ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ:110 ಅಡಿ ಆಳದ ಕೊಳವೆ ಬಾವಿಯಲ್ಲಿ ಪುಟ್ಟ ಕಂದನ ಆರ್ತನಾದ

|
Google Oneindia Kannada News

ಮುಂಗೇರ್, ಆಗಸ್ಟ್ 01: ಮೂರು ವರ್ಷ ವಯಸ್ಸಿನ ಬಾಲಕಿಯೊಬ್ಬಳು 110 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದ ಘಟನೆ ಬಿಹಾರದ ಮುಂಗೇರ್ ಎಂಬಲ್ಲಿ ನಡೆದಿದೆ.

ಮಂಗಳವಾರ ಮಧ್ಯಾಹ್ನದ ಸಮಯದಲ್ಲಿ ಬಾಲಕಿ ಬಾವಿಗೆ ಬಿದ್ದಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ಬಾಲಕಿ ಸುರಕ್ಷಿತವಾಗಿದ್ದಾಳೆ ಎಂದು ರಕ್ಷಣಾ ತಂಡ ತಿಳಿಸಿದೆ.

ಝಂಜರವಾಡದಲ್ಲಿ ಕೊಳವೆಬಾವಿಗೆ ಬಿದ್ದಿದ್ದ ಕಾವೇರಿ ಕಣ್ಣು ತೆರೆಯಲಿಲ್ಲಝಂಜರವಾಡದಲ್ಲಿ ಕೊಳವೆಬಾವಿಗೆ ಬಿದ್ದಿದ್ದ ಕಾವೇರಿ ಕಣ್ಣು ತೆರೆಯಲಿಲ್ಲ

ಬಿಹಾರದ ಮುಂಗೇರ್ ನ ಮುರ್ಜಿಯಾಚಕ್ ಎಂಬಲ್ಲಿ ಈ ಘಟನೆ ನಡೆದಿದ್ದು, ಬಾವಿಗೆ ಬಿದ್ದ ಮೂರು ವರ್ಷ ವಯಸ್ಸಿನ ಬಾಲಕಿಯನ್ನು ಸನ್ನೋ ಎಂದು ಗುರುತಿಸಲಾಗಿದೆ.

Bihar: 3 year old girl fell into 110 feet borewell, Rescue operations underway

ಮಗುವಿಗೆ ಈಗಾಗಲೇ ಆಮ್ಲಜನಕ ಪೂರೈಕೆ ಮಾಡಲಾಗಿದ್ದು, ರಕ್ಷಣೆಗೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ದಳದ ಅಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ಕಳೆದ ವರ್ಷ ಆಗಸ್ಟ್ ನಲ್ಲಿ ಆಂಧ್ರಪ್ರದೇಶದ ಗುಂಟೂರಿನಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಶಶ ವಯಸ್ಸಿನ ಮಗುವನ್ನು ಸತತ 12 ಗಂಟೆಯ ಕಾರ್ಯಾಚರಣೆಯ ನಂತರ ರಕ್ಷಿಸಲಾಗಿತ್ತು.

2017 ರ ಏಪ್ರಿಲ್ ನಲ್ಲಿ ಬೆಳಗಾವಿಯ ಅಥಣಿಯಲ್ಲಿ 6 ವರ್ಶಶ ವಯಸ್ಸಿನ ಕಾವೇರಿ ಎಂಬ ಮಗು ಕೊಳವೆ ಬಾವಿಗೆ ಬಿದ್ದಿದ್ದಳು. ಸತತ 54 ಗಂಟೆಗಳ ಕಾರ್ಯಾಚರಣೆಯ ನಂತರವೂ ಆಕೆಯನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ. ತೆರೆದ ಕೊಳವೆ ಬಾವಿಯಿಂದಾಗಿ ಅಮಾಯಕ ಮಕ್ಕಳು ಜೀವ ಕಳೆದುಕೊಳ್ಳುವಂಥ ಸನ್ನಿವೇಶಗಳು ಪದೇ ಪದೇ ನಡೆಯುತ್ತಲೇ ಇದ್ದರೂ ಇವುಗಳನ್ನು ಮುಚ್ಚಿಸುವ ಕುರಿತು ಆಯಾ ಜಮೀನಿನ ಮಾಲಿಕರು, ಸರ್ಕಾರಗಳು ಯೋಚಿಸುತ್ತಿಲ್ಲ ಎಂಬುದು ಖೇದಕರ ವಿಷಯ.

English summary
Bihar: Rescue operations underway for a 3-year-old girl who is stuck in a 110 feet borewell in Munger since yesterday afternoon. DIG Jitendra Mishra says, 'SDRF (State Disaster Response Force) team has dug up to 40 feet. The girl is safe'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X