ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೋಪಾಲ್ ಅತ್ಯಾಚಾರ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ

|
Google Oneindia Kannada News

ಭೂಪಾಲ್, ಡಿಸೆಂಬರ್ 23: ಭೂಪಾಲದಲ್ಲಿಯುಪಿಎಸ್ ಸಿ ಪರೀಕ್ಷೆ ಬರೆಯಲು ಹೊರಟ ಹುಡುಗಿಯ ಮೇಲೆ ನವೆಂಬರ್ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ಇಲ್ಲಿನ ತ್ವರಿತ (fast-track)ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ನವೆಂಬರ್ 2 ರಂದು ನಡೆದ ಈ ಘಟನೆ ಇಡೀ ಮಧ್ಯಪ್ರದೇಶವನ್ನೂ ಆತಂಕದಲ್ಲಿ ಮುಳುಗಿಸಿತ್ತು. ಹಾಡುಹಗಲಲ್ಲೇ, ಜನಜಂಗುಳಿ ಇರುವ ರೈಲ್ವೇ ಸ್ಟೇಷನ್ನಿನ ಬಳಿಯ ಸೇತುವೆಯೊಂದರ ಅಡಿಯಲ್ಲಿ ಯುವತಿಯನ್ನು ಕಟ್ಟಿಹಾಕಿ, ಮೂರುಗಂಟೆಗಳ ಕಾಲ ಸತತವಾಗಿ ಅತ್ಯಾಚಾರ ಎಸಗಲಾಗಿತ್ತು.

ಯುಪಿಎಸ್ಸಿ ಪರೀಕ್ಷೆ ಬರೆಯಲು ಹೊರಟ ತರುಣಿ ಮೇಲೆ ಸಾಮೂಹಿಕ ಅತ್ಯಾಚಾರ ಯುಪಿಎಸ್ಸಿ ಪರೀಕ್ಷೆ ಬರೆಯಲು ಹೊರಟ ತರುಣಿ ಮೇಲೆ ಸಾಮೂಹಿಕ ಅತ್ಯಾಚಾರ

ಯುವತಿ ಯುಪಿಎಸ್ ಸಿ ಪರೀಕ್ಷೆ ಬರೆಯುವುದಕ್ಕಾಗಿ ಅಣಿಯಾಗುತ್ತಿದ್ದಳು. ತರಬೇತಿ ಸಹ ಪಡೆದಿದ್ದಳು. ಆದರೆ ಈ ಘಟನೆ ಆಕೆಯ ಬದುಕಿನಲ್ಲಿ ವಿಚಿತ್ರ ತಿರುವನ್ನು ಸೃಷ್ಟಿಸಿತ್ತು.

Bhopal gangrape case: All accused gets life term

ಘಟನೆಯ ಮರುದಿನ ಯುವತಿ ಪೊಲೀಸರಿಗೆ ದೂರು ನೀಡುವುದಕ್ಕೆ ಹೋದರೆ ನಂಬದ ಪೊಲೀಸರು, ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ಆದರೆ ಧೈರ್ಯವಂತಳಾಗಿದ್ದ ಹುಡುಗಿ ಆರೋಪಿಗಳಲ್ಲಿ ಇಬ್ಬರನ್ನು ತಾನೇ ಎಳೆದುತಂದು ಪೊಲೀಸರಿಗೊಪ್ಪಿಸಿ, ನಂತರ ದೂರು ದಾಖಲಿಸಿಕೊಳ್ಳುವಂತೆ ದುಂಬಾಲುಬಿದ್ದಿದ್ದಳು.

ಈ ಘಟನೆ ಮಧ್ಯಪ್ರದೇಶದಾದ್ಯಂತ ಆತಂಕ ಸೃಷ್ಟಿಸಿತ್ತು. ದೂರು ದಾಖಲಿಸಿಕೊಳ್ಳದ ಪೊಲೀಸರನ್ನು ಅಮಾನತು ಮಾಡಲಾಯ್ತು. ಅಪರಾಧಿಗಳಿಗೆ ಅತ್ಯುಗ್ರ ಶಿಕ್ಷೆ ನೀಡುವುದಾಗಿ ಸ್ವತಃ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಭರವಸೆ ನೀಡಿದ್ದರು.

ನಂತರ ನಾಲ್ವರು ಆರೋಪಿಗಳನ್ನೂ ಬಂಧಿಸಿಸದ್ದ ಪೊಲೀಸರು, ಕೋರ್ಟಿಗೆ ಒಪ್ಪಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಈ ನಾಲ್ವರೂ ಈ ಕುಕೃತ್ಯ ನಡೆಸಿದ್ದು ಸಾಬೀತಾಗಿರುವುದರಿಂದ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

English summary
A fast-track court on Dec 23rd awarded life imprisonment to all the four accused in Bhopal gangrape case. Earlier in the month of November, a 19-year-old civil services aspirant was allegedly abducted by the four accused and gangraped near the Habibganj Railway Station in Bhopal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X