ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಶಾನ್ಯದಲ್ಲಿ ಬಿಜೆಪಿಗೆ ಆಘಾತ: ಟಿಕೆಟ್ ಕೈತಪ್ಪುತ್ತಿದ್ದಂತೆ ಪಕ್ಷ ತೊರೆದ ನಾಯಕರು

|
Google Oneindia Kannada News

Recommended Video

lok sabha elections 2019: ಈಶಾನ್ಯದಲ್ಲಿ ಬಿಜೆಪಿಗೆ ಆಘಾತ: ಟಿಕೆಟ್ ಕೈತಪ್ಪುತ್ತಿದ್ದಂತೆ ಪಕ್ಷ ತೊರೆದ ನಾಯಕರು

ಇಟಾನಗರ, ಮಾರ್ಚ್ 20: ಲೋಕಸಭೆ ಚುನಾವಣೆಗೂ ಮುನ್ನ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯುಂಟಾಗಿದೆ. ಅರುಣಾಚಲ ಪ್ರದೇಶದಲ್ಲಿ ಬಿಜೆಪಿಯ ಇಬ್ಬರು ಸಚಿವರು ಮತ್ತು ಆರು ಮಂದಿ ಶಾಸಕರು ಮೇಘಾಲಯ ಮುಖ್ಯಮಂತ್ರಿ ಕೋನ್ರಾಡ್ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಸೇರ್ಪಡೆಯಾಗಿದ್ದಾರೆ.

ಅತ್ತ ತ್ರಿಪುರಾದಲ್ಲಿ ಆಡಳಿತಾರೂಢ ಬಿಜೆಪಿಯ ರಾಜ್ಯ ಘಟಕದ ಉಪಾಧ್ಯಕ್ಷ ಸೇರಿದಂತೆ ಮೂವರು ನಾಯಕರು ಕಾಂಗ್ರೆಸ್ ಸೇರಿಕೊಂಡಿದ್ದಾರೆ.

ಛತ್ತೀಸ್‌ ಘಡ: ಬಿಜೆಪಿ ಹೈಕಮಾಂಡ್ ಶಾಕ್, ಹಾಲಿ ಸಂಸದರಿಗೆ ಟಿಕೆಟ್ ಇಲ್ಲ ಛತ್ತೀಸ್‌ ಘಡ: ಬಿಜೆಪಿ ಹೈಕಮಾಂಡ್ ಶಾಕ್, ಹಾಲಿ ಸಂಸದರಿಗೆ ಟಿಕೆಟ್ ಇಲ್ಲ

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಜರ್ಪುಮ್ ಗಾಮ್ಲಿನ್, ರಾಜ್ಯ ಗೃಹಸಚಿವ ಕುಮಾರ್ ವಾಯಿ ಮತ್ತು ಪ್ರವಾಸೋದ್ಯಮ ಸಚಿವ ಜರ್ಕಾರ್ ಗಾಮ್ಲಿನ್ ಹಾಗೂ ಇತರೆ ಹಾಲಿ ಶಾಸಕರಿಗೆ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡದೆ ಇರುವುದು ಕಮಲ ಪಕ್ಷದಲ್ಲಿ ಅಸಮಾಧಾನ ಭುಗಿಲೇಳಲು ಕಾರಣವಾಗಿದೆ.

big shock for bjp in north east region many leaders left the party after denial of tickets

60 ಸದಸ್ಯರ ಅರುಣಾಚಲಪ್ರದೇಶ ವಿಧಾನಸಭೆಗೆ ಬಿಜೆಪಿಯ ಸಂಸದೀಯ ಮಂಡಳಿ 54 ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿತ್ತು. ಅರುಣಾಚಲ ಪ್ರದೇಶದಲ್ಲಿ ಏಪ್ರಿಲ್ 11ರಂದು ಲೋಕಸಭೆ ಚುನಾವಣೆಯ ಜತೆಗೇ ವಿಧಾನಸಭೆ ಚುನಾವಣೆಯೂ ನಡೆಯಲಿದೆ.

ಮಗನ ಹಾದಿಯಲ್ಲೇ ಸಾಗಿ, ಬಿಜೆಪಿ ಸೇರಿದ ಕಾಂಗ್ರೆಸ್ ಮುಖಂಡ ಪಾಟೀಲ್ ಮಗನ ಹಾದಿಯಲ್ಲೇ ಸಾಗಿ, ಬಿಜೆಪಿ ಸೇರಿದ ಕಾಂಗ್ರೆಸ್ ಮುಖಂಡ ಪಾಟೀಲ್

'ಸುಳ್ಳು ಭರವಸೆಗಳಿಂದಾಗಿ ಬಿಜೆಪಿ ಜನರ ಕಣ್ಣುಗಳಲ್ಲಿದ್ದ ಹಿಂದಿನ ಬೆಳಗನ್ನು ಕಳೆದುಕೊಂಡಿದೆ. ಈ ಚುನಾವಣೆಯಲ್ಲಿ ನಾವು ಹೋರಾಟ ಮಾಡಲಿರುವುದು ಮಾತ್ರವಲ್ಲ, ರಾಜ್ಯದಲ್ಲಿ ಎನ್‌ಪಿಪಿ ಸರ್ಕಾರವನ್ನು ರಚಿಸಲಿದ್ದೇವೆ' ಎಂದು ಕುಮಾರ್ ವಾಯಿ ತಿಳಿಸಿದ್ದಾರೆ.

ಒಟ್ಟು ಎಂಟು ಶಾಸಕರ ಜತೆಗೆ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ ಪ್ರದೇಶದ ಮತ್ತೊಬ್ಬ ಶಾಸಕ ಹಾಗೂ ಕೇಸರಿ ಪಡೆಯ ಇತರೆ 19 ಮುಖಂಡರು ಕೂಡ ಎನ್‌ಪಿಪಿ ಕೈಹಿಡಿದಿದ್ದಾರೆ.

ಆಂಧ್ರ, ಅರುಣಾಚಲ ವಿಧಾನಸಭಾ ಅಭ್ಯರ್ಥಿಗಳ ಘೋಷಣೆ ಮಾಡಿದ ಬಿಜೆಪಿ ಆಂಧ್ರ, ಅರುಣಾಚಲ ವಿಧಾನಸಭಾ ಅಭ್ಯರ್ಥಿಗಳ ಘೋಷಣೆ ಮಾಡಿದ ಬಿಜೆಪಿ

ಮೇಘಾಲಯದಲ್ಲಿ ಬಿಜೆಪಿ ಜತೆಗೂಡಿ ಆಡಳಿತ ನಡೆಸುತ್ತಿರುವ ಎನ್‌ಪಿಪಿ, ಅರುಣಾಚಲ ಪ್ರದೇಶದ ಚುನಾವಣೆಯಲ್ಲಿ ಎಲ್ಲ 40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ.

ತ್ರಿಪುರಾದಲ್ಲಿ ರಾಜ್ಯ ಘಟಕದ ಉಪಾಧ್ಯಕ್ಷ ಸುಬಾಲ್ ಭೌಮಿಕ್, ಹಿರಿಯ ನಾಯಕ ಪ್ರಕಾಶ್ ದಾಸ್ ಮತ್ತು ಬಿಜೆಪಿ ಕಿಸಾನ್ ಮೋರ್ಚಾದ ಉಪಾಧ್ಯಕ್ಷ ಪ್ರೇಮ್ತೋಷ್ ದೇವನಾಥ್ ಮಂಗಳವಾರ ಕಾಂಗ್ರೆಸ್ ಸೇರಿಕೊಂಡರು.

'ಇಂದು ಐತಿಹಾಸಿಕ ದಿನ. ಅವರು ಪಕ್ಷಕ್ಕೆ ಸೇರಿಕೊಳ್ಳುತ್ತಿರುವುದು ಕುಟುಂಬದ ಸದಸ್ಯರು ಅವರದೇ ಮನೆಗೆ ಬಂದಂತೆ ಆಗಿದೆ' ಎಂದು ಕಾಂಗ್ರೆಸ್ ತ್ರಿಪುರಾ ಘಟಕದ ಅಧ್ಯಕ್ಷ ಪ್ರದ್ಯೋತ್ ಕಿಶೋರ್ ದೇವವರ್ಮನ್ ಹೇಳಿದ್ದಾರೆ.

ಈ ಮೂವರೂ ನಾಯಕರು ಮೂಲತಃ ಕಾಂಗ್ರೆಸ್‌ನಿಂದಲೇ ಬಂದವರಾಗಿದ್ದಾರೆ.

English summary
About 27 leader including 2 ministers and 6 MLAs of BJP have joined NPP in Arunachal Pradesh after the Party denied the ticket for them in Assembly elections. In Tripura 3 leaders of BJP have joined Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X