• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ್ ಚೋತುಕುಮಾರನಿಗೆ ಜೋತು ಬಿದ್ದಿದ್ದು 6 ಪತ್ನಿಯರು..!

|
Google Oneindia Kannada News

ಜಮುಯಿ ನವೆಂಬರ್ 30: ಅದು ಬಿಹಾರ ಜಮುಯಿ ರೈಲ್ವೆ ನಿಲ್ದಾಣ. ಪ್ರೇಮಿಗಳು ರೈಲಿಗಾಗಿ ಕಾಯುತ್ತಿದ್ದರು. ಅವರಿಬ್ಬರು ಪ್ರೇಮಿಗಳೆಂದು ಕರೆಯಲು ಅವರ ವರ್ತನೆ ಸಾಕಿತ್ತು. ಆದರೆ ರೈಲ್ವೆ ನಿಲ್ದಾಣದಲ್ಲಿ ಕಾಣಿಸಿಕೊಂಡ ಪ್ರೇಮಿಯ ಮುಖವನ್ನು ಆತನ ಸಂಬಂಧಿಯೊಬ್ಬ ಗುರುತು ಹಿಡಿದಿದ್ದ. ಅಷ್ಟೇ ಅದಾದ ಬಳಿಕ ಭಯಾನಕ ಸತ್ಯಗಳು ಒಂದೊಂದಾಗಿ ಹೊರಬರಲು ಆರಂಭಿಸಿದವು.

ರೈಲು ನಿಲ್ದಾಣದಲ್ಲಿ ಕಾಣಿಸಿಕೊಂಡ ಪ್ರೇಮಿಯ ಹೆಸರು ಚೋತು ಕುಮಾರ್. ಪ್ರೇಯಸಿಯೊಂದಿಗೆ ರೈಲು ನಿಲ್ದಾಣದಲ್ಲಿ ಕಾಣಿಸಿಕೊಂಡ ಕುಮಾರನ ಅಸಲಿಯತ್ತು ಬೇರೆಯದ್ದೇ ಆಗಿತ್ತು. ಕುಮಾರನ ಹೆಂಡತಿಯ ಸಹೋದರ ವಿಕಾಸ್ ರೈಲು ನಿಲ್ದಾಣದಲ್ಲಿ ಕುಮಾರ್‌ನನ್ನು ಕಂಡು ಶಾಕ್ ಆಗಿದ್ದ. ಯಾಕೆಂದರೆ ಕುಮಾರೊಂದಿಗೆ ಇದ್ದದ್ದು ತನ್ನ ಸಹೋದರಿಯಾಗಿರಲಿಲ್ಲ. ಬದಲಿಗೆ ಕುಮಾರನ ಮತ್ತೊಬ್ಬ ಹೆಂಡತಿಯಾಗಿದ್ದಳು. ವಿಕಾಸ್ ಆತನನ್ನು ನೋಡಿ ಮನೆಯವರಿಗೆ ವಿಷಯ ತಿಳಿಸಿದ್ದಾನೆ. ಬಳಿಕ ದೊಡ್ಡ ರಹಸ್ಯವೇ ಬಯಲಾಗಿದೆ.

ಬಿಹಾರ: ರೈಲು ಇಂಜಿನ್ ಕದಿಯಲು ಸುರಂಗ ಕೊರೆದ ಕಳ್ಳರುಬಿಹಾರ: ರೈಲು ಇಂಜಿನ್ ಕದಿಯಲು ಸುರಂಗ ಕೊರೆದ ಕಳ್ಳರು

ತಕ್ಷಣ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಿದಾಗ ಕುಮಾರ್‌ನ ರಂಗಿನಾಟ ಬಯಲಾಗಿದೆ.

ಬೀಹಾರ್ ಚೋತು ಕುಮಾರನ ರಂಗಿನಾಟ ಬಯಲು

ಬೀಹಾರ್ ಚೋತು ಕುಮಾರನ ರಂಗಿನಾಟ ಬಯಲು

ಬಿಹಾರ್ ಮೂಲದ ಚೋತು ಕುಮಾರನಿಗೆ ಒಂದಲ್ಲ ಎರಡಲ್ಲ ಮೂರಲ್ಲ ಬರೋಬ್ಬರಿ ಆರು ಹೆಂಡತಿಯರಿರುವುದು ಬಯಲಾಗಿದೆ. ನಾಲ್ಕು ರಾಜ್ಯಗಳಲ್ಲಿ ಆರು ಜನರ ಹೆಂಡತಿಯನ್ನು ಹೊಂದಿದ್ದ ಭೂಪ ಈ ಚೋತು ಕುಮಾರ್. ಜಮುಯಿ ರೈಲ್ವೆ ನಿಲ್ದಾಣದಲ್ಲಿ ಇನ್ನೊಬ್ಬ ಮಹಿಳೆಯೊಂದಿಗೆ ಕಾಣಿಸಿಕೊಂಡಿದ್ದು ನಂತರ ಈ ಘಟನೆ ಬಯಲಾಗಿದೆ. ತಕ್ಷಣ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿರುವಾಗ ಈತ ನಾಲ್ಕು ರಾಜ್ಯಗಳಲ್ಲಿ ಆರು ಹೆಂಡತಿಯರನ್ನು ಹೊಂದಿರುವುದಾಗಿ ಬಾಯಿಬಿಟ್ಟಿದ್ದಾನೆ. ತನ್ನ ಮೊದಲ ಹೆಂಡತಿಯಿಂದ ನಾಲ್ಕು ಮಕ್ಕಳಿದ್ದಾರೆ ಮತ್ತು ಒಂದೂವರೆ ವರ್ಷದ ಹಿಂದೆ ಆತ ತೊರೆದ ಮತ್ತೊಬ್ಬ ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ ಎಂದು ಚೋತು ಕುಮಾರ ಹೇಳಿಕೊಂಡಿದ್ದಾನೆ.

ಚೋತು ಕುಮಾರ್ ಅವರು ಬರ್ಹತ್ ಪೊಲೀಸ್ ಠಾಣೆ ಪ್ರದೇಶದ ಜಾವತಾರಿ ಗ್ರಾಮದವರು. ಅವರ ಹೆಂಡತಿಯರಲ್ಲಿ ಒಬ್ಬರಾದ ಮಂಜು ಅವರ ಸಹೋದರ ವಿಕಾಸ್ ಸೋಮವಾರ ಸಂಜೆ ಜಮುಯಿ ನಿಲ್ದಾಣಕ್ಕೆ ಕೋಲ್ಕತ್ತಾಗೆ ಹೋಗುವಾಗ ಚೋತು ಕುಮಾರನ ಲವ್ವಿಡವ್ವಿ ತಿಳಿದುಬಂದಿದೆ.

ಮದುವೆಯಾಗಿ ಊರು ಬಿಡುಬಿಡುತ್ತಿದ್ದ ಆರ್ಕೆಸ್ಟ್ರಾ

ಮದುವೆಯಾಗಿ ಊರು ಬಿಡುಬಿಡುತ್ತಿದ್ದ ಆರ್ಕೆಸ್ಟ್ರಾ

ಪತ್ನಿ ಮಂಜು ಅವರ ತಾಯಿ (ಚೋತು ಅತ್ತೆ) ಕೋಬಿಯಾ ದೇವಿ ಅವರು 2018 ರಲ್ಲಿ ಮಗಳು ಮಂಜು ಹಾಗೂ ಚೋತು ಕುಮಾರನಿಗೆ ಮದುವೆ ಮಾಡಿದ್ದರು. ಇಬ್ಬರಿಗೂ ಇಬ್ಬರು ಮಕ್ಕಳಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಸುಮಾರು 1.5 ವರ್ಷಗಳ ಹಿಂದೆ ಈತ ಔಷಧವನ್ನು ತರುವ ನೆಪದಲ್ಲಿ ಮನೆಯಿಂದ ಹೊರಟು ಹೋಗಿದ್ದನು. ಆದರೆ ವಾಪಸ್ ಮನೆಗೆ ಹಿಂತಿರುಗಿರಲಿಲ್ಲ. ಆದರೆ ಒಂದುವರೆ ವರ್ಷದ ಬಳಿಕ ಚೋತು ಕುಮಾರ ರೈಲು ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದನು.

ಆಗ ವಿಕಾಸ್ 'ಇಲ್ಲಿ ನನ್ನ ಸಹೋದರಿ ಇಷ್ಟು ದಿನ ಕಾಯುತ್ತಿದ್ದಾಳೆ ಆದರೆ ನೀನು ಈ ಮಹಿಳೆಯೊಂದಿಗೆ ಓಡಾಡುತ್ತಿದ್ದೀಯಾ' ಎಂದು ಗಲಾಟೆ ಶುರು ಮಾಡಿದರು. ಕುಟುಂಬಸ್ಥರಿಗೆ ಮಾಹಿತಿ ನೀಡಿದನು. ಕೂಡಲೆ ಸ್ಥಳಕ್ಕೆ ಬಂದ ಮಂಜು ತಾಯಿ ಕೋಬಿಯಾ ದೇವಿ 'ಚೋತು ನಮಗೆ ಮೋಸ ಮಾಡಿದ್ದಾನೆ. ಅವರು ರಾಂಚಿಯ ನಿವಾಸಿ ಕಲಾವತಿ ದೇವಿಯನ್ನು ವಿವಾಹವಾದ. ಇಬ್ಬರಿಗೂ ನಾಲ್ಕು ಮಕ್ಕಳಿದ್ದಾರೆ. ಆದರೂ ಆತನಿಗೆ ನಾವು ಮಗಳನ್ನು ಕೊಟ್ಟು ಮದುವೆ ಮಾಡಿದ್ದೆವು' ಎಂದು ಕಣ್ಣೀರು ಹಾಕಿದ್ದಾರೆ.

ಅವಿವಾಹಿತನೆಂದು ನಂಬಿಸಿ ಮದುವೆ

ಅವಿವಾಹಿತನೆಂದು ನಂಬಿಸಿ ಮದುವೆ

ಚೋತು ಕುಮಾರ ದಿಯೋಘರ್ ಅವರ ಮಾ ಶಾರ್ಡಾ ಆರ್ಕೆಸ್ಟ್ರಾದಲ್ಲಿ ಗಾಯಕನಾಗಿ ಕೆಲಸ ಮಾಡುತ್ತಿದ್ದಾನೆ. ಹೀಗಾಗಿ ಈತ ಕಾರ್ಯಕ್ರಮಕ್ಕಾಗಿ ನಾನಾ ರಾಜ್ಯಗಳಿಗೆ ಭೇಟಿ ನೀಡುತ್ತಿದ್ದನು. ಈ ವೇಳೆ ಮೊದಲ ಬಾರಿಗೆ ಚಿನ್ವೆರಿಯಾ, ಎರಡನೇ ಸುಂದರತಂದ್, ಮೂರನೇ ರಾಂಚಿ, ನಾಲ್ಕನೇ ಸಂಗ್ರಾಂಪುರ್, ಐದನೇ ದೆಹಲಿ ಮತ್ತು ಜಾರ್ಖಂಡ್‌ನ ದಿಯೋಘರ್‌ನಲ್ಲಿ ಆರನೇ ವಿವಾಹವಾಗಿದ್ದಾನೆ. ಮಾತ್ರವಲ್ಲದೆ ಎಲ್ಲರೊಂದಿಗೆ ಮಕ್ಕಳನ್ನು ಹೊಂದಿದ್ದಾನೆ.

ರೈಲು ನಿಲ್ದಾಣದಲ್ಲಿ ಸಿಕ್ಕಿಬಿದ್ದ ಆರೋಪಿ

ರೈಲು ನಿಲ್ದಾಣದಲ್ಲಿ ಸಿಕ್ಕಿಬಿದ್ದ ಆರೋಪಿ

ದೂರುದಾರರು ಅವರ ಎರಡನೇ ಹೆಂಡತಿಯ ಕುಟುಂಬ ಸದಸ್ಯರು ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಷಯದಲ್ಲಿ ಇಲ್ಲಿಯವರೆಗೆ ಯಾವುದೇ ದೂರು ದಾಖಲಿಸಲಾಗಿಲ್ಲ. ದೂರು ದಾಖಲಿಸಿದರೆ, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಾರೆ. ಅವರು ಪ್ರದರ್ಶನ ನೀಡಲು ಹೋದಲ್ಲೆಲ್ಲಾ ಹಾಡುವ ಮೂಲಕ ಇತರ ಮಹಿಳೆಯರೊಂದಿಗೆ ಸಂಬಂಧ ಬೆಳೆಸಿದ್ದಾರೆ ಎಂದು ಪತ್ನಿ ಸಹೋದರ ವಿಕಾಸ್ ಆರೋಪಿಸಿದ್ದಾರೆ. ಮದುವೆಯಾದ ಸ್ಥಳಗಳಿಂದ ಈತ ಓಡಿ ಹೋಗಿರುವುದು ತಿಳಿದು ಬಂದಿದೆ.

English summary
Bihar's orchestra Chotu Kumara has 6 wives in 4 states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X