ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಮಾನಿಕ ದಾಳಿಯಿಂದ ಸರ್ಜಿಕಲ್ ಸ್ಟ್ರೈಕ್ ಗಿಂತ ದೊಡ್ಡ ಮಟ್ಟದ ಹಾನಿ

|
Google Oneindia Kannada News

Recommended Video

Surgical Strike 2: ವೈಮಾನಿಕ ದಾಳಿಯಿಂದ ಸರ್ಜಿಕಲ್ ಸ್ಟ್ರೈಕ್ ಗಿಂತ ದೊಡ್ಡ ಮಟ್ಟದ ಹಾನಿ | Oneindia Kannada

ನವದೆಹಲಿ, ಫೆಬ್ರವರಿ 26: ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದ ಖೈಬರ್​ಕಣಿವೆಯ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಮಂಗಳವಾರ ಬೆಳಗ್ಗೆ ಭಾರತೀಯ ವಾಯು ಸೇನೆ ನಡೆಸಿದ ವೈಮಾನಿಕ ದಾಳಿಯಿಂದ ಸರ್ಜಿಕಲ್ ಸ್ಟ್ರೈಕ್ ಗಿಂತ ದೊಡ್ಡಮಟ್ಟದ ಹಾನಿಯಾಗಿದೆ ಎಂದು ಸೇನಾ ಮೂಲಗಳಿಂದ ತಿಳಿದು ಬಂದಿದೆ.

ಭಾರತೀಯ ವಾಯುಪಡೆಯ ಮಿರಾಜ್​ಜೆಟ್ ಯುದ್ಧ ವಿಮಾನ ಬಳಸಿ,​ ಪಾಕಿಸ್ತಾನದ ಖೈಬರ್​ಪಖ್ತುಂಖ್ವಾ ಪ್ರಾಂತ್ಯದ ಬಾಲಕೋಟ್ ನಿಖರವಾದ ಸ್ಥಳವನ್ನು ಗುರುತಿಸಿ, ಉಗ್ರರ ಅಡಗುತಾಣಗಳ ಮೇಲೆ ಮಾತ್ರ ದಾಳಿ ನಡೆಸಲಾಗಿದೆ. ಉಳಿದಂತೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಮುಜಾಫರಬಾದ್ ಹಾಗೂ ಚಕೋತಿ ಮೇಲೆ ದಾಳಿ ನಡೆಸಲಾಗಿದೆ.

ಬಾಲಕೋಟ್ ಎಲ್ಲಿದೆ? ಲಾಡೆನ್ ಅಡಗುತಾಣದಲ್ಲೇ ಜೆಇಎಂ ಉಗ್ರರು? ಬಾಲಕೋಟ್ ಎಲ್ಲಿದೆ? ಲಾಡೆನ್ ಅಡಗುತಾಣದಲ್ಲೇ ಜೆಇಎಂ ಉಗ್ರರು?

ಭಾರತದ ದಾಳಿಯನ್ನು ಗುರುತಿಸಿದ ಪಾಕಿಸ್ತಾನ ಅಮೆರಿಕ ಎಫ್​ -16 ವಿಮಾನಗಳನ್ನ ಕಳುಹಿಸಿ ಮಿರಾಜ್ ಹೊಡೆದುರುಳಿಸಿರುವ ಯೋಜನೆ ರೂಪಿಸಿತ್ತು. ಎಫ್ 16 ಟೆಕ್​ ಆಫ್​ಆಗುವಷ್ಟರಲ್ಲಿ ಮಿರಾಜ್​ ತನ್ನ ಕೆಲಸ ಮುಗಿಸಿ ಭಾರತದ ನೆಲಕ್ಕೆ ವಾಪಸ್​ಆಗಿತ್ತು.

Bigger, better, deadlier: Why the air strike is more lethal than the surgical strike

ವ್ಯತಿರಿಕ್ತ ವಾತಾವರಣದಲ್ಲೂ ಕಾರ್ಯಾಚರಣೆ ನಡೆಸಬಲ್ಲ ಮಿರಾಜ್​2000 ವಿಮಾನಗಳನ್ನೇ ಬಳಸುವ ಮೂಲಕ ಬಾಲಕೋಟ್ ನ ಜನವಸತಿ ಪ್ರದೇಶದಿಂದ ದೂರದಲ್ಲಿ ನೆಲೆಸಿದ್ದ ಉಗ್ರರ ಮೇಲೆ ನಿಖರವಾಗಿ ದಾಳಿ ನಡೆಸಲು ಸಾಧ್ಯವಾಗಿದೆ.

ಉರಿ ದಾಳಿಗಿಂತ ದೊಡ್ಡದು: 2016ರ ಸೆಪ್ಟೆಂಬರ್ 29ರಂದು ಗಡಿ ನಿಯಂತ್ರಣ ರೇಖೆ (ಎಲ್ ಒಸಿ) ಸಮೀಪವಿದ್ದ ಕುಪ್ವಾರ ಹಾಗೂ ಪೂಂಚ್ ಪ್ರದೇಶದಲ್ಲಿ ನಡೆಸಲಾದ ಸರ್ಜಿಕಲ್ ಸ್ಟ್ರೈಕ್ ಗಿಂತ ಬಾಲಕೋಟ್ ದಾಳಿ ದೊಡ್ಡದು.

ಪುಲ್ವಾಮಾ ಪ್ರತೀಕಾರ LIVE:ನೂರಾರು ಜೈಷ್ ಉಗ್ರರ ಹತ್ಯೆ ಮಾಡಿದ್ದು ಸತ್ಯ ಪುಲ್ವಾಮಾ ಪ್ರತೀಕಾರ LIVE:ನೂರಾರು ಜೈಷ್ ಉಗ್ರರ ಹತ್ಯೆ ಮಾಡಿದ್ದು ಸತ್ಯ

ಈಗ ಮಂಗಳವಾರ (ಸೆಪ್ಟೆಂಬರ್ 26)ದಂದು ಪಾಕ್ ಆಕ್ರಮಿತ ಕಾಶ್ಮೀರ ಅಥವಾ ಪಾಕ್ ಹೇಳಿಕೊಳ್ಳುವಂತೆ ಅಜಾದ್ ಕಾಶ್ಮೀರ ನೆಲದಲ್ಲಿ ದಾಳಿ ನಡೆಸಲಾಗಿದೆ. ಯುದ್ಧ ಸಂದರ್ಭದಲ್ಲಿ ಮಾತ್ರ ಈ ಪ್ರದೇಶ ತನಕ ಭಾರತದ ವಿಮಾನಗಳು ಹಾರಾಟ ನಡೆಸಿದ್ದವು.

1971ರ ಇಂಡೋ-ಪಾಕ್ ಯುದ್ಧದ ಸಂದರ್ಭದಲ್ಲಿ ಭಾರತೀಯ ಯುದ್ಧ ವಿಮಾನಗಳು ಪಾಕಿಸ್ತಾನದ ರೇಡಾರ್ ವ್ಯಾಪ್ತಿಗೆ ಗೋಚರವಾಗುವಂತೆ ನುಗ್ಗಿ ಪಾಕಿಸ್ತಾನದ ವೈಮಾನಿಕ ಕ್ಷೇತ್ರದಲ್ಲೆ ದಾಳಿ ನಡೆಸಿದ್ದವು. 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲೂ ಪಾಕಿಸ್ತಾನಿ ವಾಯು ನೆಲೆಯನ್ನು ಭಾರತೀಯ ವಿಮಾನಗಳು ದಾಟಿರಲಿಲ್ಲ.

ಪುಲ್ವಾಮಾ ದಾಳಿಗೆ ಪ್ರತ್ಯುತ್ತರ, ವಾಯುಸೇನೆಗೆ ಬಹುಪರಾಕ್ ಪುಲ್ವಾಮಾ ದಾಳಿಗೆ ಪ್ರತ್ಯುತ್ತರ, ವಾಯುಸೇನೆಗೆ ಬಹುಪರಾಕ್

ಇನ್ನೊಂದು ಗಮನಾರ್ಹ ಸಂಗತಿಯೆಂದರೆ, ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲಿ ನಿಖರ ಗುರಿಯ ಮೇಲೆ ಅಗತ್ಯವಾದ ಬಲ ಪ್ರಯೋಗ ಮಾತ್ರ ಮಾಡಲಾಗುತ್ತಿದೆ. ಆದರೆ, ಇಲ್ಲಿ ಬಳಸಲಾದ ಬಾಂಬ್ ಪ್ರಮಾಣ, ಗಾತ್ರ ಎಲ್ಲವೂ ಹಿರಿದಾಗಿದೆ. ಸುಮಾರು 1,000 ಕಿಲೋಗ್ರಾಮ್ ನಷ್ಟು ಲೇಸರ್ ನಿರ್ದೇಶಿತ ಬಾಂಬನ್ನು ಬಳಸಲಾಗಿದೆ. ಈ ತಂತ್ರಜ್ಞಾನವನ್ನು ಮೊದಲಿಗೆ ಕಾರ್ಗಿಲ್ ಯುದ್ಧದಲ್ಲಿ ಬಳಸಲಾಗಿತ್ತು.

ಅಮೆರಿಕ ಎಫ್ 16 ಯುದ್ಧ ವಿಮಾನಗಳನ್ನು ಪ್ರಯೋಗಿಸಿ, ಎಲ್ ಒಸಿ ದಾಟಿದ್ದ ಮಿರಾಜ್ 2000ಗಳನ್ನು ಹಿಂದಕ್ಕೆ ಕಳಿಸಲು ಯತ್ನಿಸುವ ಪ್ರಯತ್ನದಲ್ಲಿದ್ದಾಗಲೆ ಭಾರಿ ಆಘಾತ ನೀಡಿದ್ದು, ಭಾರತದ ವಾಯು ಸೇನೆ ಪಾಲಿನ ಅತಿದೊಡ್ಡ ದಾಳಿಯಾಗಿದೆ ಎಂದು ರಕ್ಷಣಾ ತಂತ್ರಜ್ಞರು ಹೇಳಿದ್ದಾರೆ.

English summary
The most significant aspect of this strike was that the IAF struck deep inside Pakistan territory at Balakote, which is at Khyber-Pakhtunkhwa province of Pakistan. The other two locations to hit were Muzaffarabad and Chakothi, which are in Pakistan occupied Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X