• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಶೇ.81ರಷ್ಟು ಪರಿಣಾಮಕಾರಿ

|

ನವದೆಹಲಿ, ಮಾರ್ಚ್ 04: ಭಾರತದಲ್ಲಿಯೇ ಅಭಿವೃದ್ಧಿಗೊಂಡಿರುವ ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಶೇ.81ರಷ್ಟು ಪರಿಣಾಮಕಾರಿ ಎಂದು ಭಾರತ್ ಬಯೋಟೆಕ್ ತಿಳಿಸಿದೆ.

ಕೊನೆಯ ಹಂತದ ಕ್ಲಿನಿಕಲ್ ಟ್ರಯಲ್ ನಡೆಯುವುದಕ್ಕೂ ಮುನ್ನವೇ ಜನವರಿಯಲ್ಲಿ ಸರ್ಕಾರ 'ಕೋವ್ಯಾಕ್ಸಿನ್‌' ತುರ್ತು ಬಳಕೆಗೆ ಅನುಮತಿ ನೀಡಿತ್ತು.

ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಮೊದಲ ದೇಶಿ ಕೋವಿಡ್-19 ಲಸಿಕೆ 'ಕೋವ್ಯಾಕ್ಸಿನ್‌' ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‌ನ ಮಧ್ಯಂತರ ವಿಶ್ಲೇಷಣೆಯಲ್ಲಿ ಶೇ. 81 ರಷ್ಟು ಪರಿಣಾಮಕಾರಿತ್ವ ತೋರಿದೆ ಎಂದು ಭಾರತ್ ಬಯೋಟೆಕ್ ಕಂಪನಿ ತಿಳಿಸಿದೆ.

ದೇಶದಾದ್ಯಂತ ಕೋವಿಡ್ ವಿರುದ್ಧ ಲಸಿಕೆ ನೀಡಿಕೆ ಅಭಿಯಾನ ಪ್ರಗತಿಯಲ್ಲಿದೆ. ಸೋಮವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಕೂಡ 'ಕೋವ್ಯಾಕ್ಸಿನ್‌' ಲಸಿಕೆ ಹಾಕಿಸಿಕೊಂಡಿದ್ದರು.

ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಳಕ್ಕೆ ರೂಪಾಂತರಿ ಸೋಂಕು ಕಾರಣವಲ್ಲ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಯೋಗದಲ್ಲಿ ನಡೆಸಲಾದ ಕ್ಲಿನಿಕಲ್ ಟ್ರಯಲ್‌ನಲ್ಲಿ 25,800 ಮಂದಿ ಭಾಗವಹಿಸಿದ್ದರು.

ಈ ಪೈಕಿ 43 ಮಂದಿಯಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿತ್ತು. ಇದರ ಆಧಾರದಲ್ಲಿ ಮಧ್ಯಂತರ ವಿಶ್ಲೇಷಣೆ ಸಿದ್ಧಪಡಿಸಲಾಗಿದೆ. ಆದರೆ, ಕೋವಿಡ್ ದೃಢಪಟ್ಟ 43 ಮಂದಿಯ ಪೈಕಿ 36 ಜನರನ್ನು ಪ್ರಯೋಗಗಳಿಗಷ್ಟೇ ಬಳಸಿಕೊಳ್ಳಲಾಗಿತ್ತು.

7 ಮಂದಿ ಮಾತ್ರ ಲಸಿಕೆ ಪಡೆದಿದ್ದರು. ಇದರ ಆಧಾರದಲ್ಲಿ ಲಸಿಕೆ ಶೇ 80.6ರಷ್ಟು ಪರಿಣಾಮಕಾರಿ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಕಂಪನಿ ತಿಳಿಸಿದೆ. ಭಾರತದಲ್ಲಿ ಈಗಾಗಲೇ ಎಲ್ಲರಿಗೂ ಕೋವಿಶೀಲ್ಡ್,ಕೋವ್ಯಾಕ್ಸಿನ್ ಕೊರೊನಾ ಲಸಿಕೆಯನ್ನು ನೀಡಲಾಗುತ್ತಿದೆ.

English summary
Hyderabad-based vaccine manufacturing company Bharat Biotech on Wednesday announced phase 3 clinical results of its indigenously-made Covid-19 vaccine candidate, Covaxin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X