India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಜುಲೈನಲ್ಲಿ ಜಗತ್ತಿನ ಮೊದಲ ಕೋವಿಡ್-19 ಮೂಗಿನ ಲಸಿಕೆ

|
Google Oneindia Kannada News

ನವದೆಹಲಿ, ಜೂನ್ 19: ಜಗತ್ತಿನಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಣಕ್ಕೆ ಈಗಾಗಲೇ ಲಸಿಕೆಗಳನ್ನು ಆವಿಷ್ಕರಿಸಲಾಗಿದೆ. ಆದರೆ ಇದೇ ಮೊದಲ ಬಾರಿಗೆ ಕೋವಿಡ್-19 ಸಂಬಂಧಿತ ಮೂಗಿನ ಲಸಿಕೆಯ ಸಂಶೋಧನೆಯಲ್ಲಿ ಭಾರತ್ ಬಯೋಟೆಕ್ ಒಂದು ಹೆಜ್ಜೆ ಮುಂದೆ ಇಟ್ಟಿದೆ.

ಕೊರೊನಾ ವೈರಸ್ ಸೋಂಕಿಗೆ ಜಗತ್ತಿನಲ್ಲೇ ಮೊದಲ ಮೂಗಿನ ಲಸಿಕೆಗೆ ಸಂಬಂಧಿಸಿದಂತೆ 3ನೇ ಹಂತದ ವೈದ್ಯಕೀಯ ಪ್ರಯೋಗಗಳು ಪೂರ್ಣಗೊಂಡಿವೆ ಎಂದು ಭಾರತ್ ಬಯೋಟೆಕ್ ಸಂಸ್ಥೆಯ ಅಧ್ಯಕ್ಷ ಮತ್ತು ಎಂಡಿ ಡಾ ಕೃಷ್ಣ ಎಲ್ಲಾ ಖಚಿತಪಡಿಸಿದ್ದಾರೆ.

ಹುಷಾರಾಗಿರಿ: ಕರ್ನಾಟಕದಲ್ಲಿ ಒಂದೇ ದಿನ ಅಂಟಿದೆ 750 ಮಂದಿಗೆ ಕೊರೊನಾ ವೈರಸ್! ಹುಷಾರಾಗಿರಿ: ಕರ್ನಾಟಕದಲ್ಲಿ ಒಂದೇ ದಿನ ಅಂಟಿದೆ 750 ಮಂದಿಗೆ ಕೊರೊನಾ ವೈರಸ್!

"ಮೂರನೇ ಹಂತದ ವೈದ್ಯಕೀಯ ಪ್ರಯೋಗಕ್ಕೆ ಸಂಬಂಧಿಸಿದ ಅಂಕಿ-ಅಂಶಗಳ ವಿಶ್ಲೇಷಣೆ ನಡೆಯುತ್ತಿದೆ. ಮುಂದಿನ ತಿಂಗಳ ಹೊತ್ತಿಗೆ ಅಂತಿಮ ವರದಿಯಲ್ಲಿ ಭಾರತೀಯ ಔಷಧೀಯ ನಿಯಂತ್ರಣ ಪ್ರಾಧಿಕಾರಕ್ಕೆ ಸಲ್ಲಿಸಲಾಗುವುದು. ಪ್ರಾಧಿಕಾರವು ಅನುಮತಿ ನೀಡಿದ ನಂತರ ಅಧಿಕೃತವಾಗಿ ಈ ಲಸಿಕೆಯನ್ನು ಬಿಡುಗಡೆ ಮಾಡಲಾಗುತ್ತದೆ. ಅಂದು ಇದು ಜಗತ್ತಿನ ಮೊದಲ ಕೋವಿಡ್-19 ಮೂಗಿನ ಲಸಿಕೆ ಆಗಿರಲಿದೆ," ಎಂದು ಅವರು ತಿಳಿಸಿದ್ದಾರೆ.

ಜನವರಿಯಲ್ಲಿ ಮೂರನೇ ಹಂತದ ಪ್ರಯೋಗ: ಭಾರತ್ ಬಯೋಟೆಕ್ ಸಂಸ್ಥೆಯು ನಡೆಸುತ್ತಿದ್ದ ಮೂಗಿನ ಲಸಿಕೆಗೆ ಸಂಬಂಧಿಸಿದ ಮೂರನೇ ಹಂತದ ವೈದ್ಯಕೀಯ ಪ್ರಯೋಗಕ್ಕೆ ಭಾರತೀಯ ಔಷಧೀಯ ಪ್ರಾಧಿಕಾರವು 2022 ಜನವರಿ ತಿಂಗಳಿನಲ್ಲಿ ಅನುಮತಿ ನೀಡಿತ್ತು.

ಬೂಸ್ಟರ್ ಡೋಸ್ ಕುರಿತು ಹೇಳುವುದೇನು?: ಕೊರೊನಾ ವೈರಸ್ ಬೂಸ್ಟರ್ ಡೋಸ್ ಲಸಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಕೃಷ್ಣಾ ಎಲ್ಲಾ, ಈಗಾಗಲೇ ಎರಡು ಡೋಸ್ ಲಸಿಕೆ ಪಡೆದುಕೊಂಡವರು ಬೂಸ್ಟರ್ ಡೋಸ್ ಲಸಿಕೆಯನ್ನು ಪಡೆದುಕೊಳ್ಳುವುದು ತೀರಾ ಅವಶ್ಯಕ ಎಂದರು.

Bharat Biotechs Coronavirus nasal vaccine 3rd phase trials completed

"ಬೂಸ್ಟರ್ ಡೋಸ್ ಲಸಿಕೆ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ. ನಾನು ಯಾವಾಗಲೂ ಬೂಸ್ಟರ್ ಡೋಸ್ ಪ್ರತಿ ವ್ಯಾಕ್ಸಿನೇಷನ್‌ಗೆ ಅದ್ಭುತ ಡೋಸ್ ಎಂದು ಹೇಳುತ್ತೇನೆ. ಮಕ್ಕಳಲ್ಲಿ ಮೊದಲು, ಎರಡು ಡೋಸ್ ಹೆಚ್ಚು ರೋಗನಿರೋಧಕ ಶಕ್ತಿಯನ್ನು ನೀಡುವುದಿಲ್ಲ, ಆದರೆ ಮೂರನೇ ಡೋಸ್ ಮಗುವಿಗೆ ಅದ್ಭುತ ಪ್ರತಿಕ್ರಿಯೆಯನ್ನು ನೀಡುತ್ತದೆ. ವಯಸ್ಕರಿಗೂ ಅದೇ ರೀತಿ ಮೂರನೇ ಡೋಸ್ ಬಹಳ ಮುಖ್ಯವಾಗಿದೆ. COVID-19 ಅನ್ನು ಶೇ.100ರಷ್ಟು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಅದು ನಮ್ಮೊಂದಿಗೆ ಸಹಾ ಇದ್ದೇ ಇರುತ್ತದೆ, ನಾವು ಅದರೊಂದಿಗೆ ಬದುಕಬೇಕು ಅದನ್ನು ನಿಭಾಯಿಸಿಕೊಂಡೇ ಬದುಕಬೇಕಿದೆ. ಇದರ ಮಧ್ಯೆ ಕೋವಿಡ್-19 ಅನ್ನು ಹೇಗೆ ನಿಯಂತ್ರಿಸುವುದಕ್ಕೆ ಹೆಚ್ಚು ಬುದ್ಧಿವಂತಿಕೆ ಬೇಕಾಗುತ್ತದೆ," ಎಂದರು.

ವಿವಾಟೆಕ್ 2022 ಕುರಿತು ಮೆಚ್ಚುಗೆ ಮಾತು: ವಿವಾಟೆಕ್ 2022 ಕುರಿತು ಮಾತನಾಡಿದ ಡಾ ಕೃಷ್ಣ ಎಲ್ಲಾ, ಫ್ರಾನ್ಸ್‌ನಲ್ಲಿ ಬ್ರಾಂಡ್ ಹೆಸರನ್ನು ನಿರ್ಮಿಸುವ ಮೂಲಕ ನಿಜವಾಗಿಯೂ ಉತ್ತಮ ಸಾಧನೆ ನಿರ್ಮಿಸಲಾಗಿದೆ ಎಂದು ಹೇಳಿದರು.

"ಭಾರತದಿಂದ 65 ಸ್ಟಾರ್ಟ್‌ಅಪ್‌ಗಳು ಬಂದಿವೆ ಎಂದು ಹೇಳಲು ನನಗೆ ಸಂತೋಷವಾಗಿದೆ. ನೀತಿ ಆಯೋಗದ ಅಡಿಯಲ್ಲಿ ಅವರೆಲ್ಲರೂ ಬಂದಿದ್ದಾರೆ. ಭಾರತ ಏನು ಮಾಡಬಹುದು, ಹೊಸ ತಂತ್ರಜ್ಞಾನ ಆವಿಷ್ಕಾರ ಹೇಗೆ ಎಂಬುದನ್ನು ಜಗತ್ತಿನ ಎದುರಿಗೆ ತೋರಿಸಲಾಗಿದೆ. ನಾವು 1997ರಲ್ಲಿ ಸ್ಟಾರ್ಟ್‌ಅಪ್ ಆಗಿದ್ದರಿಂದ ಅದಿನ್ನೂ ಹೆಚ್ಚು ರೋಮಾಂಚಕವಾಗಿವೆ," ಎಂದರು.

"ಫ್ರೆಂಚ್ ಸರ್ಕಾರವು ಅತ್ಯಂತ ಪ್ರಾಯೋಗಿಕವಾಗಿದೆ ಎಂದು ಹೇಳಲು ನನಗೆ ತುಂಬಾ ಸಂತೋಷವಾಗಿದೆ. ಅವರು ನಿಜವಾಗಿಯೂ ಭಾರತವನ್ನು ಪ್ರೋತ್ಸಾಹಿಸುತ್ತಿದ್ದಾರೆ ಮತ್ತು ಪ್ರಾಮಾಣಿಕವಾಗಿದ್ದಾರೆ. ಮತ್ತೊಮ್ಮೆ, ಅವರು ನಿಜವಾಗಿಯೂ ಸರ್ಕಾರಗಳು ಹೇಗೆ ಒಟ್ಟಾಗಿ ಕೆಲಸ ಮಾಡಬಹುದೆಂದು ತೋರಿಸುತ್ತಿದ್ದಾರೆ. ದೇಶದ ಸ್ಟಾರ್ಟ್‌ಅಪ್‌ಗಳು ಹೇಗೆ ಒಟ್ಟಿಗೆ ಕೆಲಸ ಮಾಡಬಹುದು? ಸರ್ಕಾರದ ನೀತಿಗಳು ಉತ್ತಮ ವ್ಯವಸ್ಥೆಯನ್ನು ಹೇಗೆ ರಚಿಸಬಹುದು, ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಕೂಡ ಎರಡು ಪಾಲುದಾರಿಕೆಗಳ ನಡುವೆ ಅದನ್ನು ಹೇಗೆ ಅಳೆಯುವುದು ಹಾಗೂ ಜಾಗತಿಕ ಮತ್ತು ಡಿಜಿಟಲೀಕರಣದ ಬಗ್ಗೆ ಮಾತನಾಡುತ್ತಿದ್ದರು. ಇದು ಉಭಯ ದೇಶಗಳ ನಡುವಿನ ಉತ್ತಮ ಸಂಕೇತವಾಗಿದೆ. ಮೊದಲ ಬಾರಿಗೆ ಫ್ರೆಂಚ್ ಭಾರತಕ್ಕೆ ಹತ್ತಿರವಾಗುತ್ತಿದೆ," ಎಂದು ಡಾ ಕೃಷ್ಣಾ ಎಲ್ಲಾ ಹೇಳಿದರು.

English summary
Covid-19 Vaccine: Bharat Biotech's Coronavirus nasal vaccine 3rd phase trials completed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X