ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಟ್ಕಳ ಸಹೋದರರು, ಛೋಟಾ ಶಕೀಲ್ ಸೇರಿ 18 ಮಂದಿಗೆ 'ಉಗ್ರ'ರ ಪಟ್ಟ

|
Google Oneindia Kannada News

ನವದೆಹಲಿ, ಅಕ್ಟೋಬರ್ 27: ಕೇಂದ್ರ ಗೃಹ ಸಚಿವಾಲಯವು 18 ಮಂದಿಯನ್ನು ಉಗ್ರರು ಎಂದು ಗುರುತಿಸಿದೆ. ಇವರೆಲ್ಲರೂ ಪ್ರಸ್ತುತ ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ. ಕಳೆದ ವರ್ಷ ಸಂಸತ್ ಅನುಮೋದನೆ ಪಡೆದ ಭಯೋತ್ಪಾದನಾ ವಿರೋಧಿ ಕಾಯ್ದೆಯ ಅಡಿಯಲ್ಲಿ ಇವರನ್ನು ಭಯೋತ್ಪಾದಕರು ಎಂದು ಹೆಸರಿಸಲಾಗಿದೆ.

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) 1967ಕ್ಕೆ ಕಳೆದ ವರ್ಷದ ಆಗಸ್ಟ್‌ನಲ್ಲಿ ತಿದ್ದುಪಡಿ ತಂದಿದ್ದ ಕೇಂದ್ರ ಸರ್ಕಾರ, ವ್ಯಕ್ತಿಗಳನ್ನು ಉಗ್ರರು ಎಂದು ಹೆಸರಿಸಲು ಅವಕಾಶ ನೀಡಿತ್ತು. ಇದಕ್ಕೂ ಮುನ್ನೆ 13 ಮಂದಿಯನ್ನು ಉಗ್ರರು ಎಂದು ಗುರುತಿಸಲಾಗಿತ್ತು.

ಜಮ್ಮು ಕಾಶ್ಮೀರದಲ್ಲಿ ಉಗ್ರರಿಂದ ಪೊಲೀಸ್ ಇನ್ಸ್ ಪೆಕ್ಟರ್ ಹತ್ಯೆಜಮ್ಮು ಕಾಶ್ಮೀರದಲ್ಲಿ ಉಗ್ರರಿಂದ ಪೊಲೀಸ್ ಇನ್ಸ್ ಪೆಕ್ಟರ್ ಹತ್ಯೆ

ಈ ಘೋಷಿತ ಉಗ್ರರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಸಯ್ಯದ್ ಸಲಾಹುದ್ದೀನ್, ಇಂಡಿಯನ್ ಮುಜಾಹಿದ್ದೀನ್ ಸ್ಥಾಪಕರಾದ ರಿಯಾಜ್ ಭಟ್ಕಳ ಮತ್ತು ಇಕ್ಬಾಲ್ ಭಟ್ಕಳ ಹಾಗೂ ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂನ ಆಪ್ತ ಛೋಟಾ ಶಕೀಲ್ ಸೇರಿದ್ದಾರೆ.

'ಈ ವ್ಯಕ್ತಿಗಳು ಗಡಿ ಭಾಗದೊಳಗೆ ಅನೇಕ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ದೇಶವನ್ನು ಅಸ್ಥಿರಗೊಳಿಸಲು ಅನೇಕ ರೀತಿಯಲ್ಲಿ ಪ್ರಯತ್ನಗಳನ್ನು ನಡೆಸಿದ್ದರು. ರಾಷ್ಟ್ರೀಯ ಭದ್ರತೆ ಮತ್ತು ಭಯೋತ್ಪಾದನೆಯೆಡೆಗಿನ ಶೂನ್ಯ ಸಹಿಷ್ಣುತೆಯನ್ನು ಬಲಪಡಿಸುವ ಬದ್ಧತೆಗಾಗಿ 18 ಮಂದಿಯನ್ನು ಉಗ್ರರು ಎಂದು ಘೋಷಿಸಲಾಗಿದೆ' ಎಂದು ಗೃಹ ಸಚಿವಾಲಯ ಹೇಳಿಕೆ ತಿಳಿಸಿದೆ. ಮುಂದೆ ಓದಿ.

ಲಷ್ಕರ್ ಕಮಾಂಡರ್ ಸಾಜಿದ್ ಮಿರ್

ಲಷ್ಕರ್ ಕಮಾಂಡರ್ ಸಾಜಿದ್ ಮಿರ್

* 26/11ರ ಮುಂಬೈ ಭಯೋತ್ಪಾದನಾ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಪಾಕಿಸ್ತಾನ ಮೂಲದ ಲಷ್ಕರ್ ಎ ತಯಬಾ ಕಮಾಂಡರ್ ಸಾಜಿದ್ ಮಿರ್.

* ಮುಂಬೈ ದಾಳಿಯಲ್ಲಿ ಆರೋಪಿಯಾಗಿರುವ, ಜಮ್ಮು ಮತ್ತು ಕಾಶ್ಮೀರದಲ್ಲಿ ಲಷ್ಕರ್ ಚಟುವಟಿಕೆಗಳನ್ನು ನಡೆಸುತ್ತಿರುವ ಯೂಸುಫ್ ಮುಜಾಮಿಲ್.

ಅಬ್ದುರ್ ರೆಹಮಾನ್ ಮಕ್ಕಿ

ಅಬ್ದುರ್ ರೆಹಮಾನ್ ಮಕ್ಕಿ

* ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್‌ನ ಅಳಿಯ ಮತ್ತು ಲಷ್ಕರ್ ಸಂಘಟನೆಯ ರಾಜಕೀಯ ವ್ಯವಹಾರಗಳು ಹಾಗೂ ವಿದೇಶಾಂಗ ಸಂಬಂಧ ಇಲಾಖೆಯ ಮುಖ್ಯಸ್ಥ ಅಬ್ದುರ್ ರೆಹಮಾನ್ ಮಕ್ಕಿ.

* ಲಷ್ಕರ್ ಸಂಘಟನೆಯ ಭಾಗವಾದ ಫಾಲಾಹ್-ಐ-ಇನ್ಸಾನಿಯತ್ ಪ್ರತಿಷ್ಠಾನದ ಉಪ ಮುಖ್ಯಸ್ಥ ಶಾಹಿದ್ ಮೆಹಮೂದ್ ಅಲಿಯಾಸ್ ಶಾಹಿದ್ ಮೆಹಮೂದ್ ರೆಹಮತುಲ್ಲಾ.

ಬೆಂಗಳೂರಲ್ಲಿ ಎನ್‌ಐಎಯಿಂದ ಇಬ್ಬರು ಶಂಕಿತ ಉಗ್ರರ ಬಂಧನಬೆಂಗಳೂರಲ್ಲಿ ಎನ್‌ಐಎಯಿಂದ ಇಬ್ಬರು ಶಂಕಿತ ಉಗ್ರರ ಬಂಧನ

ಅಬ್ದುಲ್ ರಫ್ ಅಸ್ಗರ್

ಅಬ್ದುಲ್ ರಫ್ ಅಸ್ಗರ್

* 2002ರ ಅಕ್ಷರಧಾಮ ದೇವಸ್ಥಾನದಲ್ಲಿ ಭಾಗಿಯಾದ ಮತ್ತು 2005ರ ಹೈದರಾಬಾದ್ ಕಾರ್ಯಪಡೆ ಕಚೇರಿ ಮೇಲಿನ ಆತ್ಮಹತ್ಯೆ ದಾಳಿ ಪ್ರಕರಣದ ಫರ್ಹಾತುಲ್ಲಾ ಘೋರಿ ಅಲಿಯಾಸ್ ಅಬು ಸೂಫಿಯಾನ್.

* ಪಾಕಿಸ್ತಾನದಲ್ಲಿ ಸೇನಾ ತರಬೇತಿ ಶಿಬಿರ ರಚಿಸುವುದರಲ್ಲಿ ಮುಖ್ಯವಾಗಿ ಭಾಗಿಯಾಗಿದ್ದ ಮತ್ತು 2001ರ ಸಂಸತ್ ಭವನದ ಮೇಲಿನ ದಾಳಿಯ ಮುಖ್ಯ ಸಂಚುಕೋರ ಅಬ್ದುಲ್ ರೌಫ್ ಅಸ್ಗರ್.

ಯೂಸುಫ್ ಅಜರ್

ಯೂಸುಫ್ ಅಜರ್

* ಸಂಸತ್ ಭವನದ ಮೇಲಿನ ದಾಳಿಯ ಸಂಚುಕೋರ ಮತ್ತು 1999ರ ಇಂಡಿಯನ್ ಏರ್‌ಲೈನ್ಸ್ ವಿಮಾನದ ಅಪಹರಣದಲ್ಲಿ ಭಾಗಿಯಾಗಿದ್ದ ಇಬ್ರಾಹಿಂ ಅಥರ್.

* ಇಂಡಿಯನ್ ಏರ್‌ಲೈನ್ಸ್ ಐಸಿ 814 ವಿಮಾನ ಅಪಹರಣದಲ್ಲಿ ಭಾಗಿಯಾಗಿದ್ದ ಯೂಸುಫ್ ಅಜರ್.

* ಭಾರತದಲ್ಲಿ ಜೈಶ್ ಎ ಮೊಹಮ್ಮದ್ ಕೃತ್ಯಗಳಲ್ಲಿ ಸಕ್ರಿಯವಾಗಿದ್ದ ಮತ್ತು ಭಾರತದಲ್ಲಿ ಉಗ್ರರ ದಾಳಿಗಳನ್ನು ನಡೆಸುವುದರಲ್ಲಿ, ಸಂಚು ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸಿಯಾಲ್ಕೋಟ್ ವಲಯದ ಜೆಇಎಂ ಕಮಾಂಡರ್ ಶಾಹಿದ್ ಲತೀಫ್.

ಗುಲಾಮ್ ನಬಿ ಖಾನ್

ಗುಲಾಮ್ ನಬಿ ಖಾನ್

* ಹಿಜ್ಬುಲ್ ಮುಜಾಹಿದ್ದೀನ್ ಉಪ ನಾಯಕ ಗುಲಾಮ್ ನಬಿ ಖಾನ್.

* ಕಾಶ್ಮೀರ ಕಣಿವೆಯಲ್ಲಿ ಹಿಜ್ಬುಲ್ ಚಟುವಟಿಕೆಗಳನ್ನು ನಡೆಸಲು ಹಣಕಾಸಿನ ನೆರವು ಒದಗಿಸುತ್ತಿರುವ ಹಾಗೂ ಗುಂಪಿನ ಆರ್ಥಿಕ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿರುವ ಹಿಜ್ಬುಲ್ ಮುಜಾಹಿದ್ದೀನ್ ಉಪ ಮುಖ್ಯಸ್ಥ ಜಫರ್ ಹುಸೇನ್ ಭಾ.

ಮೊಹಮ್ಮದ್ ಅನಿಸ್ ಶೇಖ್

ಮೊಹಮ್ಮದ್ ಅನಿಸ್ ಶೇಖ್

* 1993ರ ಮುಂಬೈ ಸರಣಿ ಬಾಂಬ್ ಸ್ಫೋಟಕ್ಕೆ ಶಸ್ತ್ರಾಸ್ತ್ರ, ಮದ್ದುಗುಂಡು ಹಾಗೂ ಹ್ಯಾಂಡ್ ಗ್ರೆನೇಡ್‌ಗಳನ್ನು ಪೂರೈಸುತ್ತಿದ್ದ ಆರೋಪಿ ಮೊಹಮ್ಮದ್ ಅನಿಸ್ ಶೇಖ್.

* 1993 ಮುಂಬೈ ಬಾಂಬ್ ಸ್ಫೋಟದಲ್ಲಿ ಕ್ರಿಮಿನಲ್ ಸಂಚು ರೂಪಿಸಿದ ಇಬ್ರಾಹಿಂ ಮೆಮನ್ ಮತ್ತು ದಾವೂದ್ ಇಬ್ರಾಹಿಂನ ಸಹವರ್ತಿ ಜಾವೇದ್ ದಾವೂದ್ ಟೈಲರ್.

ಭಟ್ಕಳ ಸಹೋದರರು

ಭಟ್ಕಳ ಸಹೋದರರು

* ಚಿನ್ನಸ್ವಾಮಿ ಕ್ರೀಡಾಂಗಣ ಬಾಂಬ್ ಸ್ಫೋಟ, ಜಾಮಾ ಮಸೀದಿ, ಜರ್ಮನ್ ಬೇಕರಿ, ಶೀತಲ್‌ಘಾಟ್ ಮತ್ತು 2011ರ ಮುಂಬೈ ಸ್ಫೋಟ ಸೇರಿದಂತೆ ವಿವಿಧ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಇಂಡಿಯನ್ ಮುಜಾಹಿದ್ದೀನ್ ಸಂಸ್ಥಾಪಕ ರಿಯಾಜ್ ಭಟ್ಕಳ್ ಮತ್ತು ಆತನ ಸಹೋದರ ಇಕ್ಬಾಲ್ ಭಟ್ಕಳ್.

English summary
Home Ministry has designated 18 more individuals including Bhatkal brothers, Chota Shakeel as terrorists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X