ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಶೀಘ್ರದಲ್ಲಿಯೇ ಬರಲಿದೆ ಮೂಗಿನ ಮೂಲಕ ನೀಡುವ ಕೋವಿಡ್-19 ಲಸಿಕೆ

|
Google Oneindia Kannada News

ನವದೆಹಲಿ, ಜನವರಿ 8: ಭಾರತದಲ್ಲಿ ವಿವಿಧ ಬಗೆಯ ಕೊರೊನಾ ವೈರಸ್ ಲಸಿಕೆಗಳು ಸಿದ್ಧವಾಗುತ್ತಿದೆ. ಅದರಲ್ಲಿ 'ನಾಸಿಕ ಲಸಿಕೆ'ಯೂ ಒಂದು. ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆ ಭಾರತದಲ್ಲಿ ಶೀಘ್ರವೇ ಸಿದ್ಧವಾಗಲಿದೆ. ಈಗಾಗಲೇ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ಪಡೆದಿರುವ ಹೈದರಾಬಾದ್‌ನ ಭಾರತ್ ಬಯೋಟೆಕ್ ಸಂಸ್ಥೆ ನಾಸಿಕ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ನಾಗಪುರದ ಗಿಲ್ಲುರ್ಕರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಒಂದು ಮತ್ತು ಎರಡನೆಯ ಹಂತದ ಪ್ರಯೋಗ ಆರಂಭಿಸಲು ಸನ್ನದ್ಧಗೊಂಡಿದೆ.

'ನಾವು ಮೂಗಿನ ಲಸಿಕೆಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇವೆ. ಅದಕ್ಕಾಗಿ ವಾಷಿಂಗ್ಟನ್‌ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಜತೆ ಪಾಲುದಾರಿಕೆ ಹೊಂದಿದ್ದೇವೆ. ಎರಡು ಡೋಸ್ ನಿಷ್ಕ್ರಿಯ ಲಸಿಕೆಗೆ ಹೋಲಿಸಿದರೆ ನಾವು ಸಿಂಗಲ್ ಡೋಸ್ ಲಸಿಕೆಯ ಮೇಲೆ ಗಮನ ಹರಿಸಿದ್ದೇವೆ. ಮೂಗಿನ ಲಸಿಕೆ ಅತ್ಯುತ್ತಮ ಆಯ್ಕೆ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ. ಕೊರೊನಾ ವೈರಸ್ ಮೂಗಿನ ಮೂಲಕವೂ ದಾಳಿ ನಡೆಸಬಹುದು' ಎಂದು ಭಾರತ್ ಬಯೋಟೆಕ್ ಮುಖ್ಯಸ್ಥ ಕೃಷ್ಣ ಎಲ್ಲಾ ಹೇಳಿದ್ದಾರೆ.

'ಮುಂದಿನ ಎರಡು ವಾರಗಳಲ್ಲಿ ನಾವು ನಾಸಿಕ ಕೋವ್ಯಾಕ್ಸಿನ್ ಪರೀಕ್ಷೆಯನ್ನು ಆರಂಭಿಸಲು ತಯಾರಿ ನಡೆಸಿದ್ದೇವೆ. ಚುಚ್ಚುಮದ್ದಿನ ಮೂಲಕ ನೀಡುವ ಲಸಿಕೆಗಿಂತಲೂ ಮೂಗಿನ ಮೂಲಕ ನೀಡುವ ಲಸಿಕೆ ಹೆಚ್ಚು ಪರಿಣಾಮಕಾರಿ ಎನ್ನುವುದಕ್ಕೆ ಸಾಕಷ್ಟು ವೈಜ್ಞಾನಿಕ ಪುರಾವೆಗಳಿವೆ. ಈ ನಿಟ್ಟಿನಲ್ಲಿ ಭಾರತ್ ಬಯೋಟೆಕ್ ಡಿಜಿಸಿಐಗೆ ಶೀಘ್ರದಲ್ಲಿಯೇ ಪ್ರಸ್ತಾಪ ಸಲ್ಲಿಸುವ ಪ್ರಕ್ರಿಯೆ ನಡೆಸಿದೆ' ಎಂದು ಡಾ. ಚಂದ್ರಶೇಖರ್ ಗಿಲ್ಲುರ್ಕರ್ ತಿಳಿಸಿದ್ದಾರೆ. ಮುಂದೆ ಓದಿ.

ಮಾಡೆರ್ನಾ ಲಸಿಕೆಯು ಎಷ್ಟು ವರ್ಷಗಳ ಕಾಲ ಕೊರೊನಾವೈರಸ್‌ನಿಂದ ರಕ್ಷಣೆ ನೀಡಬಹುದು? ಮಾಡೆರ್ನಾ ಲಸಿಕೆಯು ಎಷ್ಟು ವರ್ಷಗಳ ಕಾಲ ಕೊರೊನಾವೈರಸ್‌ನಿಂದ ರಕ್ಷಣೆ ನೀಡಬಹುದು?

ನಾಲ್ಕು ಕೇಂದ್ರಗಳಲ್ಲಿ ಪ್ರಯೋಗ

ನಾಲ್ಕು ಕೇಂದ್ರಗಳಲ್ಲಿ ಪ್ರಯೋಗ

ಭುವನೇಶ್ವರ, ಪುಣೆ, ನಾಗಪುರ ಮತ್ತು ಹೈದರಾಬಾದ್‌ನ ನಾಲ್ಕು ಕೇಂದ್ರಗಳಲ್ಲಿ ಮೊದಲ ಹಂತಗಳಲ್ಲಿ 18-65 ವರ್ಷದೊಳಗಿನ ಕನಿಷ್ಠ 30-45 ಆರೋಗ್ಯವಂತ ಸ್ವಯಂಸೇವಕರನ್ನು ಪ್ರಯೋಗಕ್ಕೆ ಬಳಸಿಕೊಳ್ಳಲಾಗುವುದು ಎಂದು ಸಂಸ್ಥೆ ಮಾಹಿತಿ ನೀಡಿದೆ.

ಎರಡು ಲಸಿಕೆಗಳ ಕಾರ್ಯ

ಎರಡು ಲಸಿಕೆಗಳ ಕಾರ್ಯ

ಪ್ರಸ್ತುತ ಭಾರತ್ ಬಯೋಟೆಕ್ ಮೂಗಿನ ಮೂಲಕ ನೀಡುವ ಎರಡು ಲಸಿಕೆಗಳ ಮೇಲೆ ಕೆಲಸ ಮಾಡುತ್ತಿದೆ. ಒಂದು ಅಮೆರಿಕ ಮೂಲದ ಫ್ಲುಗೆನ್ ಲಸಿಕೆ ಉತ್ಪಾದಕ ಸಂಸ್ಥೆ ಮತ್ತು ವಿಸ್ಕನ್ಸಿನ್ ಮ್ಯಾಡಿಸನ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ಸಹಯೋಗದಲ್ಲಿ ನಡೆಯುತ್ತಿದ್ದರೆ ಮತ್ತೊಂದು ಲಸಿಕೆಯು ವಾಷಿಂಗ್ಟನ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ಪಾಲುದಾರಿಕೆಯಲ್ಲಿ ಅಭಿವೃದ್ಧಿಯಾಗುತ್ತಿದೆ.

ವೈರಸ್ ವಿರುದ್ಧ ಲಸಿಕೆಗಳು 100% ರಕ್ಷಣೆ ಕೊಡುವುದಿಲ್ಲ; ತಜ್ಞರ ಎಚ್ಚರಿಕೆವೈರಸ್ ವಿರುದ್ಧ ಲಸಿಕೆಗಳು 100% ರಕ್ಷಣೆ ಕೊಡುವುದಿಲ್ಲ; ತಜ್ಞರ ಎಚ್ಚರಿಕೆ

ವೈರಸ್ ಹರಡುವಿಕೆ ನಿಗ್ರಹ

ವೈರಸ್ ಹರಡುವಿಕೆ ನಿಗ್ರಹ

ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆಯು ವೈರಸ್ ಹರಡುವಿಕೆಯನ್ನು ತಡೆಯುವಲ್ಲಿ ಮಹತ್ವ ಪಾತ್ರ ವಹಿಸುವ ಸಾಧ್ಯತೆ ಇದೆ ಎಂದು ಪರಿಣತರು ಹೇಳಿದ್ದಾರೆ. ಪ್ರಸ್ತುತ ಅಮೆರಿಕದಲ್ಲಿ ಈ ಲಸಿಕೆ ಪ್ರಯೋಗದ ಹಂತದಲ್ಲಿದೆ.

ಬಹುಬೇಗ ಸ್ಪಂದನೆ ನೀಡುತ್ತದೆ

ಬಹುಬೇಗ ಸ್ಪಂದನೆ ನೀಡುತ್ತದೆ

ಇತರೆ ಕೋವಿಡ್ ಲಸಿಕೆಗಳನ್ನು ಸ್ನಾಯುವಿನ ಮೂಲಕ ನೀಡಲಾಗುತ್ತದೆ. ಆದರೆ ನಾಸಲ್ ವ್ಯಾಕ್ಸಿನ್ ಅನ್ನು ಮನುಷ್ಯರಿಗೆ ಸೋಂಕು ಹರಡುವ ಮೂಲ ಜಾಗವಾದ ಮೂಗಿನ ಮೂಲಕವೇ ನೀಡಲಾಗುತ್ತದೆ. ಮೂಗಿನ ಮೂಲಕ ನೀಡಲಾಗುವ ಲಸಿಕೆಯು ದೇಹದಾದ್ಯಂತ ಬಲವಾದ ಪ್ರತಿರಕ್ಷಣಾ ಸ್ಪಂದನೆಯನ್ನು ನೀಡುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಆದರೆ ಅದು ಮುಖ್ಯವಾಗಿ ಮೂಗು ಹಾಗೂ ಉಸಿರಾಟದ ವ್ಯವಸ್ಥೆಗೆ ಹೆಚ್ಚು ಪರಿಣಾಮಕಾರಿ. ಇದರಿಂದ ದೇಹದಲ್ಲಿ ಸೋಂಕು ತನ್ನ ಹಿಡಿತ ಸಾಧಿಸುವುದನ್ನು ತಡೆಯುತ್ತದೆ.

English summary
Bharat Biotech developing a nasal vaccine at Gillurkar Multi Specialitiy Hospital in Nagpur is set begin trials soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X