ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಡ್ ನ್ಯೂಸ್: ಕೋವ್ಯಾಕ್ಸಿನ್ ಲಸಿಕೆಯ ಪ್ರಯೋಗದಲ್ಲಿ ಇಮ್ಯುನಿಟಿ ವೃದ್ಧಿ, ಅಡ್ಡಪರಿಣಾಮವಿಲ್ಲ

|
Google Oneindia Kannada News

ನವದೆಹಲಿ, ಡಿಸೆಂಬರ್ 17: ಭಾರತದಲ್ಲಿಯೇ ಸೃಷ್ಟಿಯಾಗಿರುವ ಕೋವ್ಯಾಕ್ಸಿನ್ ಲಸಿಕೆಯು ಪ್ರತಿರಕ್ಷಣಾ ಸಾಮರ್ಥ್ಯ ಹೆಚ್ಚಿಸುವಲ್ಲಿ ಸಫಲವಾಗಿದ್ದು, ಯಾವುದೇ ಗಂಭೀರ ಅಡ್ಡ ಪರಿಣಾಮ ಉಂಟುಮಾಡಿಲ್ಲ ಎಂದು ಭಾರತ್ ಬಯೋಟೆಕ್ ತಿಳಿಸಿದೆ.

ಭಾರತದಲ್ಲಿ ತುರ್ತು ಬಳಕೆಯ ಅವಕಾಶಕ್ಕೆ ಅನುಮತಿ ಕೋರಿರುವ ಮೂರು ಲಸಿಕೆಗಳಲ್ಲಿ ಒಂದಾಗಿರುವ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯು ತನ್ನ ಮೊದಲ ಹಂತದ ಪ್ರಯೋಗಗಳಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ.

"2022ರವರೆಗೂ ವಿಶ್ವದ ಐದನೇ ಒಂದು ಭಾಗಕ್ಕೆ ಕೊರೊನಾ ಲಸಿಕೆ ಸಿಗೋದು ಡೌಟ್"

ಕೋವ್ಯಾಕ್ಸಿನ್, ಭಾರತದ ಮೊದಲ ಸಂಪೂರ್ಣ ಸ್ವದೇಶಿ ನಿರ್ಮಿತ ಲಸಿಕೆಯಾಗಿದ್ದು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಭಾರತದಲ್ಲಿ ಕೊರೊನಾ ಲಸಿಕೆ ತುರ್ತು ಅನುಮತಿಗೆ ಇರುವ ತೊಡಕುಗಳೇನು?ಭಾರತದಲ್ಲಿ ಕೊರೊನಾ ಲಸಿಕೆ ತುರ್ತು ಅನುಮತಿಗೆ ಇರುವ ತೊಡಕುಗಳೇನು?

ಈ ಲಸಿಕೆಯನ್ನು ನಾಲ್ಕು ವಾರಗಳ ಅಂತರದ ಬದಲು ಎರಡು ವಾರಕ್ಕೆ ಎರಡು ಡೋಸ್‌ಗಳಂತೆ ನೀಡಲಾಗಿದೆ. ಇದು ಸ್ವಯಂಸೇವಕರ ದೇಹದ ಪ್ರತಿರಕ್ಷಣಾ ಸ್ಪಂದನೆಯನ್ನು ಹೆಚ್ಚಿಸಿದ್ದು, ಲಸಿಕೆಗೆ ಸಂಬಂಧಿಸಿದಂತೆ ಯಾವುದೇ ಗಂಭೀರ ಅಡ್ಡಪರಿಣಾಮ ಕಂಡುಬಂದಿಲ್ಲ. ಹೀಗಾಗಿ ಲಸಿಕೆ ಹೆಚ್ಚು ಪರಿಣಾಮಕಾರಿ ಎನಿಸಿದೆ ಎಂದು ಸಂಸ್ಥೆ ತಿಳಿಸಿದೆ. ಮುಂದೆ ಓದಿ.

ತೀರಾ ಲಘು ಅಡ್ಡ ಪರಿಣಾಮ

ತೀರಾ ಲಘು ಅಡ್ಡ ಪರಿಣಾಮ

ಮೊದಲ ಲಸಿಕೆ ನೀಡಿದ ಬಳಿಕ ಸ್ವಯಂಸೇವಕರಲ್ಲಿ ಕಂಡುಬಂದ ಅಡ್ಡಪರಿಣಾಮಗಳು ಅತ್ಯಂತ ಲಘು ಅಥವಾ ಭಾಗಶಃ ಮಟ್ಟದಲ್ಲಿದ್ದು, ಅಷ್ಟೇ ಬೇಗನೆ ನಿವಾರಣೆಯಾಗಿತ್ತು. ಇದಕ್ಕೆ ಯಾವುದೇ ಬೇರೆ ಔಷಧ ಚಿಕಿತ್ಸೆ ನೀಡಿರಲಿಲ್ಲ. ಈ ಲಸಿಕೆಯಿಂದ ಸಾಮಾನ್ಯವಾಗಿ ಕಾಣಿಸುವ ಸಮಸ್ಯೆಯೆಂದರೆ ಚುಚ್ಚುಮದ್ದು ಪಡೆದ ಜಾಗದಲ್ಲಿ ಉಂಟಾಗುವ ನೋವು ಮಾತ್ರ. ಅದು ಕೂಡ ಬೇಗನೆ ಮರೆಯಾಗುತ್ತದೆ ಎಂದು ಸಂಸ್ಥೆಯ ದಾಖಲೆಗಳು ತಿಳಿಸಿವೆ.

ಒಬ್ಬರಲ್ಲಿ ಅಡ್ಡ ಪರಿಣಾಮ

ಒಬ್ಬರಲ್ಲಿ ಅಡ್ಡ ಪರಿಣಾಮ

ಜುಲೈ 30ರಂದು ಮೊದಲ ಲಸಿಕೆ ಪಡೆದುಕೊಂಡ ಸ್ವಯಂ ಸೇವಕರೊಬ್ಬರಲ್ಲಿ ಐದು ದಿನಗಳ ಬಳಿಕ ಜ್ವರ ಮತ್ತು ತಲೆನೋವು ಕಾಣಿಸಿಕೊಂಡಿತ್ತು. ಇದನ್ನು ಮೂಲತಃ ಗಂಭೀರ ಅಡ್ಡಪರಿಣಾಮದ ಘಟನೆ ಎಂದೇ ಪರಗಣಿಸಿದ್ದರೂ ಅವರಲ್ಲಿ ಬಳಿಕ ಕೋವಿಡ್ 19 ಪಾಸಿಟಿವ್ ಕಂಡುಬಂದಿತ್ತು.

ತೆಲಂಗಾಣ: ಜನವರಿ ಮಧ್ಯದಿಂದ 80 ಲಕ್ಷ ಮಂದಿಗೆ ಕೊರೊನಾ ಲಸಿಕೆ ವಿತರಣೆತೆಲಂಗಾಣ: ಜನವರಿ ಮಧ್ಯದಿಂದ 80 ಲಕ್ಷ ಮಂದಿಗೆ ಕೊರೊನಾ ಲಸಿಕೆ ವಿತರಣೆ

ತುರ್ತು ಬಳಕೆಗೆ ಕೋರಿಕೆ

ಈಗಾಗಲೇ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವಂತೆ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಮನವಿ ಮಾಡಿರುವ ಭಾರತ್ ಬಯೋಟೆಕ್ ಸಲ್ಲಿಸಿರುವ ದಾಖಲೆಗಳು ಲಸಿಕೆ ಸುರಕ್ಷಿತ ಹಾಗೂ ಪರಿಣಾಮಕಾರಿ ಎಂಬುದಕ್ಕೆ ಸಾಕಷ್ಟು ಪುರಾವೆ ಒದಗಿಸಿದರೆ ಅನುಮತಿ ಸಿಗುವ ಸಾಧ್ಯತೆ ಇದೆ. ಆದರೆ ಅಂತಿಮ ಅನುಮೋದನೆಗೆ ಎಲ್ಲ ಪ್ರಯೋಗಗಳು ಮುಕ್ತಾಯಗೊಂಡು ಸಂಪೂರ್ಣ ದತ್ತಾಂಶಗಳ ವಿಶ್ಲೇಷಣೆ ನಡೆಯುವುದು ಅಗತ್ಯವಾಗಿದೆ.

ಲಸಿಕೆ ಪಡೆದುಕೊಂಡಿದ್ದ ಅನಿಲ್ ವಿಜ್‌ಗೆ ಕೋವಿಡ್

ಲಸಿಕೆ ಪಡೆದುಕೊಂಡಿದ್ದ ಅನಿಲ್ ವಿಜ್‌ಗೆ ಕೋವಿಡ್

ಹರ್ಯಾಣದಲ್ಲಿ ಲಸಿಕೆಯ ಮೂರನೇ ಹಂತದ ಪ್ರಯೋಗದ ಮೊದಲ ಲಸಿಕೆಯನ್ನು ಪಡೆದುಕೊಂಡಿದ್ದ ಆರೋಗ್ಯ ಸಚಿವ ಅನಿಲ್ ವಿಜ್ ಅವರಿಗೆ ಎರಡು ವಾರಗಳ ಬಳಿಕ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿತ್ತು. ಇದರಿಂದ ಕೋವ್ಯಾಕ್ಸಿನ್ ಲಸಿಕೆಯ ದಕ್ಷತೆ ಬಗ್ಗೆ ಪ್ರಶ್ನೆಗಳು ಉದ್ಭವವಾಗಿದ್ದವು. ಆದರೆ ತನ್ನ ಲಸಿಕೆಯು ಎರಡು ಡೋಸ್‌ಗಳನ್ನು ಪಡೆದುಕೊಂಡ ಬಳಿಕ ಪರಿಣಾಮಕಾರಿಯಾಗುತ್ತದೆ. 14 ದಿನಗಳ ಅಂತರದಲ್ಲಿ ಎರಡು ಡೋಸ್ ನೀಡಬೇಕು ಎಂದು ಅದು ಸ್ಪಷ್ಟೀಕರಣ ನೀಡಿತ್ತು.

25,800 ಮಂದಿ ಮೇಲೆ ಪ್ರಯೋಗ

25,800 ಮಂದಿ ಮೇಲೆ ಪ್ರಯೋಗ

ಕೋವ್ಯಾಕ್ಸಿನ್ ಲಸಿಕೆಯನ್ನು ಪ್ರಸ್ತುತ ಭಾರತದಲ್ಲಿ 25,800 ಮಂದಿ ಸ್ವಯಂ ಸೇವಕರ ಮೇಲೆ ಪ್ರಯೋಗಿಸಲಾಗುತ್ತಿದೆ. 18 ರಿಂದ 55 ವರ್ಷದ ಒಳಗಿನ ವಯಸ್ಸಿನವರು ಇದರಲ್ಲಿ ಭಾಗವಹಿಸಿದ್ದಾರೆ. ಸರ್ಕಾರದ ದತ್ತಾಂಶಗಳ ಪ್ರಕಾರ ಮೊದಲ ಹಂತದಲ್ಲಿ 375 ಮಂದಿ ಲಸಿಕೆಯ ಪ್ರಯೋಗಕ್ಕೆ ಒಳಪಟ್ಟಿದ್ದರು.

English summary
Bharat Biotech in its data of Phase 1 results said, Covaxin induced immune response and no serious adverse events.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X