ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೋಪಾಲ್: ದೇವಸ್ಥಾನದಲ್ಲಿ 'ಮುನ್ನಿ ಬದ್ನಾಮ್ ಹುಯಿ' ಹಾಡಿಗೆ ನೃತ್ಯ ಮಾಡಿದ ಮಹಿಳೆ ವಿರುದ್ಧ ಎಫ್‌ಐಆರ್

|
Google Oneindia Kannada News

ಭೋಪಾಲ್ ಅಕ್ಟೋಬರ್ 4: ''ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ದೇವಸ್ಥಾನದ ಆವರಣದಲ್ಲಿ ನೃತ್ಯದ ವಿಡಿಯೋವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಮಹಿಳೆಯ ವಿರುದ್ಧ ಪೊಲೀಸ್ ಪ್ರಕರಣ ಅಥವಾ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗುವುದು'' ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಇಂದು ಹೇಳಿದ್ದಾರೆ.

ನೇಹಾ ಮಿಶ್ರಾ ಸಾಮಾಜಿಕ ಮಾಧ್ಯಮದ ಪ್ರಭಾವಿ. ಇವರು ಅಕ್ಟೋಬರ್ 1 ರಂದು ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೊವನ್ನು ಪೋಸ್ಟ್ ಮಾಡಿದ್ದರು. ನಂತರ ಅದನ್ನು ಅಳಿಸಿಹಾಕಿದರು ಮತ್ತು ಕೆಲವು ಫ್ರಿಂಜ್ ಗ್ರೂಪ್ ಬಜರಂಗದಳದ ಸದಸ್ಯರು ವಿಡಿಯೊವನ್ನು ಆಕ್ಷೇಪಿಸಿದ ನಂತರ ಕ್ಷಮೆಯಾಚಿಸಿದರು.

ಭೋಪಾಲ್: ಬಿಜೆಪಿ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ: ಜಲಫಿರಂಗಿಗಳ ಬಳಕೆಭೋಪಾಲ್: ಬಿಜೆಪಿ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ: ಜಲಫಿರಂಗಿಗಳ ಬಳಕೆ

ಇನ್‌ಸ್ಟಾ ದಲ್ಲಿ ಸಣ್ಣ ವಿಡಿಯೊದಲ್ಲಿ ದೇವಸ್ಥಾನದ ಮೆಟ್ಟಿಲುಗಳ ಮೇಲೆ ಹಿಟ್ ಬಾಲಿವುಡ್ ಹಾಡು "ಮುನ್ನಿ ಬದ್ನಾಮ್ ಹುಯಿ" ಟ್ಯೂನ್‌ಗೆ ನೇಹ ನೃತ್ಯ ಮಾಡಿರುವುದು ಚಿತ್ರೀಕರಿಸಲಾಗಿದೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿತ್ತು. ನೇಹಾ ಮಿಶ್ರಾ ಸಾಮಾಜಿಕ ಮಾಧ್ಯಮದ ಪ್ರಭಾವಿಯಾಗಿದ್ದು, ಅವರು Instagram ನಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಇದು ವಿವಾದಕ್ಕೆ ಗುರಿಯಾದ ಬಳಿಕ ನೇಹ ವಿಡಿಯೋವನ್ನು ಅಳಿಸಿ ಹಾಕಿದ್ದರು, ಜೊತೆಗೆ ಕ್ಷಮೆ ಕೂಡ ಕೇಳಿದ್ದಾರೆ.

Bhopal: FIR against woman who danced to Munni Badnam Hui song in temple

"ನೇಹಾ ಡ್ರೆಸ್ ಮಾಡಿ ವಿಡಿಯೋ ಚಿತ್ರೀಕರಿಸಿದ ರೀತಿ ಆಕ್ಷೇಪಾರ್ಹವಾಗಿತ್ತು. ನಾನು ಈ ಹಿಂದೆ ಇಂತಹ ಘಟನೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದೆ ಮತ್ತು ಅಂತಹ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗುವುದು ಎಂದು ಹೇಳಿದ್ದೆ. ಎಚ್ಚರಿಕೆಯ ಹೊರತಾಗಿಯೂ ಅವರು ಈ ರೀತಿ ಮಾಡಿದ್ದಾರೆ" ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಸುದ್ದಿಗಾರರಿಗೆ ತಿಳಿಸಿದರು.

ಆಕೆಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಛತ್ತರ್‌ಪುರದ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದೇನೆ ಎಂದು ರಾಜ್ಯ ಸರ್ಕಾರದ ವಕ್ತಾರರೂ ಆಗಿರುವ ಸಚಿವರು ತಿಳಿಸಿದ್ದಾರೆ. ಬಜರಂಗದಳದ ಕಾರ್ಯಕರ್ತರ ಆಕ್ಷೇಪದ ನಂತರ, ಮಹಿಳೆ ಡ್ಯಾನ್ಸ್ ರೀಲ್ ಅನ್ನು ಅಳಿಸಿ ಹೊಸ ವಿಡಿಯೊವನ್ನು ಅಪ್‌ಲೋಡ್ ಮಾಡಿ "ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕಾಗಿ" ಕ್ಷಮೆಯಾಚಿಸಿದ್ದರು.

English summary
Home Minister Narottam Mishra today said that a police case or First Information Report (FIR) will be registered against a woman who shot a dance video in a temple premises in Madhya Pradesh's Chhatarpur district and posted it on social media
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X