ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಲುವು ಬದಲಿಸಿದ ಭುಪೇನ್ ಹಜಾರಿಕಾ ಪುತ್ರ: ಭಾರತ ರತ್ನ ಸ್ವೀಕರಿಸಲು ಒಪ್ಪಿಗೆ

|
Google Oneindia Kannada News

ನವದೆಹಲಿ, ಫೆಬ್ರವರಿ 15: ಪೌರತ್ವ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ತಂದೆ ನೀಡುವ ಭಾರತ ರತ್ನವನ್ನು ತಿರಸ್ಕರಿಸುವ ಮಾತನಾಡಿದ್ದ ಖ್ಯಾತ ಗಾಯಕ ಭುಪೇನ್ ಹಜಾರಿಕಾ ಅವರ ಮಗ ತೇಜ್ ಹಜಾರಿಕಾ, ತಮ್ಮ ನಡೆ ಬದಲಿಸಿದ್ದಾರೆ.

ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವನ್ನು ಪಡೆದುಕೊಳ್ಳುವುದು ಅತ್ಯಂತ ದೊಡ್ಡ ಗೌರವ ಎಂದು ತೇಜ್ ಹೇಳಿದ್ದಾರೆ.

ಕೇಂದ್ರದ ವಿರುದ್ಧ 'ಭಾರತ ರತ್ನ' ಭುಪೇನ್ ಹಜಾರಿಕಾ ಪುತ್ರನ ಅಸಮಾಧಾನ ಕೇಂದ್ರದ ವಿರುದ್ಧ 'ಭಾರತ ರತ್ನ' ಭುಪೇನ್ ಹಜಾರಿಕಾ ಪುತ್ರನ ಅಸಮಾಧಾನ

ನನ್ನ ತಂದೆಗೆ ನೀಡುವ ಭಾರತ ರತ್ನವನ್ನು ಸ್ವೀಕರಿಸಲು ಭಾರತ ಸರ್ಕಾರ ನನಗೆ ಆಹ್ವಾನ ನೀಡಿದೆ. ಅವರು ಪ್ರಗತಿಪರ ಮತ್ತು ಐಕ್ಯ ಭಾರತಕ್ಕಾಗಿ ಸ್ವಾರ್ಥ ರಹಿತವಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ ಮತ್ತು ಸಾಕಷ್ಟು ತ್ಯಾಗ ಮಾಡಿದ್ದಾರೆ. ಅದಕ್ಕಾಗಿ ಅವರು ಅರ್ಹ ಗೌರವಕ್ಕೆ ಪರಿಗಣಿಸಲ್ಪಟ್ಟಿದ್ದಾರೆ ಎಂದು ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ತೇಜ್ ಹಜಾರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

bhupen hazarika son tej agrees to recieve bharat ratna will be tremendous honour

2019ರ ಫೆಬ್ರವರಿ 11ರಂದು ನಾನು ನೀಡಿದ್ದ ಭಾರತ ರತ್ನ ಕುರಿತಾದ ಹೇಳಿಕೆಯನ್ನು ಕೆಲವು ವ್ಯಕ್ತಿಗಳು ಸಂಪೂರ್ಣ ತಪ್ಪಾಗಿ ಅರ್ಥೈಸಿದ್ದಾರೆ ಎಂದು ಹೇಳಿದ್ದಾರೆ.

ಪ್ರಣಬ್ ಮುಖರ್ಜಿ, ನಾನಾಜಿ, ಭೂಪೇನ್ ಹಜಾರಿಕಾಗೆ ಭಾರತರತ್ನಪ್ರಣಬ್ ಮುಖರ್ಜಿ, ನಾನಾಜಿ, ಭೂಪೇನ್ ಹಜಾರಿಕಾಗೆ ಭಾರತರತ್ನ

ನನ್ನ ತಂದೆಗೆ ನೀಡುವ ಗೌರವವನ್ನು ಸ್ವೀಕರಿಸುವುದು ನನ್ನ ಕನಸಿನಂತಹ ಸೌಭಾಗ್ಯ. ಕತ್ತಲಿರುವಲ್ಲಿ ಬೆಳಕು ತರುವಲ್ಲಿ ಕೆಲಸ ಮಾಡುವ ನನ್ನ ತಂದೆಯವರ ಹೆಜ್ಜೆಯನ್ನು ಅನುಸರಿಸಲು ನಾನು ಬಯಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಭಾರತ ರತ್ನತ್ರಯರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದು ಹೀಗೆ...ಭಾರತ ರತ್ನತ್ರಯರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದು ಹೀಗೆ...

ಪೌರತ್ವ (ತಿದ್ದುಪಡಿ) ಮಸೂದೆ ವಿರುದ್ಧ ಹರಿಹಾಯ್ದಿದ್ದ ಅವರು, ವಾಸ್ತವವಾಗಿ ಈ ಮಸೂದೆ ತಂದೆಯವರ ಆಶಯಗಳನ್ನು ಕಡೆಗಣಿಸುವಂತಿದೆ. ಇದು ಜನಪರವಲ್ಲದೆ ಇರುವುದು ನೋವಿನ ಸಂಗತಿ. ವಾಸ್ತವವಾಗಿ ಅದು ಅವರು ತಮ್ಮ ಹೃದಯಗಳ ಹೃದಯಗಳಲ್ಲಿ ನಂಬಿದ್ದ ತತ್ವಗಳಿಗೆ ಸಂಪೂರ್ಣ ತದ್ವಿರುದ್ಧವಾಗಿದೆ ಎಂದಿದ್ದರು.

ನನಗೆ ಇದುವರೆಗೂ ಈ ಸಂಬಂಧ ಯಾವುದೇ ಆಹ್ವಾನ ಬಂದಿಲ್ಲ. ಹೀಗಾಗಿ ತಿರಸ್ಕರಿಸುವ ಪ್ರಶ್ನೆಯೇ ಎದುರಾಗುವುದಿಲ್ಲ. ಇಂತಹ ರಾಷ್ಟ್ರೀಯ ಮಾನ್ಯತೆಯನ್ನು ನೀಡುವುದು ಮತ್ತು ಪಡೆದುಕೊಳ್ಳುವುದು ಬಹಳ ಮುಖ್ಯವಾದದ್ದು ಎಂದು ಕೇಂದ್ರ ಸರ್ಕಾರ ಬಿಂಬಿಸಿಕೊಳ್ಳುವುದು ಅಲ್ಪ ಕಾಲಾವಧಿಯ ಅಗ್ಗದ ಪುಳಕದ ಪ್ರದರ್ಶನವಾಗುತ್ತದೆ ಎಂದು ಅವರು ಹೇಳಿದ್ದರು.

English summary
Son of singer Bhupen Hazarika Tej agreed to recieve Bharat Ratna on behalf of his late father and said his statement on Bharat Ratna was misconstructed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X