ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್ 'ಗುಮ್ಮ'ಕ್ಕೂ ಮದ್ದು: ಖುಷಿ ಸುದ್ದಿ ನೀಡಿದ ಭಾರತ್ ಬಯೋಟೆಕ್

|
Google Oneindia Kannada News

ನವದೆಹಲಿ, ಮಾರ್ಚ್ 3: ಸಂಪೂರ್ಣ ಸ್ವದೇಶಿ ಲಸಿಕೆ ಭಾರತ್ ಬಯೋಟೆಕ್‌ನ 'ಕೋವ್ಯಾಕ್ಸಿನ್' ಕೊರೊನಾ ವೈರಸ್ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದ ಫಲಿತಾಂಶಗಳು ಕೊನೆಗೂ ಬಿಡುಗಡೆಯಾಗಿವೆ. ಈ ಲಸಿಕೆಯು ಎರಡನೆಯ ಡೋಸ್ ಪಡೆದವರಲ್ಲಿ ಸೋಂಕು ತಗುಲದಂತೆ ಶೇ 81ರಷ್ಟು ಮಧ್ಯಂತರ ದಕ್ಷತೆ ಹೊಂದಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಕೆಳ ಹಂತದಲ್ಲಿ ಕಂಡುಬಂದ ತೀವ್ರ, ಗಂಭೀರ ಮತ್ತು ಸಣ್ಣ ಪ್ರಮಾಣದ ಅಡ್ಡಪರಿಣಾಮಗಳನ್ನು ವೈದ್ಯಕೀಯ ಸೌಲಭ್ಯದಿಂದ ಬಗೆಹರಿಸಲಾಗಿದೆ. ಇದು ಬ್ರಿಟನ್ ಮಾದರಿ ಕೋವಿಡ್ ವೈರಸ್‌ ವಿರುದ್ಧವೂ ಪರಿಣಾಮಕಾರಿ ಎಂದು ಭಾರತ್ ಬಯೋಟೆಕ್‌ನ ಮಧ್ಯಂತರ ವಿಶ್ಲೇಷಣೆ ತಿಳಿಸಿದೆ.

'ರಾಷ್ಟ್ರೀಯ ವೈರಾಣು ಸಂಸ್ಥೆಯು ನಡೆಸಿದ ವಿಶ್ಲೇಷಣೆಯು, ಈ ಲಸಿಕೆಯಿಂದ ಉತ್ಪತ್ತಿಯಾಗುವ ಪ್ರತಿಕಾಯಗಳು ಬ್ರಿಟನ್ ಕೋವಿಡ್ ರೂಪಾಂತರ ತಳಿಗಳನ್ನು ಹಾಗೂ ಇತರೆ ಅಸಾದೃಶ್ಯ ತಳಿಗಳನ್ನು ಸಹ ತಟಸ್ಥಗೊಳಿಸಬಲ್ಲವು ಎಂದು ಸೂಚಿಸುತ್ತದೆ' ಎಂಬುದಾಗಿ ಕಂಪೆನಿ ತಿಳಿಸಿದೆ. ಮುಂದೆ ಓದಿ.

25,800 ಸ್ವಯಂಸೇವಕರು ಭಾಗಿ

25,800 ಸ್ವಯಂಸೇವಕರು ಭಾಗಿ

ಸುಮಾರು 25,800 ಸ್ವಯಂಸೇವಕರ ಮೇಲೆ ನಡೆಸಿದ ಪ್ರಯೋಗದ ಫಲಿತಾಂಶ ಆಧಾರದಲ್ಲಿ ಈ ಮೂರನೇ ಹಂತದ ಫಲಿತಾಂಶದ ದತ್ತಾಂಶ ಬಿಡುಗಡೆ ಮಾಡಲಾಗಿದೆ. ಲಸಿಕೆಯು ಹೆಚ್ಚು ಪರಿಣಾಮಕಾರಿಯಾಗುತ್ತಿದೆ ಎಂಬುದನ್ನು ಇದು ತೋರಿಸಿದೆ. ಇನ್ನಷ್ಟು ದತ್ತಾಂಶಗಳನ್ನು ಪಡೆದುಕೊಳ್ಳಲು ಹಾಗೂ ಲಸಿಕೆಯ ದಕ್ಷತೆಯನ್ನು ಮೌಲ್ಯಮಾಪನ ಮಾಡಲು 130 ಖಚಿತ ಪ್ರಕರಣಗಳ ಅಂತಿಮ ವಿಶ್ಲೇಷಣೆಗಾಗಿ ಪ್ರಯೋಗ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದೆ.

ಭಾರತದಲ್ಲಿ 1.54 ಕೋಟಿ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಭಾರತದಲ್ಲಿ 1.54 ಕೋಟಿ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ

ಕಳವಳ ವ್ಯಕ್ತವಾಗಿತ್ತು

ಕಳವಳ ವ್ಯಕ್ತವಾಗಿತ್ತು

ಮೂರನೇ ಹಂತದ ಪ್ರಯೋಗದ ದತ್ತಾಂಶಗಳು ಕೊರೊನಾ ವೈರಸ್ ವಿರುದ್ಧ ರಕ್ಷಣೆ ನೀಡುವಲ್ಲಿನ ಲಸಿಕೆಯ ಯಶಸ್ಸನ್ನು ಅಧ್ಯಯನ ಮಾಡುತ್ತವೆ. ಆದರೆ ಅದಕ್ಕೂ ಮೊದಲೇ ಡಿಜಿಸಿಐ ಅನುಮೋದನೆ ದೊರಕಿದ್ದು, ಕೋವ್ಯಾಕ್ಸಿನ್‌ನ ದಕ್ಷತೆ ಹಾಗೂ ಸುರಕ್ಷತೆ ಬಗ್ಗೆ ವ್ಯಾಪಕ ಕಳವಳಕ್ಕೆ ಕಾರಣವಾಗಿತ್ತು. ಈಗ ಅದಕ್ಕೆ ಉತ್ತರ ದೊರಕಿದಂತಾಗಿದೆ.

ಜನವರಿಯಲ್ಲಿ ಲಸಿಕೆಗೆ ಅನುಮತಿ

ಜನವರಿಯಲ್ಲಿ ಲಸಿಕೆಗೆ ಅನುಮತಿ

2021ರ ಜನವರಿಯಲ್ಲಿ ಆಕ್ಸ್‌ಫರ್ಡ್-ಆಸ್ಟ್ರಾಜೆನಿಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಮತ್ತು ಭಾರತದಲ್ಲಿ ಸೆರಮ್ ಸಂಸ್ಥೆ ಉತ್ಪಾದಿಸುತ್ತಿರುವ ಕೋವಿಶೀಲ್ಡ್ ಹಾಗೂ ಹೈದರಾಬಾದ್ ಮೂಲಕ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಎರಡು ತಿಂಗಳ ನಂತರ ಭಾರತ್ ಬಯೋಟೆಕ್ ಮೂರನೇ ಹಂತದ ಪ್ರಯೋಗದ ವಿವರ ಬಿಡುಗಡೆ ಮಾಡಿದೆ.

ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಳಕ್ಕೆ ರೂಪಾಂತರಿ ಸೋಂಕು ಕಾರಣವಲ್ಲಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಳಕ್ಕೆ ರೂಪಾಂತರಿ ಸೋಂಕು ಕಾರಣವಲ್ಲ

ಕೋವಿಶೀಲ್ಡ್ ಶೇ 70ರಷ್ಟು ದಕ್ಷತೆ

ಕೋವಿಶೀಲ್ಡ್ ಶೇ 70ರಷ್ಟು ದಕ್ಷತೆ

ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗ ಇನ್ನೂ ಪೂರ್ಣಗೊಂಡಿರಲಿಲ್ಲ. ಅದರ ದತ್ತಾಂಶ ಬಿಡುಗಡೆಯಾಗಿ ಲಸಿಕೆಯ ಸುರಕ್ಷತೆ ಹಾಗೂ ದಕ್ಷತೆಯ ಬಗ್ಗೆ ಖಾತರಿ ಸಿಗುವ ಮುನ್ನವೇ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದರಿಂದ ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದುಕೊಳ್ಳಲು ಅನೇಕರು ಹಿಂದೇಟು ಹಾಕಿದ್ದರು. ಕೋವಿಶೀಲ್ಡ್ ಲಸಿಕೆಯು ಶೇ 70ರಷ್ಟು ದಕ್ಷತೆಯನ್ನು ಪ್ರದರ್ಶಿಸಿತ್ತು. ಆದರೆ ಕೋವ್ಯಾಕ್ಸಿನ್ ಶೇ 81ರಷ್ಟು ಪರಿಣಾಮಕಾರಿ ಎನಿಸಿಕೊಂಡಿದೆ.

English summary
COVAXIN vaccine has showed interim efficacy of 81% in phase 3 trail and also works against UK variant says Bharat Biotech.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X