ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಕರ ದಿನಾಚರಣೆ:ಗುರುದೇವೋಭವ ಎಂದ ಗಣ್ಯರು ಯಾರ್ಯಾರು?

By Nayana
|
Google Oneindia Kannada News

Recommended Video

Teachers Day 2018 : ಶಿಕ್ಷಕರ ದಿನಾಚರಣೆಗೆ ರಾಜಕೀಯ ನಾಯಕರು ಶಿಕ್ಷಕರಿಗೆ ವಂದನೆ ಸಲ್ಲಿಸಿದ್ದು ಹೀಗೆ

ಬೆಂಗಳೂರು, ಸೆಪ್ಟೆಂಬರ್ 5: ಗುರುದೇವೋ ಭವ ಎನ್ನುವ ನಂಬಿಕೆ ಭಾರತೀಯ ಪರಂಪರೆಯಲ್ಲಿ ಹಾಸುಹೊಕ್ಕಾಗಿದೆ. ನಾಡನ್ನಾಳುವ ದೊರೆಯೇ ಇರಲಿ, ಮೊದಲ ಗೌರವ ಗುರುವಿಗೆ ಸಲ್ಲುತ್ತದೆ.ಶಿಕ್ಷಕರ ದಿನಾಚರಣೆ ಅಂಗವಾಗಿ ನಾಡಿನ ಅನೇಕ ಗಣ್ಯರು ತಮ್ಮ ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಶಾಲೆಯಲ್ಲಿ ಪಾಠ ಕಲಿಸಿದವ ಶಿಕ್ಷಕರೇ ಗುರು ಎಂದೇನಲ್ಲ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕಲು ದಾರಿ ತೋರಿದ ಅಥವಾ ಮುನ್ನಡೆಯಲು ಮಾರ್ಗದರ್ಶನ ನೀಡಿದ ಪ್ರತಿಯೊಬ್ಬರು ನಮಗೆ ಗುರುಗಳೇ ಆಗಿರುತ್ತಾರೆ. ದೇಶಕ್ಕೆ ಉತ್ತಮ , ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವದ್ದಾಗಿರುತ್ತದೆ. ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಕಾರಣರಾದ ಗುರುಗಳನ್ನು ನೆನೆಯುವ ದಿನವೇ ಶಿಕ್ಷಕರ ದಿನಾಚರಣೆ.ಮಾಜಿ ಉಪರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ 125ನೇ ಜನ್ಮದಿನವನ್ನು ಇಂದು ನಾವು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ.

ಮೋದಿ ಬಾಯ್ತುಂಬ ಹೊಗಳಿದ ಬೆಂಗಳೂರಿನ ಆದರ್ಶ ಶಿಕ್ಷಕಿ ಶೈಲಾಮೋದಿ ಬಾಯ್ತುಂಬ ಹೊಗಳಿದ ಬೆಂಗಳೂರಿನ ಆದರ್ಶ ಶಿಕ್ಷಕಿ ಶೈಲಾ

ಇಂದಿನ ಪೀಳಿಗೆಯನ್ನು ಒಮ್ಮೆ ಕೇಳಿನೋಡಿ ಅಪ್ಪಿತಪ್ಪಿಯೂ ಒಬ್ಬ ಶಿಕ್ಷಕನಾಗಬೇಕು ಎಂದು ಹೇಳುವುದಿಲ್ಲ ಅವರ ದೃಷ್ಟಿಯಲ್ಲಿ ಎಂಜಿನಿಯರೋ, ಡಾಕ್ಟರ್ ಆಗುವ ಗುರಿಯತ್ತ ಪಯಣ ಬೆಳೆದಿರುತ್ತದೆ. ಹೀಗೆ ಎಲ್ಲರೂ ಶಿಕ್ಷಕ ವೃತ್ತಿಯಿಂದ ದೂರ ಉಳಿದರೆ ದೇಶದ ಸ್ಥಿತಿ ಏನಾಗಬೇಡ.

ಪರಿತಿಷ್ಠಿತ ಶಾಲಾ ಕಾಲೇಜುಗಳನ್ನು ಬಿಡಿ ಆದರೆ ಸಾಮಾನ್ಯ ಸರ್ಕಾರಿ ಶಿಕ್ಷಕನ ಪಾಡು ಅಂದುಕೊಂಡಷ್ಟು ಸುಲಭವಲ್ಲ. ಈ ವರ್ಷದ ಶಿಕ್ಷಕರ ದಿನಾಚರಣೆಯಿಂದಲಾದರೂ ನಾವು ಉತ್ತಮ ಗುಣಮಟ್ಟದ, ಮೌಲ್ಯಾಧಾರಿತ ಶಿಕ್ಷಣವನ್ನು ಮತ್ತೆ ನಿರೀಕ್ಷಿಸೋಣ, ನಮ್ಮ ಉನ್ನತಿಗೆ ಕಾರಣಕರ್ತರಾದ ಗುರುಗಳಿಗೆ ವಂದಿಸೋಣ ಹ್ಯಾಪಿ ಟೀಚರ್ಸ್ ಡೇ....

ರಾಷ್ಟ್ರ ನಿಮಾರ್ಣದಲ್ಲಿ ಗುರುವಿನ ಮಾರ್ಗದರ್ಶನ ನಿರ್ಣಾಯಕ: ಮೋದಿ ಬಣ್ಣನೆ

ರಾಷ್ಟ್ರ ನಿಮಾರ್ಣದಲ್ಲಿ ಗುರುವಿನ ಮಾರ್ಗದರ್ಶನ ನಿರ್ಣಾಯಕವಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ, ಸ್ವಾಸ್ತ್ಯ ಸಮಾಜ ನಿರ್ಮಾಣ ಮಾಡಲು ವಿದ್ಯಾರ್ಥಿಗಳನ್ನು ತಿದ್ದಿ, ಅವರಿಗೊಂದು ಉತ್ತಮ ದಾರಿ ಕಲ್ಪಿಸಿಕೊಡುವ ಶಿಕ್ಷಕರ ಪಾತ್ರ ತುಂಬಾ ಮಹತ್ವದ್ದಾಗಿದೆ ಎಂದಿದ್ದಾರೆ.

Array

ಶಿಕ್ಷಕ ಎಚ್‌.ನರಸಿಂಹಯ್ಯ ಅವರನ್ನು ನೆನೆದ ಕುಮಾರಸ್ವಾಮಿ

ಶಿಕ್ಷಕರ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರು ತಮಗೆ ಪಾಠ ಕಲಿಸಿದ, ತಮ್ಮನ್ನು ಸಮಾಜಮುಖಿಯನ್ನಾಗಿಸಿದ ಎಚ್‌. ನರಸಿಂಹಯ್ಯ ಅವರನ್ನು ನೆನೆಸಿದ್ದಾರೆ. ಎಲ್ಲಾ ಶಿಕ್ಷಕರನ್ನು ಹೃದಯಪೂರ್ವಕವಾಗಿ ಸ್ಮರಿಸುತ್ತೇನೆ, ನರಸಿಂಹಯ್ಯ ಅವರು ನೀಡಿದ ಕಣ್ಣೋಟ ನನ್ನನ್ನು ಈ ಎತ್ತರಕ್ಕೆ ತಂದು ನಿಲ್ಲಿಸಿದೆ ಒಳ್ಳೆಯ ಗುರು ಎಂದೆಂದಿಗೂ ಉನ್ನತಿಯ ದಾರಿದೀಪ ಟ್ವಿಟ್ಟರ್ ಮೂಲಕ ಶಿಕ್ಷಕರ ದಿನಾಚರಣೆಗೆ ಶುಭಾಶಯ ಕೋರಿದ್ದಾರೆ.

ಶಿಕ್ಷಕರು ಸರ್ವಾಂಗೀಣ ವ್ಯಕ್ತಿತ್ವ ರೂಪಿಸಲು ಸಹಕಾರಿ : ರೋಹಿಣಿ ಸಿಂಧೂರಿಶಿಕ್ಷಕರು ಸರ್ವಾಂಗೀಣ ವ್ಯಕ್ತಿತ್ವ ರೂಪಿಸಲು ಸಹಕಾರಿ : ರೋಹಿಣಿ ಸಿಂಧೂರಿ

ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಮುಖ್ಯ

ಅತ್ಯುತ್ತಮ ಶಿಕ್ಷಕರೆಂದೇ ಹೆಸರುವಾಸಿಯಾಗಿದ್ದ ದೇಶದ ಎರಡನೇ ರಾಷ್ಟ್ರಪತಿ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ರ ಜನ್ಮದಿನದಂದು ಅವರಿಗೆ ನನ್ನ‌ ನಮನಗಳು. ರಾಜ್ಯ ಹಾಗು ದೇಶದಲ್ಲೆಡೆ ಮುಂದಿನ‌ ತಲೆಮಾರಿನ ನಾಗರೀಕರಿಗೆ ವಿದ್ಯಾದಾನ ಮಾಡುತ್ತಿರುವ ಶಿಕ್ಷಕರೆಲ್ಲರಿಗೂ ಶಿಕ್ಷಕ‌ ದಿನಾಚರಣೆಯ ಶುಭಾಶಯಗಳು, ಉತ್ತಮ ಶಾಂತಿಯುತ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿರುತ್ತದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಟ್ವೀಟ್ ಮಾಡಿದ್ದಾರೆ.

ಅಜ್ಞಾನವೆಂಬ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ

ಸದೃಢ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರದ್ದೇ ಪ್ರಮುಖ ಪಾತ್ರ. ಅಜ್ಞಾನವೆಂಬ ಅಂಧಕಾರದಿಂದ ಜ್ಞಾನವೆಂಬ ಬೆಳಕಿನೆಡೆಗೆ ಸಮಾಜವನ್ನು ಕೊಂಡೊಯ್ಯುತ್ತಿರುವ ಅಧ್ಯಾಪಕ ವೃಂದವನ್ನು ಸದಾ ಗೌರವಿಸೋಣ. ಶಿಕ್ಷಕಶ್ರೇಷ್ಠ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮದಿನವಾದ ಇಂದು ಶಿಕ್ಷಕರ ದಿನದ ಶುಭ ಹಾರೈಕೆಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಶುಭಕೋರಿದ್ದಾರೆ.

ಕಲಿಕೆಯ ಹಸಿವನ್ನು ನೀಗಿಸಲು ಅರಿವೆಂಬ ತುತ್ತು ತಿನ್ನಿಸುವ ಶಿಕ್ಷಕಕಲಿಕೆಯ ಹಸಿವನ್ನು ನೀಗಿಸಲು ಅರಿವೆಂಬ ತುತ್ತು ತಿನ್ನಿಸುವ ಶಿಕ್ಷಕ

English summary
Including Prime minister Narendra modi, chief minister H.D.Kumarswamy many public figures have paid their respect to teachers on the occasion of teachers day celebration through tweeter and other social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X