ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಅಸೆಂಬ್ಲಿ ಸಮರ ಎರಡನೇ ಹಂತದ ಫೈಟ್

By Mahesh
|
Google Oneindia Kannada News

ಪಾಟ್ನ, ಅ.16: ಬಿಹಾರ ವಿಧಾನಸಭೆಯ ಎರಡನೇ ಹಂತದ ಮತದಾನ ಶುಕ್ರವಾರ ಆರಂಭಗೊಂಡಿದೆ. ಬೆಳಗ್ಗೆ 7 ಗಂಟೆಯಿಂದ 32 ಕ್ಷೇತ್ರಗಳಲ್ಲಿ ಮತದಾನ ಜಾರಿಯಲ್ಲಿದೆ. 6 ಜಿಲ್ಲೆಗಳ ವ್ಯಾಪ್ತಿಯಲ್ಲಿ ನಡೆದಿರುವ ಮತದಾನದಲ್ಲಿ 456ರ ಅದೃಷ್ಟ ಪರೀಕ್ಷೆಯಾಗುತ್ತಿದೆ. ಫಲಿತಾಂಶಕ್ಕಾಗಿ ನವೆಂಬರ್ 8(ಭಾನುವಾರ) ರ ತನಕ ಕಾಯಬೇಕಾಗಿದೆ.

ಬೆಳಗ್ಗೆ 11 ಗಂಟೆ ವೇಳೆಗೆ ಶೇ 30ರಷ್ಟು ಮತದಾನವಾಗಿರುವ ವರದಿ ಬಂದಿದೆ.ದಿನದ ಅಂತ್ಯಕ್ಕೆ ಶೇ 55ರಷ್ಟು ಮತದಾನವಾಗಿದೆ.

ಬಿಹಾರ ವಿಧಾನಸಭೆಯ ಮೊದಲ ಹಂತದ ಮತದಾನ ಅಕ್ಟೋಬರ್ 12ರಂದು 49 ಕ್ಷೇತ್ರದಲ್ಲಿ ನಡೆಯಿತು. ಸುಮಾರು ಶೇ 57ರಷ್ಟು ಮತದಾನವಾಗಿದೆ. [ಬಿಹಾರ ವಿಧಾನಸಭೆ ಚುನಾವಣೆ ವೇಳಾಪಟ್ಟಿ]

Bihar Assembly Elections 2015

243 ಸದಸ್ಯರ ಬಿಹಾರ ವಿಧಾನಸಭೆಯ ಅಧಿಕಾರಾವಧಿ ನವೆಂಬರ್ 29ಕ್ಕೆ ಮುಕ್ತಾಯವಾಗಲಿದ್ದು, ಅದಕ್ಕೆ ಮುನ್ನ ಹೊಸ ಶಾಸಕರ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಳ್ಳಬೇಕಾಗಿದೆ. ಒಟ್ಟು ಐದು ಹಂತಗಳಲ್ಲಿ ಬಿಹಾರದಲ್ಲಿ ಚುನಾವಣಾ ಸಮರ ನಡೆಯಲಿದೆ.

ಜೆಡಿಯು, ಆರ್‌ಜೆಡಿ, ಕಾಂಗ್ರೆಸ್ ಒಳಗೊಂಡ ಮಹಾಮೈತ್ರಿಕೂಟ ಹಾಗೂ ಬಿಜೆಪಿ ನಡುವೆ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಪೈಪೋಟಿಯ ನಿರೀಕ್ಷೆ ಇದೆ. ಅದರೆ, ಇತ್ತೀಚೆಗೆ ಮಹಾ ಮೈತ್ರಿಕೂಟದಿಂದ ಸಮಾಜವಾದಿ ಪಕ್ಷ ಹಿಂದೆ ಸರಿದಿರುವುದು ಎನ್ ಡಿಎ ಮಿತ್ರ ಪಕ್ಷಗಳಿಗೆ ನೆರವಾಗುವ ಸಾಧ್ಯತೆಯಿದೆ.ಪಕ್ಷಗಳಿಗೆ ನೆರವಾಗುವ ಸಾಧ್ಯತೆಯಿದೆ. [ಮೊದಲ ಹಂತದ ಅಸೆಂಬ್ಲಿ ಸಮರದ ಅಂಕಿ ಅಂಶ]

Bihar Assembly Elections 2015

ಅಭ್ಯರ್ಥಿಗಳು: 32 ಮಹಿಳೆಯರು ಸೇರಿದಂತೆ 456
* ಅಭ್ಯರ್ಥಿಗಳ ಪೈಕಿ 142 ಮಂದಿ ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿದ್ದಾರೆ.

ಪ್ರಮುಖ ಅಭ್ಯರ್ಥಿಗಳು :
ಎಚ್ಎಎಂ ಅಧ್ಯಕ್ಷ ಜಿತಿನ್ ರಾಮ್ ಮಾಂಝಿ (ಮಖ್ದಮ್ ಪುರ್ ಹಾಗೂ ಇಮಾಮ್ ಗಂಜ್ ನಲ್ಲಿ ಸ್ಪರ್ಧೆ), ಬಿಜೆಪಿ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಅಭ್ಯರ್ಥಿ ಪ್ರೇಮ್ ಕುಮಾರ್, ಸ್ಪೀಕರ್ ಉದಯ್ ನಾರಾಯಣ್ ಚೌಧರಿ. [ಸಮೀಕ್ಷೆ: ಭರ್ಜರಿ ಜಯದತ್ತ ಬಿಜೆಪಿ ಮೈತ್ರಿಕೂಟ]

ಎರಡನೇ ಹಂತದಲ್ಲಿ 8,61,387 ಮಂದಿ ಮತದಾರರು (ಪುರುಷರು : 45,71,805; ಮಹಿಳೆಯರು 40,14,585; ಲೈಂಗಿಕ ಅಲ್ಪಸಂಖ್ಯಾತರು : 314)

ಪಕ್ಷವಾರು: ಜೆಡಿಯು: 13,ಬಿಜೆಪಿ:16, ಆರ್ ಜೆ ಡಿ : 13, ಎಲ್ ಜೆಪಿ : 3, ಕಾಂಗ್ರೆಸ್ : 6, ಆರ್ ಎಲ್ ಎಸ್ ಪಿ : 6, ಎಚ್ಎಎಂ : 7.

Bihar Assembly Elections 2015

ಮತದಾನ ನಡೆಯಲಿರುವ ಜಿಲ್ಲೆಗಳು: ಅರ್ವಾಲ್, ಔರಂಗಾಬಾದ್, ಗಯಾ, ಜೆಹನಾಬಾದ್, ಕೈಮೂರ್, ರೊಹ್ತಾಸ್(ಎಲ್ಲವೂ ನಕ್ಸಲ್ ಪೀಡಿತ ಜಿಲ್ಲೆಗಳು) [ಮತ ಹಾಕಿದ್ರೆ ಸ್ಕೂಟಿ ಜೊತೆಗೆ ಪೆಟ್ರೋಲ್, ಲ್ಯಾಪ್ ಟಾಪ್ ಫ್ರೀ]

ಮತದಾನ ಕೇಂದ್ರ : 9,119.
* 243 ಅಸೆಂಬ್ಲಿ ಸ್ಥಾನಗಳ ಬಿಹಾರ ಚುನಾವಣೆ ಫಲಿತಾಂಶ ನವೆಂಬರ್ 8 (ಭಾನುವಾರ) ನಡೆಯಲಿದೆ.

English summary
Bihar is holding second phase of assembly elections on Friday, Oct 16. Bihar assembly polls are a neck-to-neck contest between the NDA-led alliance of BJP-LJP-HAM and the Grand Alliance of Congress-JDU-RJD.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X