ಹೆಣಗಾಡುತ್ತಿರುವಾಗ ಇತರ ದೇಶಗಳಲ್ಲಿ ಲಸಿಕೆ ಉತ್ಪಾದನೆಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ಅದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದರ್ ಪೂನವಾಲಾ ತಿಳಿಸಿದ್ದರು.

ಕಳೆದ ವಾರ ಸೀರಮ್ ಇನ್ಸ್ಟಿಟ್ಯೂಟ್ ತನ್ನ ಮಾಸಿಕ ಉತ್ಪಾದನೆಯನ್ನು ಜುಲೈ ವೇಳೆಗೆ 100 ಮಿಲಿಯನ್ ಡೋಸ್‌ಗೆ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಹೇಳಿದೆ. ಆದರೆ ಈಗ ಬಹುತೇಕ ರಾಜ್ಯಗಳಲ್ಲಿ ಇಂದಿಗೂ ಕೂಡ ಲಸಿಕೆ ಕೊರತೆಯನ್ನು ಎದುರಿಸುತ್ತಿದೆ..

ಈ ಉಲ್ಬಣವು ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿಗೆ ಕಾರಣವಾಗಿದೆ ಮತ್ತು ವಿದೇಶದಿಂದ ಆಮ್ಲಜನಕ,ಔಷಧಿಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಪಡೆಯಲು ಸರ್ಕಾರ ಮನವಿ ಮಾಡಿಕೊಂಡಿದೆ ಮೇ 3-5ರ ನಡುವೆ ರಾಷ್ಟ್ರದ ಕೊರೊನಾವೈರಸ್ ಪ್ರಕರಣಗಳು ಹೆಚ್ಚಾಗಬಹುದು ಎಂದು ವಿಜ್ಞಾನಿಗಳು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

'ಪುಣೆಯಲ್ಲಿರುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಮೊದಲ ಬ್ಯಾಚ್ ಕೊವೊವಾಕ್ಸ್ ಲಸಿಕೆ ತಯಾರಿಕೆಯನ್ನು ಪ್ರಾರಂಭಿಸಲಾಗಿದೆ.

ಭಾರತದಲ್ಲಿ ನೊವಾವಾಕ್ಸ್‌ನ ಕೊರೊನಾವೈರಸ್ ಲಸಿಕೆಯ ಪ್ರಯೋಗವು ನವೆಂಬರ್ ವೇಳೆಗೆ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ. ಈ ಲಸಿಕೆ ಪ್ರಯೋಗದ ಜಾಗತಿಕ ಮಾಹಿತಿಯ ಆಧಾರದ ಮೇಲೆ ದೇಶದಲ್ಲಿ ಲಸಿಕೆ ಪ್ರಯೋಗ ಮುಕ್ತಾಯಗೊಳ್ಳುವ ಮೊದಲೇ ಈ ಸಂಸ್ಥೆಯು ಲಸಿಕೆ ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದು.

ಲಸಿಕೆ ಎನ್‌ವಿಎಕ್ಸ್-ಕೋವಿ 2373 ಮಧ್ಯಮ ಮತ್ತು ತೀವ್ರವಾದ ಕೋವಿಡ್ -19 ಸೋಂಕಿನ ವಿರುದ್ಧ 100 ಪ್ರತಿಶತ ರಕ್ಷಣೆ ನೀಡಿದೆ, ಒಟ್ಟಾರೆ 90.4 ಪ್ರತಿಶತ ಪರಿಣಾಮಕಾರಿತ್ವ ಹೊಂದಿದೆ ಎಂಬುದು ತಿಳಿದುಬಂದಿದೆ.

English summary
Two leading biotech players, Bengaluru based Biocon Biologics Limited and Pune based Serum Institute Life Sciences Private Limited have come together with a strategic alliance in a bid to increase vaccines and antibody therapeutics access for developing countries, for infectious diseases including Covid-19, dengue and HIV among others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X