ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಗಾಸಸ್‌ನಿಂದ ನನ್ನ ಫೋನ್‌ ಹ್ಯಾಕ್‌: ಭೀಮಾ ಕೋರೆಗಾಂವ್ ಆರೋಪಿಗಳ ಪರ ವಕೀಲ

|
Google Oneindia Kannada News

ನವದೆಹಲಿ, ಜನವರಿ 09: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ವಾದ ಮಾಡುತ್ತಿರುವ ವಕೀಲ ನಿಹಾಲ್ ಸಿಂಗ್ ರಾಥೋಡ್ ತಮ್ಮ ಫೋನ್‌ ಅನ್ನು ಪೆಗಾಸಸ್ ಸ್ಪೈವೇರ್‌ ಮೂಲಕ ಹ್ಯಾಕ್‌ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಈ ಪೆಗಾಸಸ್‌ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ನೇಮಿಸಿರುವ ತಾಂತ್ರಿಕ ಸಮಿತಿಗೆ ರಾಥೋಡ್‌ ಪತ್ರ ಬರೆದಿದ್ದಾರೆ.

ನಾಗಪುರ ಮೂಲದ ವಕೀಲ, ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ವಾದ ಮಾಡುತ್ತಿರುವ ನಿಹಾಲ್ ಸಿಂಗ್, "ನನ್ನ ಫೋನ್‌ ಹ್ಯಾಕ್‌ ಮಾಡಲಾಗಿದೆ ಎಂಬ ಅನುಮಾನ ಬರಲು ಸಾಕಷ್ಟು ಕಾರಣಗಳು ಇದೆ. ನಾನು ಈ ಪೆಗಾಸಸ್‌ ಬೇಹುಗಾರಿಕೆಯ ಬಗ್ಗೆ ತನಿಖೆ ನಡೆಸುತ್ತಿರುವ ತನಿಖಾ ಸಮಿತಿಯ ಮುಂದೆ ಹಾಜರಾಗಿ ನನ್ನ ಫೋನ್‌ ಅನ್ನು ಒಪ್ಪಿಸುತ್ತೇನೆ," ಎಂದು ತಿಳಿಸಿದ್ದಾರೆ.

ಮುಂಗಾರು ಅಧಿವೇಶನದ ವೇಳೆ ಅಶಿಸ್ತಿನ ವರ್ತನೆ: 12 ವಿಪಕ್ಷ ಸಂಸದರು ರಾಜ್ಯಸಭೆಯಿಂದ ಅಮಾನತುಮುಂಗಾರು ಅಧಿವೇಶನದ ವೇಳೆ ಅಶಿಸ್ತಿನ ವರ್ತನೆ: 12 ವಿಪಕ್ಷ ಸಂಸದರು ರಾಜ್ಯಸಭೆಯಿಂದ ಅಮಾನತು

ವಕೀಲ ನಿಹಾಲ್ ಸಿಂಗ್ ರಾಥೋಡ್ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆರೋಪಿಗಳಾಗಿರುವ ಸುರೇಂದ್ರ ಗಾಡ್ಲಿಂಗ್‌, ಸುಧೀರ್ ಧಾವಲೆ, ಮಹೇಶ್ ರಾವುತ್, ಶೋಮಾ ಸೇನ್, ರಮೇಶ್ ಗಾಯ್ಚೊರ್‌ ಮತ್ತು ಸಾಗರ್ ಗೋರ್ಖೆ ಪರವಾಗಿ ವಾದ ಮಾಡುತ್ತಿದ್ದಾರೆ.

Bhima Koregaon accused and their counsel write to SCs Pegasus technical committee alleging snooping

ಇತ್ತೀಚೆಗೆ ಪೆಗಾಸಸ್‌ ಬೇಹುಗಾರಿಕೆ ಬಗ್ಗೆ ತನಿಖೆಗೆ ಸುಪ್ರೀಂ ಕೋರ್ಟ್ ನೇಮಿಸಿರುವ ತಾಂತ್ರಿಕ ಸಮಿತಿಯು ಇತ್ತೀಚೆಗೆ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿತ್ತು. ತಮ್ಮ ಸಾಧನಗಳು ಪೆಗಾಸಸ್‌ ಸ್ಪೈವೇರ್‌ ಮೂಲಕ ಹ್ಯಾಕ್‌ ಮಾಡಲಾಗಿದೆ ಎಂಬ ಅನುಮಾನ ಇದ್ದರೆ ಈ ಬಗ್ಗೆ ತನಿಖೆಯನ್ನು ನಡೆಸುವ ನಿಟ್ಟಿನಲ್ಲಿ ವಿವರವನ್ನು ನೀಡಬೇಕು. ಹಾಗೆಯೇ ಸಾಕ್ಷಿಯನ್ನು ನೀಡಬೇಕು ಎಂದು ಸುಪ್ರೀಂಕೋರ್ಟ್‌ ರಚಿಸಿರುವ ತಾಂತ್ರಿಕ ಸಮಿತಿ ಹೇಳಿತ್ತು.

ಆ ಬೆನ್ನಲ್ಲೇ "ನನ್ನ ಫೋನ್‌ ಅನ್ನು ಪೆಗಾಸಸ್‌ ಮೂಲಕ ಹ್ಯಾಕ್‌ ಮಾಡಲಾಗಿದೆ ಎಂಬ ಅನುಮಾನ ಹುಟ್ಟಲು ಹಲವಾರು ಕಾರಣಗಳು ಇದೆ," ಎಂದು ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ವಾದ ಮಾಡುತ್ತಿರುವ ವಕೀಲ ನಿಹಾಲ್ ಸಿಂಗ್ ರಾಥೋಡ್ ಆರೋಪ ಮಾಡಿದ್ದಾರೆ. "ವಾಟ್ಸಾಪ್‌ ಅಪ್ಲಿಕೇಷನ್‌ ಪ್ರವೇಶಿಸುವ ಮೂಲಕ ನನ್ನ ಮೊಬೈಲ್‌ ಅನ್ನು ಪೆಗಾಸಸ್‌ ಬಳಕೆ ಮಾಡಿ ಹ್ಯಾಕ್‌ ಮಾಡಲಾಗಿದೆ ಎಂದು ನಾನು ಬಲವಾಗಿ ನಂಬಲು ಹಲವಾರು ಕಾರಣಗಳು ಇದೆ. ನನ್ನ ಫೋನ್‌ ಹ್ಯಾಕ್‌ ಮಾಡಲಾಗಿದೆ ಎಂದು ಖುದ್ದು ವಾಟ್ಸಾಪ್‌ನಿಂದ ಅಧಿಕೃತ ಸಂದೇಶ ನನಗೆ ಬಂದಿದೆ. ಈ ಸಂದೇಶ ನನಗೆ ವಾಟ್ಸಾಪ್‌ ಮೂಲಕವೇ ಬಂದಿದೆ. ಅದು ನನ್ನ ಮೊಬೈಲ್‌ನಲ್ಲಿ ಹಾಗೆಯೇ ಉಳಿಸಿಕೊಂಡಿದ್ದೇನೆ," ಎಂದು ವಕೀಲ ನಿಹಾಲ್ ಸಿಂಗ್ ರಾಥೋಡ್ ಆರೋಪ ಮಾಡಿದ್ದಾರೆ.

ಪೆಗಾಸಸ್ ಬೇಹುಗಾರಿಕೆ ತಂತ್ರಾಂಶವನ್ನು ಕಪ್ಪುಪಟ್ಟಿಗೆ ಸೇರಿಸಿದ ಯುಎಸ್! ಪೆಗಾಸಸ್ ಬೇಹುಗಾರಿಕೆ ತಂತ್ರಾಂಶವನ್ನು ಕಪ್ಪುಪಟ್ಟಿಗೆ ಸೇರಿಸಿದ ಯುಎಸ್!

ಭೀಮಾ ಕೋರೆಗಾಂವ್ ಆರೋಪಿ ರೋನಾ ವಿಲ್ಸನ್ ಫೋನ್‌ ಕೂಡಾ ಹ್ಯಾಕ್‌

ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಸಾಮಾಜಿಕ ಕಾರ್ಯಕರ್ತ ರೋನಾ ವಿಲ್ಸನ್ ಫೋನ್‌ ಅನ್ನು 2018 ರ ಜೂನ್‌ನಲ್ಲಿ ಅವರನ್ನು ಬಂಧಿಸುವ ಮೂರು ತಿಂಗಳ ಮೊದಲು ಪೆಗಾಸಸ್ ಸ್ಪೈವೇರ್ ಮೂಲಕ ಹ್ಯಾಕ್‌ ಮಾಡಲಾಗಿದೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಸಾಧನದ ವಿಧಿವಿಜ್ಞಾನ ವಿಶ್ಲೇಷಣೆಯು ಬಹಿರಂಗಪಡಿಸಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. 2018 ರಲ್ಲಿ ಪುಣೆ ಸಮೀಪದ ಹಳ್ಳಿಯೊಂದರಲ್ಲಿ ಜಾತಿ ಹಿಂಸಾಚಾರವನ್ನು ಹುಟ್ಟುಹಾಕಲು ಸಂಚು ರೂಪಿಸಿದ ಆರೋಪದ ಮೇಲೆ ಇನ್ನೂ ಜೈಲಿನಲ್ಲಿರುವ 13 ಕಾರ್ಯಕರ್ತರು ಮತ್ತು ಶಿಕ್ಷಣತಜ್ಞರಲ್ಲಿ ವಿಲ್ಸನ್ ಕೂಡ ಸೇರಿದ್ದಾರೆ.

ಇಸ್ರೇಲಿ ತಂತ್ರಜ್ಞಾನ ಕಂಪನಿ ಎನ್‌ಎಸ್‌ಒ ಗ್ರೂಪ್ ಅಭಿವೃದ್ಧಿಪಡಿಸಿದ ಪೆಗಾಸಸ್ ಸ್ಪೈವೇರ್ ಬಳಕೆ ಮಾಡಿ ದೇಶದಲ್ಲಿ ಹಲವಾರು ಮಂದಿಯ ಫೋನ್‌ಗಳನ್ನು ಹ್ಯಾಕ್‌ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ. ಆದರೆ ಸಂಸ್ಥೆ ಮಾತ್ರ ತನ್ನ ಉತ್ಪನ್ನಗಳನ್ನು ಸರ್ಕಾರಿ ಕಾನೂನು ಜಾರಿ ಮತ್ತು ಗುಪ್ತಚರ ಗ್ರಾಹಕರಿಗೆ ಭದ್ರತಾ ಬೆದರಿಕೆಗಳನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡಲು ಮಾತ್ರ ಮಾರಾಟ ಮಾಡುತ್ತದೆ ಎಂದು ಹೇಳಿದೆ. (ಒನ್‌ಇಂಡಿಯಾ ಸುದ್ದಿ)

Recommended Video

South Africa ಹಾಗು India ನಡುವಿನ ಮೂರನೇ ಪಂದ್ಯಕ್ಕೆ Kohli ಸಿದ್ಧ! | Oneindia Kannada

English summary
Bhima Koregaon accused and their counsel write to SC's Pegasus technical committee alleging snooping.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X