• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿತೀಶ್ ಸರ್ಕಾರಕ್ಕೆ ಅಧಿಕಾರದ ಮದ ಮತ್ತು ದರ್ಪ: ಸೋನಿಯಾ ಗಾಂಧಿ

|

ನವದೆಹಲಿ, ಅಕ್ಟೋಬರ್ 27: ಅಧಿಕಾರದ ಮದ ಹಾಗೂ ದರ್ಪದಿಂದ ನಿತೀಶ್ ಕುಮಾರ್ ಸರ್ಕಾರ ಮೆರೆಯುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಬಿಹಾರ ಚುನಾವಣೆಯ ಹಿಂದಿನ ದಿನವಾದ ಮಂಗಳವಾರ ವಿಡಿಯೋ ಸಂದೇಶ ಬಿಡುಗಡೆಮಾಡಿರುವ ಸೋನಿಯಾ, ಕಾಂಗ್ರೆಸ್, ಆರ್‌ಜೆಡಿ ಮತ್ತು ಎಡಪಕ್ಷಗಳನ್ನು ಒಳಗೊಂಡಿರುವ ಮಹಾಘಟಬಂಧನ ಮೈತ್ರಿಕೂಟಕ್ಕೆ ಮತ ನೀಡುವಂತೆ ಮನವಿ ಮಾಡಿದ್ದಾರೆ. ಮಹಾಮೈತ್ರಿಕೂಟದ ಸರ್ಕಾರವು ನವ ಬಿಹಾರವನ್ನು ಕಟ್ಟಲಿದೆ ಎಂದು ಹೇಳಿದ್ದಾರೆ.

ನರೇಂದ್ರ ಮೋದಿಗೆ 6 ಮಂದಿ ಒಡಹುಟ್ಟಿದವರು:ತೇಜಸ್ವಿ ಯಾದವ್

'ಬಿಹಾರದ ನನ್ನ ಆತ್ಮೀಯ ಸಹೋದರ ಮತ್ತು ಸಹೋದರಿಯೇ. ಬಿಹಾರದ ಸರ್ಕಾರ ಹಾದಿತಪ್ಪಿದೆ. ಅಧಿಕಾರದ ಮದ ಮತ್ತು ತನ್ನ ದರ್ಪದಿಂದಾಗಿ ಈಗಿನ ಬಿಹಾರ ಸರ್ಕಾರ ತನ್ನ ದಾರಿಯಿಂದ ಬೇರೆಲ್ಲೋ ಸಾಗಿದೆ. ಒಳ್ಳೆಯದನ್ನೂ ಹೇಳುತ್ತಿಲ್ಲ, ಒಳ್ಳೆಯ ಕೆಲಸವನ್ನೂ ಮಾಡುತ್ತಿಲ್ಲ. ಕಾರ್ಮಿಕರು ಅಸಹಾಯಕರಾಗಿದ್ದಾರೆ. ರೈತರು ಕಂಗಾಲಾಗಿದ್ದಾರೆ. ಯುವಕರು ನಿರಾಶೆಗೊಂಡಿದ್ದಾರೆ. ಜನರು ಕಾಂಗ್ರೆಸ್‌ ಮಹಾಘಟಬಂಧನದ ಜತೆಗೆ ಇದ್ದಾರೆ. ಇದು ಬಿಹಾರಕ್ಕೆ ಕರೆ' ಎಂದು ಸೋನಿಯಾ ಅವರು ಐದು ನಿಮಿಷಗಳ ಭಾಷಣದಲ್ಲಿ ಹೇಳಿದ್ದಾರೆ.

ಇಂದು ಬಿಹಾರವು ಬಿಕ್ಕಟ್ಟಿನಲ್ಲಿದೆ. ದಲಿತರು, ಹಿಂದುಳಿದ ಜನರು ನಿರಂತರ ಶೋಷಣೆಗೆ ಒಳಗಾಗುತ್ತಿದ್ದಾರೆ. ಬಿಹಾರ ಮತ್ತು ಕೇಂದ್ರದಲ್ಲಿನ ಸರ್ಕಾರಗಳನ್ನು 'ಬಂದಿ ಸರ್ಕಾರಗಳು'. ಅವರಿಗೆ ಆರ್ಥಿಕ ಬಿಕ್ಕಟ್ಟಿಗೆ ಎಡೆಮಾಡಿಕೊಡುವ ನೋಟು ನಿಷೇಧ, ಲಾಕ್‌ಡೌನ್‌ಗಳು ಮಾತ್ರವೇ ತಿಳಿದಿದೆ ಎಂದು ಟೀಕಿಸಿದ್ದಾರೆ.

243 ವಿಧಾನಸಭೆ ಸೀಟುಗಳಲ್ಲಿ ಕಾಂಗ್ರೆಸ್ 70 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಅಕ್ಟೋಬರ್ 28ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಇದುವರೆಗೂ ಸೋನಿಯಾ ಗಾಂಧಿ ಯಾವುದೇ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿಲ್ಲ. ಅನಾರೋಗ್ಯದ ಕಾರಣ ಅವರು ಉಳಿದ ಹಂತದ ಪ್ರಚಾರಗಳಲ್ಲಿ ಸಹ ಪಾಲ್ಗೊಳ್ಳುವುದು ಅನುಮಾನ.

English summary
Bihar Assembly Election 2020: Congress president Sonia Gandhi on Tuesday said, Nitish Kumar government is high on power and ego.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X