ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಲ್ಟನ್ ಹೋಟೆಲ್ ನಲ್ಲಿ ದಾವೂದ್ ಗ್ಯಾಂಗಿನ ಪ್ರಮುಖ ಸದಸ್ಯ ಬಂಧನ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಆಗಸ್ಟ್ 19 : ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅವರ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ ಜಬೀರ್ ಮೋತಿನನ್ನು ಹಿಲ್ಟನ್ ಹೋಟೆಲ್ ನಲ್ಲಿ ಬಂಧಿಸಲಾಗಿದೆ ಎಂದು ಲಂಡನ್ ಪೊಲೀಸರು ತಿಳಿಸಿದ್ದಾರೆ.

ದಾವೂದ್ ಸಿಂಡಿಕೇಟ್ ನ ಪ್ರಮುಖ ಸದಸ್ಯನಾಗಿದ್ದ ಮೋತಿ, ಯುಎಇ ಹಾಗೂ ಯುಕೆಯಲ್ಲಿನ ಆರ್ಥಿಕ ವ್ಯವಹಾರ, ಹೂಡಿಕೆಗಳನ್ನು ನಿಭಾಯಿಸುತ್ತಿದ್ದ. ಬೇರೆಡೆಗಳಿಂದ ಸಂಗ್ರಹವಾಗುತ್ತಿದ್ದ ಹಣವನ್ನು ಭಯೋತ್ಪದಾನ ಚಟುವಟಿಕೆಗಳಿಗೆ ವಿಭಾಗಿಸಿ, ಹಂಚುವ ಕೆಲಸವನ್ನು ನಿಭಾಯಿಸುತ್ತಿದ್ದ.

ಬೆಂಗಳೂರಿನಿಂದ ಪರಾರಿಯಾಗಿದ್ದ ದಾವೂದ್ ಗ್ಯಾಂಗಿನ ರಶೀದ್ ಮಲಬಾರಿ ಬಂಧನಬೆಂಗಳೂರಿನಿಂದ ಪರಾರಿಯಾಗಿದ್ದ ದಾವೂದ್ ಗ್ಯಾಂಗಿನ ರಶೀದ್ ಮಲಬಾರಿ ಬಂಧನ

ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮೋತಿಯನ್ನು ಬಂಧಿಸುವಂತೆ ಲಂಡನ್ ಪೊಲೀಸರಿಗೆ ಭಾರತದ ತನಿಖಾ ಸಂಸ್ಥೆಗಳು ಎರಡು ಬಾರಿ ಮನವಿ ಮಾಡಿಕೊಂಡಿದ್ದವು.

Big breakthrough: Dawood’s top financial manager arrested

ಪಾಕಿಸ್ತಾನ, ಮಧ್ಯಪ್ರಾಚ್ಯ ದೇಶಗಳಲ್ಲಿ ನೆಲೆ ಕಂಡಿದ್ದ ಮೋತಿ, ಇತ್ತೀಚೆಗೆ ಯುಕೆಗೆ ಶಾಶ್ವತವಾಗಿ ಶಿಫ್ಟ್ ಆಗುವ ಯೋಜನೆಯಲ್ಲಿದ್ದ. ಯುಕೆಗೆ 10 ವರ್ಷಗಳ ವೀಸಾ ಪಡೆದುಕೊಂಡಿದ್ದ. ಜತೆಗೆ ಆಂಟಿಗುವಾದಲ್ಲೂ ನೆಲೆಸಲು ಚಿಂತಿಸಿದ್ದ ಎಂದು ತಿಳಿದು ಬಂದಿದೆ.

ಡಿ ಸಿಂಡಿಕೇಟ್ ಗೆ ಸೇರಿದ ಅಪಾರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಯತ್ನದಲ್ಲಿರುವ ಸಿಬಿಐ, ಜಾರಿ ನಿರ್ದೇಶನಾಲಯಕ್ಕೆ ಮೋತಿ ವಿಚಾರಣೆಯಿಂದ ಹೆಚ್ಚಿನ ವಿವರಗಳು ಸಿಗುವ ಸಾಧ್ಯತೆಯಿದೆ.

English summary
In a major boost for the Indian security agencies, a top aide of fugitive underworld don, Dawood Ibrahim has been arrested in London. The London police arrested Jabir Moti from the Hilton Hotel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X