ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ತಾಜಾ ಸಮೀಕ್ಷೆ: ಭರ್ಜರಿ ಜಯದತ್ತ ಬಿಜೆಪಿ ಮೈತ್ರಿಕೂಟ

|
Google Oneindia Kannada News

ನವದೆಹಲಿ, ಪಾಟ್ನಾ ಅ 6: ಈ ಹಿಂದಿನ ಎಲ್ಲಾ ಸಮೀಕ್ಷೆಗಳಲ್ಲಿ ವ್ಯಕ್ತವಾಗುತ್ತಿದ್ದಂತೇ, ದಿನದಿಂದ ದಿನಕ್ಕೆ ಬಿಜೆಪಿ ನೇತೃತ್ವದ ಎನ್ದಿಎ ಮೈತ್ರಿಕೂಟ ತನ್ನ ಶಕ್ತಿಯನ್ನು ವೃದ್ದಿಸಿಗೊಳ್ಳಿಸುತ್ತಿರುವುದು ಮತ್ತೊಂದು ತಾಜಾ ಸಮೀಕ್ಷೆಯಲ್ಲೂ ವ್ಯಕ್ತವಾಗಿದೆ.

ಜೀನ್ಯೂಸ್ 'ಜನತಾ ಕೀ ಮೂಡ್' ಸಮೀಕ್ಷೆಯ ಪ್ರಕಾರ ಎನ್ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಲಭಿಸಲಿದ್ದು, ಮಹಾಮೈತ್ರಿಕೂಟ ತೀವ್ರ ಹಿನ್ನಡೆ ಅನುಭವಿಸಲಿದೆ. (ಬೆಂಗಳೂರಲ್ಲಿರುವ ಬಿಹಾರಿಗಳಿಗೆ ಬಿಜೆಪಿ ಗಾಳ)

ಜೀನ್ಯೂಸ್ ಪತ್ರಿಕಾ ಹೇಳಿಕೆಯ ಪ್ರಕಾರ ಎನ್ಡಿಎ ಮೈತ್ರಿಕೂಟಕ್ಕೆ ಶೇ. 53.8, ಮಹಾಮೈತ್ರಿಕೂಟಕ್ಕೆ ಶೇ. 40.2 ಮತ್ತು ಇತರರಿಗೆ ಶೇ. 6ರಷ್ಟು ಮತಗಳು ಲಭಿಸಲಿವೆ.

ಈ ಹಿಂದೆ ಹಲವು ಮಾಧ್ಯಮ ಮತ್ತು ವಾಹಿನಿಗಳು ನಡೆಸಿದ ಜಂಟಿ ಸಮೀಕ್ಷೆಯಲ್ಲೂ ಎನ್ಡಿಎ ಮತ್ತು ಮೈತ್ರಿಕೂಟದ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು.

ಜೊತೆಗೆ, ದಿನದಿಂದ ದಿನಕ್ಕೆ ಎನ್ಡಿಎ ಮೈತ್ರಿಕೂಟ ಪಡೆಯುವ ಸರಾಸರಿ ಶೇಕಡವಾರು ವೋಟಿನ ಪ್ರಮಾಣದಲ್ಲೂ ಗಮನಾರ್ಹ ಬದಲಾವಣೆಯಾಗಿದ್ದವು.

243 ಶಾಸಕರ ಬಲದ ಬಿಹಾರ ಅಸೆಂಬ್ಲಿಗೆ ಅಕ್ಟೋಬರ್ 12, 16, 28, ನವೆಂಬರ್ 1 ಮತ್ತು ಐದಕ್ಕೆ ಮತದಾನ ನಡೆಯಲಿದೆ, ಫಲಿತಾಂಶ ನವೆಂಬರ್ ಎಂಟರಂದು ಹೊರಬೀಳಲಿದೆ.

ತಾಜಾ ಜೀನ್ಯೂಸ್ ಸಮೀಕ್ಷೆಯ ಪ್ರಕಾರ, ಯಾರಿಗೆ ಎಷ್ಟು ಸ್ಥಾನ ಸಿಗಬಹುದು?

ಪ್ರಥಮ ಹಂತದ ಮತದಾನ

ಪ್ರಥಮ ಹಂತದ ಮತದಾನ

ಸಮೀಕ್ಷೆ ಪ್ರಕಾರ ಎನ್ಡಿಎ ಮೈತ್ರಿಕೂಟ ಮೊದಲ ಹಂತದ ಚುನಾವಣೆಯಲ್ಲಿ (ಅಕ್ಟೋಬರ್ 12, 49 ಕ್ಷೇತ್ರ) ಉತ್ತಮ ಸಾಧನೆ ತೋರಲಿದೆ. ಎನ್ಡಿಎ ಶೇ. 53.8 ಮೈತ್ರಿಕೂಟಕ್ಕೆ ಶೇ. 40.2ರಷ್ಟು ಮತ ಲಭಿಸಲಿದೆ.

ಉಳಿದ ಹಂತದ ಚುನಾವಣೆ

ಉಳಿದ ಹಂತದ ಚುನಾವಣೆ

ಇತರ ನಾಲ್ಕು ಹಂತದ ಚುನಾವಣೆಯಲ್ಲೂ ಎನ್ಡಿಎ ಉತ್ತಮ ಸಾಧನೆ ಮಾಡಲಿದೆ. ಪ್ರಮುಖವಾಗಿ ನಕ್ಸಲ್ ಪೀಡಿತ ಕ್ಷೇತ್ರಗಳಲ್ಲಿ ಎನ್ಡಿಎ ಸಾಧನೆ ಗಮನಾರ್ಹವಾಗಲಿದೆ ಎಂದು ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ಮುಸ್ಲಿಂ ಮತಗಳಿಕೆಯಲ್ಲಿ ನಿತೀಶ್ ಮುಂದು

ಮುಸ್ಲಿಂ ಮತಗಳಿಕೆಯಲ್ಲಿ ನಿತೀಶ್ ಮುಂದು

ಒಟ್ಟಾರೆ ಮುಸ್ಲಿಂ ಮತಬ್ಯಾಂಕಿನ ಮೇಲೆ ನಿತೀಶ್ ಕುಮಾರ್, ಲಾಲೂ ನೇತೃತ್ವದ ಮಹಾಮೈತ್ರಿಕೂಟ ಹಿಡಿತ ಜಾಸ್ತಿಯಿದೆ. ಎನ್ಡಿಎ ಮೈತ್ರಿಕೂಟಕ್ಕೆ ಶೇ. 35.9 ಮತ್ತು ಮಹಾಮೈತ್ರಿಕೂಟಕ್ಕೆ ಶೇ. 57.9 ಮತಗಳು ಲಭಿಸುವ ಸಾಧ್ಯತೆಯಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಸಮೀಕ್ಷೆ ಪ್ರಕಾರ ಯಾರಿಗೆ ಎಷ್ಟು?

ಸಮೀಕ್ಷೆ ಪ್ರಕಾರ ಯಾರಿಗೆ ಎಷ್ಟು?

ಒಟ್ಟು ಸ್ಥಾನಗಳು - 243
ಎನ್ಡಿಎ ಮೈತ್ರಿಕೂಟ - 147
ಮಹಾಮೈತ್ರಿಕೂಟ - 64

32 ಕ್ಷೇತ್ರದಲ್ಲಿ ಎರಡು ಮೈತ್ರಿಕೂಟ ಮತ್ತು ಪಕ್ಷೇತರರ ನಡುವೆ ತುರುಸಿನ ಸ್ಪರ್ಧೆ ಏರ್ಪಡಲಿದೆ.

ಜನತಾ ಕೀ ಮೂಡ್

ಜನತಾ ಕೀ ಮೂಡ್

ದೂರವಾಣಿ ಮೂಲಕ 35 ಸಾವಿರಕ್ಕೂ ಹೆಚ್ಚು ಜನರ ಅಭಿಪ್ರಾಯ ಕ್ರೋಢೀಕರಿಸಿ ಈ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯಲ್ಲಿ ಶೇ. 0.6 ಹೆಚ್ಚುಕಮ್ಮಿಯಾಗುವ ಸಾಧ್ಯತೆಯಿದೆ ಎಮ್ದು ಜೀನ್ಯೂಸ್ ಹೇಳಿದೆ.

English summary
BJP-led NDA alliance to register comfortable victory in Bihar Assembly Election: As per Zee News latest Janta Ka Mood Survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X