ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋನ್ ಆ್ಯಪ್‌ಗಳಿಂದ ಸುಲಿಗೆ; ಚೀನಾಗೆ ಮಾಹಿತಿ ರವಾನೆ: 22 ಮಂದಿ ಬಂಧನ

|
Google Oneindia Kannada News

ನವದೆಹಲಿ, ಆಗಸ್ಟ್ 22: ಸುಲಭಕ್ಕೆ ಸಾಲ ಸಿಗುತ್ತದೆ ಎಂದರೆ ಯಾರಿಗೆ ಬೇಡ..! ಅಂತೆಯೇ ಲೋನ್ ಆ್ಯಪ್‌ಗಳು ನಾಯಿಕೊಡೆಗಳಂತೆ ಎದ್ದಿವೆ. ಯಾವುದೇ ದಾಖಲೆ ಇಲ್ಲದೇ ಕ್ಷಣಮಾತ್ರದಲ್ಲಿ ಸಾಲ ಕೊಡುವುದಾಗಿ ಭರವಸೆ ಕೊಡುವ ಕೆಲ ಲೋನ್ ಆ್ಯಪ್‌ಗಳು ನಂತರ ಜನರ ಸುಲಿಗೆಗೆ ನಿಂತಿರುವುದು ಮತ್ತು ವೈಯಕ್ತಿಕ ಮಾಹಿತಿ ಕದಿಯುತ್ತಿರುವ ಸಂಗತಿ ಇತ್ತೀಚೆಗೆ ಹೆಚ್ಚು ಬೆಳಕಿಗೆ ಬಂದಿದೆ.

ಇದೀಗ ಚೀನೀ ವ್ಯಕ್ತಿಗಳು ಭಾಗಿಯಾಗಿರುವ ಲೋನ್ ಆ್ಯಪ್‌ಗಳ ಸುಲಿಗೆ ಪ್ರಕರಣ ಬಯಲಿಗೆ ಬಂದಿದೆ. ದೇಶಾದ್ಯಂತ 22 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 500 ಕೋಟಿ ರೂ ಮೊತ್ತದ ಸಾಲ ಮತ್ತು ಸುಲಿಗೆ ಪ್ರಕರಣ ಇದಾಗಿದೆ. ಕರ್ನಾಟಕ ಸೇರಿ ಹಲವು ಸ್ಥಳಗಳಿಂದ ದೆಹಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Recommended Video

ಸಿಕ್ಕಾಪಟ್ಟೆ ವೈರಲ್ ಆಗ್ತಿರೋ ಸುದ್ದಿ||Govt gives loan of 5 lakhs if Aadhaar card is available||Oneindia

ಮನೆಯಲ್ಲೊಬ್ಬ ಮನದಲ್ಲೊಬ್ಬ ಎಂದಾಕೆ ಕೃಷ್ಣನ ಜನ್ಮಸ್ಥಾನ ಸೇರಿದ್ದೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿಮನೆಯಲ್ಲೊಬ್ಬ ಮನದಲ್ಲೊಬ್ಬ ಎಂದಾಕೆ ಕೃಷ್ಣನ ಜನ್ಮಸ್ಥಾನ ಸೇರಿದ್ದೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ

ನೂರಕ್ಕೂ ಹೆಚ್ಚು ಲೋನ್ ಆ್ಯಪ್‌ಗಳನ್ನು ಬಳಸಿಕೊಳ್ಳಲಾಗಿದೆ. ಈ ಆ್ಪ್‌ಗಳ ಮೂಲಕ ಜನರ ವೈಯಕ್ತಿಕ ಸೂಕ್ಷ್ಮ ಮಾಹಿತಿಯನ್ನು ಕದಿಯಲಾಗಿದೆ. ಅದನ್ನು ಚೀನಾ ಮತ್ತು ಹಾಂಕಾಂಗ್‌ನಲ್ಲಿರುವ ಸರ್ವರ್‌ಗಳಿಗೆ ಅಪ್‌ಲೋಡ್ ಮಾಡಲಾಗಿದೆ ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಳೆದ ಎರಡು ತಿಂಗಳಿಂದಲೂ ದೆಹಲಿ ಪೊಲೀಸರು ಈ ಜಾಲ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಪೊಲೀಸರು ಕಣ್ಣಿಟ್ಟಿದ್ದರು. ದೆಹಲಿ ಅಷ್ಟೇ ಅಲ್ಲದೇ ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶ ಹಾಗು ಇತರ ಕೆಲ ರಾಜ್ಯಗಳಲ್ಲಿ ಈ ಜಾಲ ವ್ಯಾಪಿಸಿರುವುದು ಗೊತ್ತಾಗಿದೆ. ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಪೊಲೀಸರು ವಿವಿಧ ಸ್ಥಳಗಳಲ್ಲಿ ರೇಡ್ ಮಾಡಿ 22 ಮಂದಿಯನ್ನು ಬಂಧಿಸಿದ್ದಾರೆ.

Big Extortion Using Loan Apps, Details Sent to China, Police Arrest 22 Persons

ಜಾಲದ ಕಾರ್ಯ ಹೇಗೆ?
ಉತ್ತರಪ್ರದೇಶದ ಲಕ್ನೋದಲ್ಲಿ ಈ ಗ್ಯಾಂಗ್ ಒಂದು ಕಾಲ್ ಸೆಂಟರ್ ಸ್ಥಾಪಿಸಿದೆ. ಲೋನ್ ಆ್ಯಪ್ ಬಳಸಿದ ಮಂದಿಗೆ ಸ್ವಲ್ಪ ಮೊತ್ತದ ಸಾಲವನ್ನೂ ಕೊಡಲಾಗುತ್ತಿತ್ತು. ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿದ ಕೂಡಲೇ ಹಣವನ್ನು ಖಾತೆದಾರರಿಗೆ ಸಂದಾಯ ಮಾಡಲಾಗುತ್ತಿತ್ತು.

ಆದರೆ, ಲೋನ್ ಆ್ಯಪ್ ಬಳಸುವ ಜನರ ಮೊಬೈಲ್‌ನಲ್ಲಿರುವ ವೈಯಕ್ತಿಕ ಮಾಹಿತಿಯನ್ನು ಇವರು ಕದಿಯುತ್ತಿದ್ದರು. ಬೇರೆ ಬೇರೆ ಹೆಸರಿನಲ್ಲಿ ಇವರಿಗೆ ಕರೆ ಮಾಡಿ ಹೆದರಿಸುತ್ತಿದ್ದರು. ತಮ್ಮ ಅಶ್ಲೀಲ ಚಿತ್ರಗಳನ್ನು ಇಂಟರ್ನೆಟ್‌ಗೆ ಅಪ್‌ಲೋಡ್ ಮಾಡುವುದಾಗಿ ಹೇಳಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಮರ್ಯಾದೆಗೆ ಅಂಜಿ ಜನರು ಹಣ ನೀಡುತ್ತಿದ್ದರೆನ್ನಲಾಗಿದೆ.

ದೇಶದ ಆರೋಪಿಗಳ ಫಿಂಗರ್ ಫ್ರಿಂಟ್ ಸಂಗ್ರಹ- ಶೀಘ್ರ ಆರೋಪಿ ಪತ್ತೆಗೆ ಸಹಕಾರಿ ಹೇಗೆ?ದೇಶದ ಆರೋಪಿಗಳ ಫಿಂಗರ್ ಫ್ರಿಂಟ್ ಸಂಗ್ರಹ- ಶೀಘ್ರ ಆರೋಪಿ ಪತ್ತೆಗೆ ಸಹಕಾರಿ ಹೇಗೆ?

ಇಷ್ಟಕ್ಕೆ ಈ ಜಾಲದ ಕಾರ್ಯ ಸೀಮಿತವಾಗಿರಲಿಲ್ಲ. ಜನರಿಂದ ಸುಲಿಗೆ ಮಾಡಲಾದ ಹಣವನ್ನು ಈ ದುರುಳರು ಚೀನಾಗೆ ಕಳುಹಿಸುತ್ತಿದ್ದರು. ಕ್ರಿಪ್ಟೋಕರೆನ್ಸಿ ಮೂಲಕವೋ, ಹವಾಲಾ ಮೂಲಕವೋ ಈ ಹಣ ಚೀನಾ ತಲುಪುತ್ತಿತ್ತು ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

Big Extortion Using Loan Apps, Details Sent to China, Police Arrest 22 Persons

ಯಾವ್ಯಾವ ಆ್ಯಪ್‌ಗಳು:
ಕ್ಯಾಷ್ ಪೋರ್ಟ್, ರುಪೀ ವೇ, ಲೋನ್ ಕ್ಯೂಬ್, ವೊವ್ ರುಪೀ, ಸ್ಮಾರ್ಟ್ ವ್ಯಾಲೆಟ್, ಜೈಂಟ್ ವ್ಯಾಲೆಟ್, ಹೈ ರುಪೀ, ಸ್ವಿಫ್ಟ್ ರುಪೀ, ವಾಲೆಟ್ವಿನ್, ಫಿಶ್‌ಕ್ಲಬ್, ಯೇಕ್ಯಾಷ್, ಐಂ ಲೋನ್, ಗ್ರೋಟ್ರೀ, ಮ್ಯಾಜಿಕ್ ಬ್ಯಾಲೆನ್ಸ್, ಯೋಕ್ಯಾಷ್, ಫಾರ್ಚೂನ್ ಟ್ರೀ, ಸೂಪರ್‌ಕಾಯಿನ್, ರೆಡ್ ಮ್ಯಾಜಿಕ್, ಈ ಲೋನ್ ಆ್ಯಪ್‌ಗಳನ್ನು ಪೊಲೀಸರು ಗುರುತಿಸಿದ್ದಾರೆ.

ಚೀನೀ ರಾಷ್ಟ್ರೀಯರು ಮಾಸ್ಟರ್‌ಮೈಂಡ್
ಬಂಧಿತರಾದ ಜನರು ವಿಚಾರಣೆ ವೇಳೆ ಕೆಲ ಸಂಗತಿಗಳನ್ನು ಬಾಯಿಬಿಟ್ಟಿದ್ದಾರೆ. ಚೀನೀ ರಾಷ್ಟ್ರೀಯರ ಸೂಚನೆ ಮೇರೆಗೆ ಈ ಕೃತ್ಯ ಎಸಗಿದ್ದಾಗಿ ಇವರು ಒಪ್ಪಿಕೊಂಡಿದ್ದಾರೆ. ಈ ಚೀನೀ ರಾಷ್ಟ್ರೀಯರನ್ನು ಗುರುತಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದು, ಅವರನ್ನು ಶೀಘ್ರದಲ್ಲೇ ಬಂಧಿಸುವ ಸಾಧ್ಯತೆ ಇದೆ.

ಇನ್ನು, ಬಂಧಿತರಿಂದ ಪೊಲೀಸರು 51 ಮೊಬೈಲ್ ಫೋನ್, 25 ಹಾರ್ಡ್ ಡಿಸ್ಕ್, 9 ಲ್ಯಾಪ್ ಟಾಪ್, 19 ಕಾರ್ಡ್, 3 ಕಾರು ಮತ್ತು 4 ಲಕ್ಷ ರೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸರು ಕಾರ್ಯಾಚರಣೆ ಮಾಡುತ್ತಿದ್ದಂತೆಯೇ, ದಂಧೆಕೋರರು ತಮ್ಮ ಕಾಲ್ ಸೆಂಟರ್‌ಗಳ ಸ್ಥಳವನ್ನು ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶಕ್ಕೆ ವರ್ಗಾಯಿಸುವ ಪ್ರಯತ್ನ ಮಾಡಿದ್ದರು. ಇದೂವರೆಗೂ 500 ಕೋಟಿಗೂ ಹೆಚ್ಚು ಹಣವನ್ನು ಈ ಜಾಲ ಲಪಟಾಯಿಸಿದೆ ಎಂದು ದೆಹಲಿ ಪೊಲೀಸ್ ತಿಳಿಸಿದೆ.

(ಒನ್ಇಂಡಿಯಾ ಸುದ್ದಿ)

English summary
Delhi Police have arrested 22 persons who were involved in extortion using 100 loan apps. The criminals were sending users' details to China, says police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X