ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಭಾರತ್ ಬಯೋಟೆಕ್‌ನ ಮೂಗಿನ ಲಸಿಕೆ ಪ್ರಯೋಗಕ್ಕೆ ಅನುಮೋದನೆ

|
Google Oneindia Kannada News

ನವದೆಹಲಿ, ಜನವರಿ 28: ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು ಕೊವಾಕ್ಸಿನ್‌ನ ಎರಡೂ ಡೋಸ್‌ಗಳನ್ನು ಪಡೆದ ಜನರ ಮೇಲೆ ಇಂಟ್ರಾನಾಸಲ್(ಮೂಗಿಗೆ ಹಾಕುವ ಲಸಿಕೆ) ಬೂಸ್ಟರ್ ಡೋಸ್‌ನ ಹಂತ-III ವೈದ್ಯಕೀಯ ಪ್ರಯೋಗಗಳನ್ನು ನಡೆಸಲು ಅನುಮೋದನೆ ಪಡೆದಿದೆ.

ಭಾರತದ ಡ್ರಗ್ ಕಂಟ್ರೋಲರ್ ಜನರಲ್ ಹಂತ-III ಪ್ರಯೋಗಗಳಿಗೆ ಶುಕ್ರವಾರ ಚಾಲನೆ ನೀಡಿದೆ. ದೇಶದ ಒಂಬತ್ತು ಸ್ಥಳಗಳಲ್ಲಿ ಪ್ರಯೋಗಗಳನ್ನು ನಡೆಸಲಾಗುವುದು. ಬೂಸ್ಟರ್ ಆಗಿ ಇಂಟ್ರಾನಾಸಲ್ ಲಸಿಕೆಯು ಸಾಮೂಹಿಕ ವ್ಯಾಕ್ಸಿನೇಷನ್ ಡ್ರೈವ್‌ಗಳಲ್ಲಿ ನಿರ್ವಹಿಸಲು ಸುಲಭವಾಗುತ್ತದೆ.

ಆಸ್ಪತ್ರೆ, ಕ್ಲಿನಿಕ್‌ಗಳಲ್ಲೂ ಲಭ್ಯವಾಗಲಿವೆ ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳುಆಸ್ಪತ್ರೆ, ಕ್ಲಿನಿಕ್‌ಗಳಲ್ಲೂ ಲಭ್ಯವಾಗಲಿವೆ ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳು

ಮೂಗುನಾಳಕ್ಕೆ ಹಾಕುವ ಲಸಿಕೆ, BBV154 ಸೋಂಕಿನ ಸ್ಥಳದಲ್ಲಿ ಪ್ರತಿರಕ್ಷಣಾ ಪ್ರತಿಕ್ರಿಯೆಗಳನ್ನು ಉತ್ತೇಜಿಸುತ್ತದೆ. ಕೋವಿಡ್ -19 ರ ಪ್ರಸರಣವನ್ನು ತಡೆಯುವಲ್ಲಿ ಬಹಳ ಪರಿಣಾಮಕಾರಿಯಾಗಿದೆ ಎಂದು ಭಾರತ್ ಬಯೋಟೆಕ್ ಹೇಳಿದೆ.

Bharat Biotechs Covaxin Nasal Booster Dose Trials Get Approval

ಭಾರತ್ ಬಯೋಟೆಕ್ ಸಂಸ್ಥೆಯು ಪ್ರಯೋಗ ನಡೆಸುತ್ತಿರುವ ಮೂಗಿನ ಲಸಿಕೆಯನ್ನು ಸುಲಭವಾಗಿ ಬಳಸಿಕೊಳ್ಳಬಹುದು. ಅದಕ್ಕೆ ತರಬೇತಿ ಪಡೆದ ಆರೋಗ್ಯ ಕಾರ್ಯಕರ್ತರ ಅಗತ್ಯ ಇರುವುದಿಲ್ಲ ಎಂಬ ಅಂಶವನ್ನು ಸಹ ಸಂಸ್ಥೆಯು ಒತ್ತಿ ಹೇಳಿದೆ. ಹೈದರಾಬಾದ್ ಮೂಲದ ಲಸಿಕೆ ತಯಾರಕರು ಕಳೆದ ತಿಂಗಳು ಮೂಗಿನ ಲಸಿಕೆಯ ಹಂತ-III ಪ್ರಯೋಗಗಳನ್ನು ನಡೆಸಲು ಡ್ರಗ್ ರೆಗ್ಯುಲೇಟರ್‌ನ ಅನುಮೋದನೆಯನ್ನು ಕೋರಿದ್ದರು.

English summary
Bharat Biotech has received approval to conduct Phase-III clinical trials of an intranasal booster dose on people who have received both doses of Covaxin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X