ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ: ರೈಲು ಇಂಜಿನ್ ಕದಿಯಲು ಸುರಂಗ ಕೊರೆದ ಕಳ್ಳರು

|
Google Oneindia Kannada News

ಬೇಗುಸರಾಯ್ ನವೆಂಬರ್ 26: ರೈಲು ಇಂಜಿನ್ ಕದಿಯಲು ಕಳ್ಳರ ಗ್ಯಾಂಗ್‌ವೊಂದು ಸುರಂಗ ಕೊರೆದ ಘಟನೆ ಬಿಹಾರದ ಬೇಗುಸರಾಯ್‌ನಲ್ಲಿ ನಡೆದಿದೆ.

ಬಿಹಾರದ ಬೇಗುಸರಾಯ್ ಜಿಲ್ಲೆಯ ಗರ್ಹರಾ ರೈಲ್ವೇ ಯಾರ್ಡ್‌ಗೆ ಅಪರಿಚಿತರ ಗುಂಪೊಂದು ಸುರಂಗ ಕೊರೆದು ರಿಪೇರಿಗಾಗಿ ಯಾರ್ಡ್‌ನಲ್ಲಿ ಇರಿಸಲಾಗಿದ್ದ ರೈಲಿನ ಸಂಪೂರ್ಣ ಡೀಸೆಲ್ ಎಂಜಿನ್ ಅನ್ನು ಭಾಗಶಃ ಕದ್ದಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಗರ್ಹರಾ ಯಾರ್ಡ್‌ಗೆ ದುರಸ್ತಿಗಾಗಿ ತಂದ ಡೀಸೆಲ್ ಎಂಜಿನ್ ಕಳ್ಳತನಕ್ಕೆ ಸಂಬಂಧಿಸಿದಂತೆ ಬರೌನಿ ಪೊಲೀಸ್ ಠಾಣೆಯಲ್ಲಿ ಕಳೆದ ವಾರ ಪ್ರಕರಣ ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ ಎಂದು ಮುಜಾಫರ್‌ಪುರದ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಇನ್ಸ್‌ಪೆಕ್ಟರ್ ಪಿ ಎಸ್ ದುಬೆ ತಿಳಿಸಿದ್ದಾರೆ.

ವಿಚಾರಣೆ ವೇಳೆ, ಮೂವರು ಬಂಧಿತರು ರೈಲ್ವೇ ಯಾರ್ಡ್‌ಗೆ ಸುರಂಗ ಕೊರೆದು, ಅದರ ಮೂಲಕ ಇಂಜಿನ್‌ನ ಭಾಗಗಳು ಮತ್ತು ಇತರ ವಸ್ತುಗಳನ್ನು ಗೋಣಿಚೀಲಗಳಲ್ಲಿ ಸಾಗಿಸುತ್ತಿದ್ದರು ಎಂದು ಹೇಳಿದ್ದಾರೆ.

Thieves dug tunnel to steal train engine

ಬಂಧಿತ ವ್ಯಕ್ತಿಗಳು ವಿಚಾರಣೆಯ ಸಮಯದಲ್ಲಿ ಸ್ಕ್ರ್ಯಾಪ್ ಗೋಡೌನ್‌ನ (scrap godown) ಮಾಲೀಕರನ್ನೂ ಉಲ್ಲೇಖಿಸಿದ್ದಾರೆ. ಮಾಹಿತಿಯ ಆಧಾರದ ಮೇಲೆ, ಮುಜಫರ್‌ಪುರ ಜಿಲ್ಲೆಯ ಪ್ರಭಾತ್ ನಗರ ಪ್ರದೇಶದಲ್ಲಿನ ಸ್ಕ್ರ್ಯಾಪ್ ಗೋಡೌನ್‌ನಲ್ಲಿ ಶೋಧ ನಡೆಸಲಾಯಿತು, ಅಲ್ಲಿ ಪೊಲೀಸರು ರೈಲುಗಳಲ್ಲಿ ಬಳಸುವ ಉಪಕರಣಗಳ 13 ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ವಸ್ತುಗಳಲ್ಲಿ ಎಂಜಿನ್ ಭಾಗಗಳು, ವಿಂಟೇಜ್ ರೈಲು ಎಂಜಿನ್‌ಗಳ ಚಕ್ರಗಳು ಮತ್ತು ಭಾರವಾದ ಕಬ್ಬಿಣದಿಂದ ಮಾಡಿದ ರೈಲ್ವೆ ಭಾಗಗಳು ಸೇರಿವೆ ಎಂದು ದುಬೆ ಹೇಳಿದ್ದಾರೆ. ಸದ್ಯ ಸ್ಕ್ರ್ಯಾಪ್ ಗೋಡೌನ್ ಮಾಲೀಕರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಪೊಲೀಸರ ಪ್ರಕಾರ, ಈ ಗ್ಯಾಂಗ್ ಸ್ಟೀಲ್ ಬ್ರಿಡ್ಜ್‌ಗಳನ್ನು ಬಿಚ್ಚುವುದು ಮತ್ತು ಅವುಗಳ ಭಾಗಗಳನ್ನು ಕದಿಯುವಲ್ಲಿ ಸಹ ತೊಡಗಿಸಿಕೊಂಡಿದೆ. ಕಳೆದ ವರ್ಷ, ಸಮಸ್ತಿಪುರ ಲೋಕೋ ಡೀಸೆಲ್ ಶೆಡ್‌ನ ರೈಲ್ವೇ ಇಂಜಿನಿಯರ್ ಅವರನ್ನು ಪೂರ್ಣಿಯಾ ನ್ಯಾಯಾಲಯದ ಆವರಣದಲ್ಲಿ ಇರಿಸಲಾಗಿದ್ದ ಹಳೆಯ ಸ್ಟೀಮ್ ಎಂಜಿನ್ ಅನ್ನು ಮಾರಾಟ ಮಾಡಿದ ಆರೋಪದ ಮೇಲೆ ಅಮಾನತುಗೊಳಿಸಲಾಗಿತ್ತು. ಇಂಜಿನಿಯರ್ ಇತರ ರೈಲ್ವೇ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಶಾಮೀಲಾಗಿ ಇಂಜಿನ್ ಮಾರಾಟ ಮಾಡಲು ಸಮಸ್ತಿಪುರದ ವಿಭಾಗೀಯ ಮೆಕ್ಯಾನಿಕಲ್ ಇಂಜಿನಿಯರ್ ಅವರ ನಕಲಿ ಪತ್ರವನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಈ ಎಲ್ಲದರ ಬಗ್ಗೆ ವಿಚಾರಣೆ ಮಾಡಲಾಗುತ್ತಿದೆ ಎಂದು ದುಬೆ ಹೇಳಿದ್ದಾರೆ.

English summary
An incident where a gang of thieves dug a tunnel to steal a train engine took place in Begusarai, Bihar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X