ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪದೇ ಪದೇ ಭಾರತದ ಕೋವ್ಯಾಕ್ಸಿನ್ ಅನುಮೋದನೆಗೆ ಹಿನ್ನಡೆ; WHO ಜೊತೆ ಸಭೆ

|
Google Oneindia Kannada News

ನವದೆಹಲಿ, ಜೂನ್ 17: ಹೈದರಾಬಾದ್ ಮೂಲದ ಲಸಿಕೆ ತಯಾರಕ ಸಂಸ್ಥೆ ಭಾರತ್ ಬಯೋಟೆಕ್‌ಗೆ ಪದೇ ಪದೇ ಅಡ್ಡಿ ಎದುರಾಗುತ್ತಲೇ ಇದೆ. ವಿದೇಶಗಳಲ್ಲಿ ತನ್ನ ಕೋವ್ಯಾಕ್ಸಿನ್‌ ಲಸಿಕೆಗೆ ಅನುಮೋದನೆ ಪಡೆಯುವಲ್ಲಿ ಭಾರತ್ ಬಯೋಟೆಕ್ ಹಿನ್ನಡೆ ಅನುಭವಿಸುತ್ತಲೇ ಇದೆ. ಹೀಗಾಗಿ ತನ್ನ ಕೋವ್ಯಾಕ್ಸಿನ್ ಲಸಿಕೆ ಅನುಮೋದನೆ ಸಂಬಂಧ ಮುಂದಿನ ಬುಧವಾರ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಪೂರ್ವ ಸಲ್ಲಿಕೆ ಸಭೆ ನಡೆಸಲಿದೆ.

ತನ್ನ ಕೋವ್ಯಾಕ್ಸಿನ್ ಲಸಿಕೆಯ ಅನುಮೋದನೆಗೆ ಸಂಬಂಧಿಸಿದಂತೆ ಜೂನ್ 23ರಂದು ಸಭೆ ನಡೆಸಲಿದ್ದು, ಇನ್ನಷ್ಟು ಮಾಹಿತಿಗಳನ್ನು ಒದಗಿಸುವುದಾಗಿ ತಿಳಿಸಿದೆ. ಲಸಿಕೆಯ ಮೂರನೇ ಹಂತದ ಪ್ರಾಯೋಗಿಕ ದತ್ತಾಂಶ ಕೊರತೆ ಕಾರಣವಾಗಿ ಕೋವ್ಯಾಕ್ಸಿನ್‌ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಲು ಹಿಂದೇಟು ಹಾಕಿದೆ. ಈ ದತ್ತಾಂಶ, ಲಸಿಕೆಯ ರಫ್ತಿಗೆ ಹಾಗೂ ಲಸಿಕೆ ಪಾಸ್‌ಪೋರ್ಟ್‌ ಪಡೆದುಕೊಳ್ಳಲು ಅತ್ಯವಶ್ಯಕವಾಗಿದೆ. ಮುಂದೆ ಓದಿ...

 ಲಸಿಕೆಗೆ ಸಂಪೂರ್ಣ ಅನುಮೋದನೆ ದೊರೆತಿಲ್ಲ

ಲಸಿಕೆಗೆ ಸಂಪೂರ್ಣ ಅನುಮೋದನೆ ದೊರೆತಿಲ್ಲ

ಜುಲೈ ತಿಂಗಳಿನಲ್ಲಿ ಕೋವ್ಯಾಕ್ಸಿನ್ ಲಸಿಕೆಯ ದತ್ತಾಂಶವನ್ನು ಸಾರ್ವಜನಿಕಗೊಳಿಸುವುದಾಗಿ ಭಾರತ್ ಬಯೋಟೆಕ್ ಈ ಹಿಂದೆ ಎಎನ್‌ಐಗೆ ತಿಳಿಸಿತ್ತು. ಅದರ ನಂತರ ಕಂಪನಿಯು ಭಾರತದಲ್ಲಿ ಕೊರೊನಾ ಲಸಿಕೆಯ ಸಂಪೂರ್ಣ ಪರವಾನಗಿಗೆ ಅರ್ಜಿ ಸಲ್ಲಿಸಲಿದೆ ಎಂದು ತಿಳಿಸಿತ್ತು. ಲಸಿಕೆಯ ನೈಜ ದಕ್ಷತೆ ಪರೀಕ್ಷಿಸಲು ಹಾಗೂ ವೈಜ್ಞಾನಿಕ, ಪರಿಣಾಮಕಾರಿ ಅಂಶಗಳ ಮಾನದಂಡಗಳನ್ನು ಪೂರೈಸಲು ನಾಲ್ಕನೇ ಹಂತದ ಪ್ರಯೋಗಗಳನ್ನು ಸಹ ನಡೆಸಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.

ಕೋವ್ಯಾಕ್ಸಿನ್ ಪಡೆದ ವಿದ್ಯಾರ್ಥಿಗಳನ್ನು ಲಸಿಕೆ ಪಡೆಯದವರು ಎಂದು ವಿದೇಶಿ ವಿವಿ ಪರಿಗಣನೆಕೋವ್ಯಾಕ್ಸಿನ್ ಪಡೆದ ವಿದ್ಯಾರ್ಥಿಗಳನ್ನು ಲಸಿಕೆ ಪಡೆಯದವರು ಎಂದು ವಿದೇಶಿ ವಿವಿ ಪರಿಗಣನೆ

 ಕೋವ್ಯಾಕ್ಸಿನ್ ಅರ್ಜಿ ತಿರಸ್ಕರಿಸಿದ್ದ FDA

ಕೋವ್ಯಾಕ್ಸಿನ್ ಅರ್ಜಿ ತಿರಸ್ಕರಿಸಿದ್ದ FDA

ಪ್ರಸ್ತುತ ಕೋವ್ಯಾಕ್ಸಿನ್ ಲಸಿಕೆಗೆ ತುರ್ತು ಬಳಕೆಗಾಗಿ ಭಾರತೀಯ ಔಷಧ ನಿಯಂತ್ರಕ ಸಂಸ್ಥೆ ಡಿಸಿಜಿಐ ಅನುಮೋದನೆ ನೀಡಿದ್ದು, ಭಾರತದಲ್ಲಿ ಈ ಲಸಿಕೆಯನ್ನು ಎಲ್ಲೆಡೆ ನೀಡಲಾಗುತ್ತಿದೆ. ಆದರೆ ಈಚೆಗೆ ಲಸಿಕೆಯ ವೈದ್ಯಕೀಯ ಪ್ರಯೋಗಗಳ ಮಾಹಿತಿ ಕೊರತೆಯನ್ನು ಉಲ್ಲೇಖಿಸಿದ್ದ ಅಮೆರಿಕದ ಆಹಾರ ಹಾಗೂ ಔಷಧ ನಿಯಂತ್ರಕ ಸಂಸ್ಥೆ, ಈ ಲಸಿಕೆಯ ತುರ್ತು ಬಳಕೆಯ ದೃಢೀಕರಣಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು. ಇದು ವಿದೇಶಗಳಲ್ಲಿ ಅನುಮೋದನೆ ಪಡೆಯಲು ಕೋವ್ಯಾಕ್ಸಿನ್‌ ಗೆ ಅಡೆತಡೆಗಳನ್ನು ಉಂಟು ಮಾಡಿದೆ.

 ಕೋವ್ಯಾಕ್ಸಿನ್ ಪಡೆದ ವಿದ್ಯಾರ್ಥಿಗಳನ್ನು ಲಸಿಕೆ ಪಡೆಯದವರೆಂದು ಪರಿಗಣನೆ

ಕೋವ್ಯಾಕ್ಸಿನ್ ಪಡೆದ ವಿದ್ಯಾರ್ಥಿಗಳನ್ನು ಲಸಿಕೆ ಪಡೆಯದವರೆಂದು ಪರಿಗಣನೆ

ಗಡಿಗಳಾಚೆಗೆ ಕೋವ್ಯಾಕ್ಸಿನ್ ಲಸಿಕೆ ರಫ್ತು ಮಾಡಲು WHO ಅನುಮೋದನೆ ಅವಶ್ಯಕವಾಗಿದ್ದು, ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಭಾರತ್ ಬಯೋಟೆಕ್‌ಗೆ ಅಡೆತಡೆ ಉಂಟಾಗಿದೆ. ಜೊತೆಗೆ ಭಾರತದಲ್ಲಿ ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡವರನ್ನು ವಿದೇಶಿ ವಿಶ್ವವಿದ್ಯಾಲಯಗಳು ಲಸಿಕೆ ಹಾಕದವರು ಎಂದು ಪರಿಗಣಿಸುತ್ತಿರುವುದಾಗಿ ಎಬಿವಿಪಿ ತಿಳಿಸಿದೆ. ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು ಸೇರಿದಂತೆ ಹಲವು ದೇಶಗಳು ಕೊವಾಕ್ಸಿನ್ ಲಸಿಕೆ ಪಡೆದ ಭಾರತೀಯರನ್ನು ಲಸಿಕೆ ಹಾಕಿಸಿಕೊಳ್ಳದವರು ಎಂದು ಪರಿಗಣಿಸುತ್ತವೆ ಎಂದು ಎಬಿವಿಪಿ ವಿವರಿಸಿದೆ.

ಕೋವ್ಯಾಕ್ಸಿನ್ ಲಸಿಕೆ ದುಬಾರಿ ಬೆಲೆ ಸಮರ್ಥಿಸಿಕೊಂಡ ಭಾರತ್ ಬಯೋಟೆಕ್ಕೋವ್ಯಾಕ್ಸಿನ್ ಲಸಿಕೆ ದುಬಾರಿ ಬೆಲೆ ಸಮರ್ಥಿಸಿಕೊಂಡ ಭಾರತ್ ಬಯೋಟೆಕ್

 500 ಕೋಟಿ ರೂ ಬಂಡವಾಳ ಹೂಡಿಕೆ

500 ಕೋಟಿ ರೂ ಬಂಡವಾಳ ಹೂಡಿಕೆ

ಲಸಿಕೆಯ ಅಭಿವೃದ್ಧಿ, ಕ್ಲಿನಿಕಲ್ ಪ್ರಯೋಗಗಳು ಮತ್ತು ಲಸಿಕೆ ಉತ್ಪಾದನೆಯ ಸೌಲಭ್ಯಗಳ ನಿರ್ಮಾಣಕ್ಕೆ ಭಾರತ್ ಬಯೋಟೆಕ್ ಕಂಪನಿ ಕನಿಷ್ಠ 500 ಕೋಟಿ ರೂ ಹೂಡಿಕೆ ಮಾಡಿದೆ. ಕಂಪನಿ ಪ್ರಕಾರ ಭಾರತದಲ್ಲಿ ಇಲ್ಲಿಯವರೆಗೆ ಕನಿಷ್ಠ 40 ದಶಲಕ್ಷ ಡೋಸ್ ಕೋವ್ಯಾಕ್ಸಿನ್ ಸರಬರಾಜು ಮಾಡಲಾಗಿದೆ. ಹೊಸ ರೂಪಾಂತರಗಳ ವಿರುದ್ಧವೂ ಲಸಿಕೆಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದು ಕಂಪನಿ ತಿಳಿಸಿದೆ.

English summary
Hyderabad based vaccine manufacturer Bharat Biotech will hold its pre-submission meeting with WHO on June 23 regarding the approval of Covaxin
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X