ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಮೊದಲ ಹಂತದ ಅಸೆಂಬ್ಲಿ ಸಮರದ ಅಂಕಿ ಅಂಶ

By Mahesh
|
Google Oneindia Kannada News

ಪಾಟ್ನಾ, ಅ.12: ಬಿಹಾರ ವಿಧಾನಸಭೆಯ ಮೊದಲ ಹಂತದ ಮತದಾನ ಸೋಮವಾರ ಆರಂಭಗೊಂಡೆ. ಬೆಳಗ್ಗೆ 7 ಗಂಟೆಯಿಂದ 49 ಕ್ಷೇತ್ರಗಳಲ್ಲಿ ಮತದಾನ ಜಾರಿಯಲ್ಲಿದೆ. ಸುಮಾರು 10 ಜಿಲ್ಲೆಗಳ ವ್ಯಾಪ್ತಿಯಲ್ಲಿವ ಈ 49 ಸ್ಥಾನ ಫಲಿತಾಂಶಕ್ಕಾಗಿ ನವೆಂಬರ್ 8(ಭಾನುವಾರ) ರ ತನಕ ಕಾಯಬೇಕಾಗಿದೆ.

ಬೆಳಗ್ಗೆ 11 ಗಂಟೆ ವೇಳೆಗೆ ಶೇ 27ರಷ್ಟು ಮತದಾನವಾಗಿರುವ ವರದಿ ಬಂದಿದೆ.ಮಧ್ಯಾಹ್ನ 2 ಗಂಟೆ ವೇಳೆಗೆ ಶೇ 46.37ರಷ್ಟು ಮತದಾನವಾಗಿದೆ.

243 ಸದಸ್ಯರ ಬಿಹಾರ ವಿಧಾನಸಭೆಯ ಅಧಿಕಾರಾವಧಿ ನವೆಂಬರ್ 29ಕ್ಕೆ ಮುಕ್ತಾಯವಾಗಲಿದ್ದು, ಅದಕ್ಕೆ ಮುನ್ನ ಹೊಸ ಶಾಸಕರ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಳ್ಳಬೇಕಾಗಿದೆ. ಒಟ್ಟು ಐದು ಹಂತಗಳಲ್ಲಿ ಬಿಹಾರದಲ್ಲಿ ಚುನಾವಣಾ ಸಮರ ನಡೆಯಲಿದೆ.

ಜೆಡಿಯು, ಆರ್‌ಜೆಡಿ, ಕಾಂಗ್ರೆಸ್ ಒಳಗೊಂಡ ಮಹಾಮೈತ್ರಿಕೂಟ ಹಾಗೂ ಬಿಜೆಪಿ ನಡುವೆ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಪೈಪೋಟಿಯ ನಿರೀಕ್ಷೆ ಇದೆ. ಅದರೆ, ಇತ್ತೀಚೆಗೆ ಮಹಾ ಮೈತ್ರಿಕೂಟದಿಂದ ಸಮಾಜವಾದಿ ಪಕ್ಷ ಹಿಂದೆ ಸರಿದಿರುವುದು ಎನ್ ಡಿಎ ಮಿತ್ರ ಪಕ್ಷಗಳಿಗೆ ನೆರವಾಗುವ ಸಾಧ್ಯತೆಯಿದೆ.[ಬಿಹಾರ ವಿಧಾನಸಭೆ ಚುನಾವಣೆ ವೇಳಾಪಟ್ಟಿ]

ಮೊದಲ ಹಂತದಲ್ಲಿ 130ಮಂದಿ ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನಲೆಯುಳ್ಳವರಾಗಿದ್ದರೆ, 7 ಮಂದಿ ಪಿಎಚ್ ಡಿ ಪಡೆದವರು, 2 ಎಂಬಿಎ, 6 ಜನ ಕಾನೂನು ಪದವೀಧರರು, 13 ಜನ ಸ್ನಾತಕೋತ್ತರ ಪದವೀಧರರು, ಇಬ್ಬರು ಡಾಕ್ಟರ್ಸ್, 9 ಜನ ಇಂಜಿನಿಯರ್ಸ್ ಕಣದಲ್ಲಿದ್ದಾರೆ. ಮಿಕ್ಕ ಅಂಕಿ ಅಂಶಗಳು ಹೀಗಿದೆ:

Bihar Assembly Elections 2015

ಅಭ್ಯರ್ಥಿಗಳು:
* ಮೊದಲ ಹಂತದಲ್ಲಿ 1.35.72,339 ಮಂದಿ ಮತದಾರರು (ಪುರುಷರು : 72,37,253; ಮಹಿಳೆಯರು 63,17,602; ಲೈಂಗಿಕ ಅಲ್ಪಸಂಖ್ಯಾತರು : 405) [ಮತ ಹಾಕಿದ್ರೆ ಸ್ಕೂಟಿ ಜೊತೆಗೆ ಪೆಟ್ರೋಲ್, ಲ್ಯಾಪ್ ಟಾಪ್ ಫ್ರೀ]
* 49 ಸ್ಥಾನಕ್ಕಾಗಿ 54 ಮಂದಿ ಮಹಿಳೆಯರೂ ಸೇರಿದಂತೆ ಒಟ್ಟು 583 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
* ಪಕ್ಷವಾರು: ಬಿಎಸ್ ಪಿ: 41, ಬಿಜೆಪಿ : 27, ಆರ್ ಜೆ ಡಿ : 17, ಎಲ್ ಜೆಪಿ : 13, ಕಾಂಗ್ರೆಸ್ : 8, ಆರ್ ಎಲ್ ಎಸ್ ಪಿ : 6, ಸಿಪಿಐ: 25, ಸಿಪಿಐ (ಎಂ) : 12. [ಬಿಹಾರದ ಸೀಟು ಹಂಚಿಕೆ ಲೆಕ್ಕಾಚಾರ, ಎಲ್ ಜೆಪಿ ಅಪಸ್ವರ]
* ಒಟ್ಟಾರೆ 146 ಮಂದಿ ಕೋಟ್ಯಧಿಪತಿಗಳು, ಜೆಡಿಯು 19, ಬಿಜೆಪಿ 18, ಆರ್ ಜೆಡಿ 11 ಅಭ್ಯರ್ಥಿಗಳು.
* ಒಟ್ಟು 130ಕ್ಕೂ ಅಧಿಕ ಅಭ್ಯರ್ಥಿಗಳು ಕ್ರಿಮಿನಲ್ ಕೇಸು ಎದುರಿಸುತ್ತಿದ್ದಾರೆ.

Bihar Assembly Elections 2015

ಮತದಾನ:
* ಮತದಾನ ನಡೆಯಲಿರುವ ಜಿಲ್ಲೆಗಳು: ಬಂಕಾ, ಭಗಲ್ ಪುರ್, ಬೆಗುಸರಾಯಿ, ಜಾಮುಯಿ, ಖಗಾರಿಯಾ, ಲಖಿಸರಾಯಿ, ಮುಂಗರ್, ನವಾಡಾ, ಸಮಷ್ಟಿಪುರ್, ಶೇಖ್ ಪುರ್. [ಸಮರಕ್ಕೂ ಮುನ್ನವೇ ಹಿಂದೆಸರಿದ ಮೈತ್ರಿ ಕೂಟದ ಕಿಂಗ್]
* ತಾರಾಪುರ, ಜಮಾಲ್​ಪುರ, ಸೂರ್ಯಗ್ರಹ, ರಾಜೌಲಿ (ಪರಿಶಿಷ್ಟ ಜಾತಿ), ಗೋವಿಂದಪುರ, ಸಿಕಂದರ (ಪರಿಶಿಷ್ಟ ಜಾತಿ), ಜಮುಯಿ, ಜಜ್ಹಾ ಮತ್ತು ಚಕಾಯಿ ಈ 9 ಕ್ಷೇತ್ರಗಳಲ್ಲಿ ಬೆಳಗ್ಗೆ 7ಕ್ಕೆ ಆರಂಭಗೊಂಡ ಮತದಾನ ಮಧ್ಯಾಹ್ನ 3 ಗಂಟೆವರೆಗೆ ನಡೆಯುವುದು.
* ಅಲೌಲಿ (ಪರಿಶಿಷ್ಟ ಜಾತಿ), ಬೆಲೆದೌರ್, ಕಟೋರಿಯಾ (ಪರಿಶಿಷ್ಟ ಪಂಗಡ), ಬೆಲ್ಹಾರ್ ಈ ನಾಲ್ಕು ಕ್ಷೇತ್ರಗಳಲ್ಲಿ ಸಂಜೆ 4 ಗಂಟೆಗೆ ಮತದಾನ ಮುಕ್ತಾಯಗೊಳ್ಳಲಿದೆ. [ಬೆಂಗಳೂರಲ್ಲಿರುವ ಬಿಹಾರಿಗಳಿಗೆ ಗಾಳ ಹಾಕಿದ ಬಿಜೆಪಿ]

Bihar Assembly Elections 2015

* ಉಳಿದ 36 ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯುವುದು.
* ಮತದಾನ ಕೇಂದ್ರ : 13,212 ಕಾಯಲು 1.2 ಲಕ್ಷ ಪ್ಯಾರಾ ಮಿಲಿಟರಿ ದಳ, 5 ಹೆಲಿ ಕಾಪ್ಪರ್, 3 ವೈಮಾನಿಕ ವಾಹನ, 33 ಮೋಟರ್ ಬೋಟ್ ಬಳಕೆ.
* 935 ವಿಡಿಯೋ ಕೆಮೆರಾ, 339 ಆಂಡ್ರಾಯ್ಡ್ ಮೊಬೈಲ್ ಫೋನ್ ಬಳಸಿ ಸುರಕ್ಷಿತ, ಸರಳ, ಪಾರದರ್ಶಕ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. [ಬಿಹಾರ ತಾಜಾ ಸಮೀಕ್ಷೆ: ಭರ್ಜರಿ ಜಯದತ್ತ ಬಿಜೆಪಿ ಮೈತ್ರಿಕೂಟ]

* ಈ ಹಿಂದಿನ ಫಲಿತಾಂಶ: 2010ರಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು(ಬಿಜೆಪಿ ಜತೆ ಮೈತ್ರಿ) 29 ಗಳಿಸಿತ್ತು. ಈ ಬಾರಿ ಎನ್ ಡಿಎ ಮೈತ್ರಿ ಕೂಟಕ್ಕೆ ವಿರುದ್ಧವಾಗಿ ಲಾಲೂ ಪ್ರಸಾದ್ ಯಾದವ್ ಹಾಗೂ ನಿತೀಶ್ ಕುಮಾರ್ ನಿಂತಿದ್ದಾರೆ.
* 243 ಅಸೆಂಬ್ಲಿ ಸ್ಥಾನಗಳ ಬಿಹಾರ ಚುನಾವಣೆ ಫಲಿತಾಂಶ ನವೆಂಬರ್ 8 (ಭಾನುವಾರ) ನಡೆಯಲಿದೆ.

English summary
Bihar Assembly Elections 2015: Know all about 1st phase polls and candidates. Bihar is holding the first phase of assembly elections 2015 today (Monday, Oct 12) for 49 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X