ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನ 3ನೇ ದುಬಾರಿ ಕೊರೊನಾವೈರಸ್ ಲಸಿಕೆ ಕೊವ್ಯಾಕ್ಸಿನ್!

|
Google Oneindia Kannada News

ನವದೆಹಲಿ, ಜೂನ್ 14: "ಈ ನೀರಿನ ಬಾಟಲಿಗೆ ನಮ್ಮ ಲಸಿಕೆಗಿಂತ ನೀವು ಐದು ಪಟ್ಟು ಹೆಚ್ಚು ಹಣವನ್ನು ನೀಡುತ್ತೀರಿ." ಕಳೆದ ಆಗಸ್ಟ್ ತಿಂಗಳಿನಲ್ಲಿ ಹೈದ್ರಾಬಾದಿನ ಭಾರತ್ ಬಯೋಟೆಕ್ ಸಂಸ್ಥೆಯ ಕಾರ್ಯ ನಿರ್ವಹಣಾ ನಿರ್ದೇಶಕ ಡಾ.ಕೃಷ್ಣ ಎಲ್ಲಾ ಹೇಳಿದ ಮಾತಿದು. ಆದರೆ ಇಂದು ಎಲ್ಲವೂ ಉಲ್ಟಾ ಹೊಡೆದಿದೆ.

ಭಾರತೀಯರಿಗೆ ಕುಡಿಯುವ ನೀರಿನ ಬಾಟಲಿಗಿಂತ ಐದು ಪಟ್ಟು ಕಡಿಮೆ ಬೆಲೆಗೆ ಕೊರೊನಾವೈರಸ್ ಲಸಿಕೆಯನ್ನು ನೀಡುವುದಾಗಿ ಸಂಸ್ಥೆಯ ಹೇಳಿದ ಮಾತು ಇದೀಗ ಸುಳ್ಳಾಗಿದೆ. ಜಗತ್ತಿನಲ್ಲೇ ಅತಿ ದುಬಾರಿ ಕೊವಿಡ್-19 ಲಸಿಕೆಗಳ ಪಟ್ಟಿಯಲ್ಲಿ ಕೊವ್ಯಾಕ್ಸಿನ್ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

Good News: ಭಾರತದಲ್ಲಿ ಅತಿ ಕಡಿಮೆ ಬೆಲೆಯ ಕೊರೊನಾವೈರಸ್ ಲಸಿಕೆ! Good News: ಭಾರತದಲ್ಲಿ ಅತಿ ಕಡಿಮೆ ಬೆಲೆಯ ಕೊರೊನಾವೈರಸ್ ಲಸಿಕೆ!

ಭಾರತದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುವ ಒಂದು ಡೋಸ್ ಕೊವಿಶೀಲ್ಡ್ ಲಸಿಕೆಗೆ 780 ರೂಪಾಯಿ, ರಷ್ಯಾದ ಒಂದು ಡೋಸ್ ಸ್ಪುಟ್ನಿಕ್-ವಿ ಲಸಿಕೆಗೆ 1,145 ರೂಪಾಯಿ ಬೆಲೆ ನಿಗದಿಗೊಳಿಸಲಾಗಿದೆ. ಆದರೆ ಒಂದು ಡೋಸ್ ಕೊವ್ಯಾಕ್ಸಿನ್ ಲಸಿಕೆಗೆ ಸೇವಾ ಶುಲ್ಕ ಹಾಗೂ ಜಿಎಸ್ ಟಿ ಸೇರಿ 1,410 ರೂಪಾಯಿ ಆಗುತ್ತದೆ.

ದೇಶದಲ್ಲಿ ಕೊವಿಡ್-19 ಲಸಿಕೆಗಳು ಮತ್ತು ಅದರ ಬೆಲೆ

ದೇಶದಲ್ಲಿ ಕೊವಿಡ್-19 ಲಸಿಕೆಗಳು ಮತ್ತು ಅದರ ಬೆಲೆ

ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಸಂಶೋಧಿಸಿದ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಲಸಿಕೆಯ ಒಂದು ಡೋಸ್ ಬೆಲೆ 600 ರೂಪಾಯಿ. ಆಗಿದೆ. ಹೈದ್ರಾಬಾದಿನ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ 1 ಡೋಸ್ ಕೊವ್ಯಾಕ್ಸಿನ್ ಲಸಿಕೆಗೆ 1200 ರೂಪಾಯಿ ನಿಗದಿಗೊಳಿಸಲಾಗಿದೆ. ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಗೆ 995 ರೂಪಾಯಿ ಆಗುತ್ತದೆ.

ಖಾಸಗಿ ಆಸ್ಪತ್ರೆಗಳಿಗೆ ಎಷ್ಟು ರೂಪಾಯಿಗೆ ಕೊರೊನಾವೈರಸ್ ಲಸಿಕೆ?

ಖಾಸಗಿ ಆಸ್ಪತ್ರೆಗಳಿಗೆ ಎಷ್ಟು ರೂಪಾಯಿಗೆ ಕೊರೊನಾವೈರಸ್ ಲಸಿಕೆ?

ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಸಂಶೋಧಿಸಿದ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಲಸಿಕೆಯನ್ನು ರಾಜ್ಯ ಸರ್ಕಾರಕ್ಕೆ 400 ರೂಪಾಯಿ, ಖಾಸಗಿ ಆಸ್ಪತ್ರೆಗಳಿಗೆ 600 ರೂಪಾಯಿಗೆ ನೀಡಲಾಗುತ್ತಿದೆ. ಹೈದ್ರಾಬಾದಿನ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ರಾಜ್ಯ ಸರ್ಕಾರಕ್ಕೆ 600 ರೂಪಾಯಿ, ಖಾಸಗಿ ಆಸ್ಪತ್ರೆಗಳಿಗೆ 1200 ರೂಪಾಯಿಗೆ ನೀಡಲಾಗುತ್ತಿದೆ. ಇದರ ಜೊತೆಗೆ ಖಾಸಗಿ ಆಸ್ಪತ್ರೆಗಳು ಲಸಿಕೆ ವಿತರಣೆಗೆ ಗರಿಷ್ಠ 150 ರೂಪಾಯಿ ಸೇವಾ ಶುಲ್ಕವನ್ನು ವಿಧಿಸುವುದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಸಿಹಿಸುದ್ದಿ: ಈ ಚಿಕಿತ್ಸೆ ಪಡೆದರೆ 24 ಗಂಟೆಗಳಲ್ಲಿ ಕೊರೊನಾವೈರಸ್ ಮಾಯ!?ಸಿಹಿಸುದ್ದಿ: ಈ ಚಿಕಿತ್ಸೆ ಪಡೆದರೆ 24 ಗಂಟೆಗಳಲ್ಲಿ ಕೊರೊನಾವೈರಸ್ ಮಾಯ!?

ವಿಶ್ವದ ದುಬಾರಿ ಲಸಿಕೆಯಲ್ಲಿ ಕೊವ್ಯಾಕ್ಸಿನ್ 3ನೇ ಸ್ಥಾನ

ವಿಶ್ವದ ದುಬಾರಿ ಲಸಿಕೆಯಲ್ಲಿ ಕೊವ್ಯಾಕ್ಸಿನ್ 3ನೇ ಸ್ಥಾನ

ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ದುಬಾರಿ ಎನಿಸಿರುವ ಕೊರೊನಾವೈರಸ್ ಲಸಿಕೆಯ ಪೈಕಿ ಭಾರತ್ ಬಯೋಟೆಕ್ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕಯೂ ಸಹ ಒಂದಾಗಿದೆ. ಕೊವಿಶೀಲ್ಡ್ ಲಸಿಕೆಗಿಂತ ಎರಡು ಪಟ್ಟು ಹೆಚ್ಚು ಬೆಲೆಯನ್ನು ಹೊಂದಿದೆ. ವಿದೇಶಗಳಲ್ಲಿ ಫೈಜಸ್ ಕಂಪನಿಯ ಲಸಿಕೆಯಷ್ಟೇ ಹಣವನ್ನು ಭಾರತೀಯರು ಸ್ವದೇಶಿ ಲಸಿಕೆಗೆ ನೀಡಬೇಕಾಗಿದೆ. ವಿಶ್ವದ ದುಬಾರಿ ಲಸಿಕೆಗಳ ಪಟ್ಟಿಯಲ್ಲಿ ಕೊವ್ಯಾಕ್ಸಿನ್ ಮೂರನೇ ಸ್ಥಾನದಲ್ಲಿದೆ. ಚೀನಾದ ಸಿನೋಫಾರ್ಮಾ ಮೊದಲ ಸ್ಥಾನ ಹಾಗೂ ಅಮೆರಿಕಾದ ಫೈಜರ್ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿವೆ.

ಕೊವ್ಯಾಕ್ಸಿನ್ ಉತ್ಪಾದನೆಗೆ ನಿಷ್ಕ್ರಿಯ ರೋಗಾಣು ಬಳಕೆ

ಕೊವ್ಯಾಕ್ಸಿನ್ ಉತ್ಪಾದನೆಗೆ ನಿಷ್ಕ್ರಿಯ ರೋಗಾಣು ಬಳಕೆ

"ಕೊವಾಕ್ಸಿನ್‌ನ ತಂತ್ರಜ್ಞಾನವು ಕೋವಿಶೀಲ್ಡ್ ಲಸಿಕೆ ಮತ್ತು ಸ್ಪುಟ್ನಿಕ್-ವಿ ಗಿಂತ ಬಹಳ ಭಿನ್ನವಾಗಿದೆ. ಕೊವಾಕ್ಸಿನ್‌ಗಾಗಿ ನಿಷ್ಕ್ರಿಯಗೊಂಡ ಸಂಪೂರ್ಣ ರೋಗಾಣುವನ್ನು ಬಳಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ನೂರಾರು ಲೀಟರ್ ದುಬಾರಿ ಸೀರಮ್ ಅನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ಬಿಎಸ್‌ಎಲ್ ಲ್ಯಾಬ್‌ಗಳಲ್ಲಿ ಈ ಸೀರಮ್‌ನಿಂದ ವೈರಸ್ ಉತ್ಪತ್ತಿ ಹೆಚ್ಚುತ್ತದೆ. ಈ ಹಂತದಲ್ಲಿ ಮುನ್ನೆಚ್ಚರಿಕೆ ವಹಿಸಿ ನಿಷ್ಕ್ರಿಯಗೊಳಿಸಲಾಗುವುದು" ಎಂದು ಅಣು ಜೀವಶಾಸ್ತ್ರ ಕೇಂದ್ರದ ಸಲಹೆಗಾರ ರಾಕೇಶ್ ಮಿಶ್ರಾ ತಿಳಿಸಿದ್ದಾರೆ.

"ಲಸಿಕೆ ಉತ್ಪಾದನೆಗೆ ಸುದೀರ್ಘ ಅವಧಿ"

"ಭಾರತ್ ಬಯೋಟೆಕ್ ಸಂಸ್ಥೆಯ ನಿಷ್ಕ್ರಿಯ ರೋಗಾಣುಗಳನ್ನು ಬಳಸಿಕೊಂಡು ಮಾಡು ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಯು ಸುದೀರ್ಘ ಅವಧಿಯಲ್ಲಿ ನಡೆಯುತ್ತದೆಯೇ ವಿನಃ ದುಬಾರಿ ಆಗಿರುವುದಿಲ್ಲ," ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. "ಒಂದು ವೇಳೆ ಕೊರೊನಾವೈರಸ್ ರೂಪಾಂತರ ತಳಿ ಮೇಲೆ mRNA ಲಸಿಕೆಯು ಪರಿಣಾಮ ಬೀರಲಾರದು ಎಂದು ಗೊತ್ತಾದರೆ ಕ್ಷಿಪ್ರಗತಿಯಲ್ಲಿ ಬೇರೊಂದು ಮಾದರಿ ಲಸಿಕೆಯನ್ನು ಪುನರ್ ವ್ಯವಸ್ಥೆಗೊಳಿಸುವುದಕ್ಕೆ ಸಾಧ್ಯವಿದೆ. ಆದರೆ ಕೊವ್ಯಾಕ್ಸಿನ್ ಲಸಿಕೆ ನಿಷ್ಕ್ರಿಯ ರೋಗಾಣುಗಳ ಮೇಲೆ ನಡೆಸಿದ ಸುದೀರ್ಘ ಪರೀಕ್ಷೆ ಆಗಿರುವುದರಿಂದ ಹೊಸ ತಳಿಗಳ ಮೇಲೆ ಪರಿಣಾಮ ಬೀರಬಲ್ಲ ಮತ್ತೊಂದು ಮಾದರಿ ಲಸಿಕೆ ಉತ್ಪಾದಿಸುವುದು ಅಷ್ಟೊಂದು ಸುಲಭದ ಕೆಲಸ ಆಗಿರುವುದಿಲ್ಲ" ಎಂದು ಭಾರತೀಯ ಲಸಿಕೆ ಉತ್ಪಾದನಾ ಸಂಸ್ಥೆ ಇಂಡಿಯನ್ ಇಮ್ಯುನಾಲಾಜಿಕಲ್ ಲಿಮಿಟೆಡ್ ಮಾಜಿ ನಿರ್ದೇಶಕ ಕೆ ವಿ ಬಾಲಸುಬ್ರಹ್ಮಣ್ಯಂ ತಿಳಿಸಿದ್ದಾರೆ.

ಭಾರತದಲ್ಲಿ ಕೊವ್ಯಾಕ್ಸಿನ್ ಉತ್ಪಾದನೆ ಹಂತ

ಭಾರತದಲ್ಲಿ ಕೊವ್ಯಾಕ್ಸಿನ್ ಉತ್ಪಾದನೆ ಹಂತ

ಭಾರತ್ ಬಯೋಟೆಕ್ ಸಂಸ್ಥೆಯು ಉತ್ಪಾದಿಸುವ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಯ ಹಂತಗಳಲ್ಲಿ ಹಲವು ರೀತಿಯ ವೆಚ್ಚ ಮಾಡಬೇಕಾಗುತ್ತದೆ. ಈ ಪೈಕಿ ಕಚ್ಚಾ ಉಪಕರಣ, ಪ್ಯಾಕಿಂಗ್, ಸಸ್ಯ ಕಾರ್ಯಾಚರಣೆ ಮತ್ತು ನಿರ್ವಹಣೆ, ಪರವಾನಗಿ ಪಡೆಯುವ ವೆಚ್ಚ, ವೈದ್ಯಕೀಯ ಪ್ರಯೋಗ ಹಾಗೂ ಉತ್ಪಾದನೆ ವೆಚ್ಚವು ಕ್ರೂಢೀಕರಣವಾಗಿರುತ್ತದೆ. ಅಂತಿಮವಾಗಿ ಕೊವಿಡ್-19 ಲಸಿಕೆ ಬೆಲೆಯು ಮೂರು ಪಟ್ಟು ಆಗುವುದಕ್ಕೆ ಕಾರಣವೂ ಇದೆ. ತೆರಿಗೆಗಳು ಮತ್ತು ವಿತರಕರು, ಸಂಗ್ರಹಣಕಾರರು ಮತ್ತು ರಸಾಯನ ಶಾಸ್ತ್ರಜ್ಞರ ಪೂರೈಕೆ ಸರಪಳಿಗೆ ಪಾವತಿಸುವ ಪಾಲನ್ನು ಸಹ ಸೇರಿಸಲಾಗಿದೆ.

"ಕೊವ್ಯಾಕ್ಸಿನ್ ಬೆಲೆ ಹೆಚ್ಚಾಗುವುದರ ಹಿಂದಿನ ಕಾರಣ?"

"ಕೊವ್ಯಾಕ್ಸಿನ್ ಲಸಿಕೆ ಉತ್ಪಾದನಾ ಹಂತಗಳನ್ನು ಹೆಚ್ಚಿಸುತ್ತಾ ಹೋದಂತೆ ನಷ್ಟದ ಪ್ರಮಾಣ ಹೆಚ್ಚಾಗುತ್ತದೆ. ನಿಷ್ಕ್ರಿಯ ರೋಗಾಣುಗಳ ಮೇಲೆ ಪ್ರಯೋಗದಿಂದ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆ ಹಾಗೂ ಕೊವಿಶೀಲ್ಡ್ ಲಸಿಕೆಗಳ ಬೆಲೆಯ ಅಂತರ 40 ರೂಪಾಯಿಗಿಂತ ಹೆಚ್ಚಾಗಿರಬಾರದು. ಕೊವಿಶೀಲ್ಡ್ ಲಸಿಕೆಯನ್ನು 17 ರೂಪಾಯಿಗೆ ನೀಡಬಹುದು," ಎಂದು ಕೆ ವಿ ಬಾಲಸುಬ್ರಹ್ಮಣ್ಯಂ ಹೇಳಿದ್ದಾರೆ.

"ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಗೆ ಹೆಚ್ಚಿನ ಖರ್ಚು ಆಗುವುದಿಲ್ಲ"

"ಕೊರೊನಾವೈರಸ್ ಸೋಂಕುನಿಯಂತ್ರಣಕ್ಕೆ ಭಾರತ್ ಬಯೋಟೆಕ್ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆ ಬೆಲೆ ಈ ಹಿಂದಿನ ರೋಟಾವೈರಸ್ ಲಸಿಕೆಗೆ ಸಮಾನಾಂತರದಲ್ಲಿ ಇರಬೇಕು," ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮಾಜಿ ನಿರ್ದೇಶಕ ಡಾ. ಎನ್.ಕೆ. ಗಂಗೂಲಿ ಹೇಳಿದ್ದಾರೆ. ನಿಷ್ಕ್ರಿಯ ರೋಗಾಣು ಬಳಸಿಕೊಂಡು ಕೊವ್ಯಾಕ್ಸಿನ್ ಲಸಿಕೆ ಉತ್ಪಾದಿಸಲು ಮಾನವ ಸಂಪನ್ಮೂಲ ಪ್ರಮಾಣ ಹೆಚ್ಚಾಗಿ ಬೇಕಾಗುತ್ತದೆಯೇ ವಿನಃ ಅತ್ಯಾಧುನಿಕ ತಂತ್ರಜ್ಞಾನದ ಅಗತ್ಯವೇನಿಲ್ಲ. ರೋಟಾವೈರಸ್ ಲಸಿಕೆ ಉತ್ಪಾದನೆ ಹಂತಗಳು ಕೊವ್ಯಾಕ್ಸಿನ್ ಉತ್ಪಾದನೆ ಹಂತಕ್ಕಿಂತ ಹೆಚ್ಚಾಗಿರುತ್ತದೆ. ರೋಟಾವ್ಯಾಕ್ ಲಸಿಕೆಯನ್ನು 54 ರೂಪಾಯಿಗೆ ಪರಿಚಯಿಸಲಾಗಿದ್ದು, ಇದೀಗ ಈ ಲಸಿಕೆಯ ಬೆಲೆ 162 ರೂಪಾಯಿ ಆಗಿದೆ," ಎಂದಿದ್ದಾರೆ.

English summary
Bharat Biotech Promised Cheaper Covid-19 Vaccine Is Third Costliest Vaccine In World.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X