ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಫೋಟಕ ಸುದ್ದಿ: ಕೆಲವೇ ದಿನಗಳಲ್ಲಿ ನಿತೀಶ್ ಕುಮಾರ್ ರಾಜೀನಾಮೆ?!

|
Google Oneindia Kannada News

ಪಾಟ್ನಾ, ನವೆಂಬರ್ 01: ಬಿಹಾರದ ಜನಪ್ರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ನಿತೀಶ್ ಕುಮಾರ್ ಅವರು ಸದ್ಯದಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ನಿತೀಶ್ ಕುಮಾರ್ ಅವರ ಆಪ್ತರೊಬ್ಬರು ಸ್ಫೋಟಕ ಮಾಹಿತಿ ನೀಡಿದ್ದಾರೆ.

ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿರುವ ಅವರಿಗೆ ಮತ್ತೆ ಮುಂದುವರಿಯಲು ಇಷ್ಟವಿಲ್ಲ್. ಅವರ ತಾಳ್ಮೆಯ ಮಿತಿ ಮೀರಿದೆ ಎಂದು ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಹೇಳಿದ್ದಾರೆ.

ಲೋಕಸಭೆ ಚುನಾವಣೆ: ಬಿಹಾರದಲ್ಲಿ ಮತ್ತೆ ಒಂದಾದ ನಿತೀಶ್-ಅಮಿತ್ ಶಾ ಜೋಡಿಲೋಕಸಭೆ ಚುನಾವಣೆ: ಬಿಹಾರದಲ್ಲಿ ಮತ್ತೆ ಒಂದಾದ ನಿತೀಶ್-ಅಮಿತ್ ಶಾ ಜೋಡಿ

ರಾಷ್ಟ್ರೀಯ ಲೋಕ ಸಮತಾ ಪಕ್ಷದ ನಾಯಕರಾಗಿರುವ ಉಪೇಂದ್ರ ಕುಶ್ವಾಹ ಅವರು ನಿತೀಶ್ ಕುಮಾರ್ ಅವರ ಆಪ್ತ ಸ್ನೇಹಿತರು. ''ನಿತೀಶ್ ರನ್ನು ನನಗಿಂತ ಚೆನ್ನಾಗಿ ಅರ್ಥಮಾಡಿಕೊಂಡವರು ಯಾರೂ ಇಲ್ಲ. ಅವರ ತಾಳ್ಮೆಯ ಮಿತಿ ಮೀರಿದೆ. ಅವರು ಯಾವಾಗ ರಾಜೀನಾಮೆ ನೀಡುತ್ತಾರೋ ಹೇಳುವುದಕ್ಕಾಗುವುದಿಲ್ಲ' ಎಂದು ಕುಶ್ವಾಹ ಹೇಳಿದ್ದಾರೆ.

Bihar chief minister Nitish Kumar may step down soon

ಜೆಡಿಯುವಿನಲ್ಲಿ ನಂ.2 ಸ್ಥಾನಕ್ಕೇರಿದ ರಾಜಕೀಯ ತಂತ್ರಜ್ಞ ಪ್ರಶಾಂತ್ಜೆಡಿಯುವಿನಲ್ಲಿ ನಂ.2 ಸ್ಥಾನಕ್ಕೇರಿದ ರಾಜಕೀಯ ತಂತ್ರಜ್ಞ ಪ್ರಶಾಂತ್

'ಬಿಹಾರದಲ್ಲಿ ಸಾಕಷ್ಟು ಜೆಡಿಯು ಮುಖಂಡರಿಗೆ ಮತ್ತೊಂದು ಅವಧಿಗೆ ನರೇಂದ್ರ ಮೋದಿಯವರೇ ಪ್ರಧಾನಿಯಾಗುವುದು ಇಷ್ಟವಿಲ್ಲ. ಅದೂ ಅಲ್ಲದೆ ಈಗಾಗಲೇ ಲೋಕಸಭಾ ‌ಚುನಾವಣೆಯ ಟಿಕೆಟ್ ಹಂಚಿಕೆಯ ವಿಷಯದಲ್ಲಿ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಹೊಂದಾಣಿಕೆಯ ಕೊರತೆಯಿಂದಾಗಿ 67 ವರ್ಷದ ನಿತೀಶ್ ಕುಮಾರ್ ಅವರಿಗೂ ಸಾಕಾಗಿದೆ' ಎಂದು ಕುಶ್ವಾಹ ಹೇಳಿದ್ದಾರೆ.

English summary
The top post in Bihar may soon fall vacant and a new candidate will be required, Union Minister Upendra Kushwaha indicated on Wednesday. Chief Minister Nitish Kumar, he said, has reached a "saturation point in power and he wants to step down".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X