ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಭಾರತದಲ್ಲಿ ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆಗೆ ಅನುಮೋದನೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 6: ಭಾರತದ ಮೊದಲ ಇಂಟ್ರಾನಾಸಲ್ ಕೋವಿಡ್ ಲಸಿಕೆಯನ್ನು ಉತ್ಪಾದಿಸಿದ ಭಾರತ್ ಬಯೋಟೆಕ್‌ನ ಸಂಸ್ಥೆಯು ಮೂಗಿನ ಮೂಲಕ ನೀಡುವ ಲಸಿಕೆಗೆ ತುರ್ತು ಅನುಮೋದನೆಯನ್ನು ಪಡೆದುಕೊಂಡಿದೆ.

ದೇಶದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಸೋಂಕಿನ ವಿರುದ್ಧ ಪ್ರಾಥಮಿಕ ಪ್ರತಿರಕ್ಷಣೆ ನೀಡುವ ಉದ್ದೇಶದಿಂದ ಭಾರತೀಯ ಔಷಧಿ ನಿಯಂತ್ರಣ ಪ್ರಾಧಿಕಾರ(ಡಿಜಿಸಿಐ)ದಿಂದ ಅನುಮೋದನೆಯನ್ನು ಪಡೆದಿದೆ. ಕೋವಿಡ್-19 ವಿರುದ್ಧ ರಕ್ಷಣೆ ನೀಡುವುದಕ್ಕಾಗಿ ಮೂಗಿನ ಮೂಲಕ ನೀಡಬಹುದಾದ ಮೊದಲ ಲಸಿಕೆ ಇದಾಗಿದೆ.

Bharat Biotech gets emergency use authorization from DCGI for Intranasal Covid 19 vaccine

ಭಾರತ್ ಬಯೋಟೆಕ್ ಸಂಸ್ಥೆಯ ಈ ಸಾಧನೆಯನ್ನು ಶ್ಲಾಘಿಸಿದ ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ, ಇದು 'COVID-19 ವಿರುದ್ಧದ ಭಾರತದ ಹೋರಾಟಕ್ಕೆ ಸಿಕ್ಕ ದೊಡ್ಡ ಜಯ' ಎಂದು ಹೇಳಿದ್ದಾರೆ.

ಇಂಟ್ರಾನಸಲ್ ಕೋವಿಡ್ ಲಸಿಕೆ ಬಗ್ಗೆ ಸಚಿವರ ಟ್ವೀಟ್

ಇಂಟ್ರಾನಸಲ್ ಕೋವಿಡ್ ಲಸಿಕೆ ಬಗ್ಗೆ ಸಚಿವರ ಟ್ವೀಟ್

ಭಾರತೀಯ ಔಷಧಿ ನಿಯಂತ್ರಣ ಪ್ರಾಧಿಕಾರವು ದೇಶದಲ್ಲೇ ಮೊದಲ ಇಂಟ್ರಾನಸಲ್(ಮೂಗಿನ ಮೂಲಕ ನೀಡಬಲ್ಲ)ಲಸಿಕೆಗೆ ಅನುಮೋದನೆ ನೀಡಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಟ್ವೀಟ್ ಮಾಡಿದ್ದಾರೆ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಬಹುದೊಡ್ಡ ಜಯ ಸಿಕ್ಕಂತೆ ಆಗಿದೆ. 18 ವರ್ಷ ಮೇಲ್ಪಟ್ಟವರಿಗೆ ತುರ್ತು ಸಂದರ್ಭದಲ್ಲಿ ಮಾತ್ರ ಈ ಲಸಿಕೆಯನ್ನು ಬಳಸುವುದಕ್ಕೆ ಅನುಮೋದನೆ ನೀಡಲಾಗಿದೆ ಎಂದು ಅವರು ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.

ವೈದ್ಯಕೀಯ ಪ್ರಯೋಗ ನಡೆಸಿದ ಭಾರತ್ ಬಯೋಟೆಕ್ ಸಂಸ್ಥೆ

ವೈದ್ಯಕೀಯ ಪ್ರಯೋಗ ನಡೆಸಿದ ಭಾರತ್ ಬಯೋಟೆಕ್ ಸಂಸ್ಥೆ

ಕಳೆದ ತಿಂಗಳು ಮೂಗಿನ ಮೂಲಕ ನೀಡುವ ಲಸಿಕೆಗೆ ಸಂಬಂಧಿಸಿದಂತೆ ಭಾರತೀಯ ಬಯೋಟೆಕ್ ಸಂಸ್ಥೆಯು ಮೂರನೇ ಹಂತದ ವೈದ್ಯಕೀಯ ಪ್ರಯೋಗವನ್ನು ನಡೆಸಿತು. ಈ 3ನೇ ಹಂತದ ಪ್ರಯೋಗವು ಇಂಟ್ರಾನಸಲ್ ಲಸಿಕೆಯು ಬೂಸ್ಟರ್ ಡೋಸ್ ಆಗಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಪರಿಶೋಧನೆ ಮಾಡಿತು. ಇದಕ್ಕೂ ಪೂರ್ವದಲ್ಲಿ ಇಂಟ್ರಾನಸಲ್ ಕೋವಿಡ್-19 ಲಸಿಕೆಗಾಗಿ ಎರಡು ಪ್ರತ್ಯೇಕ ಪ್ರಯೋಗಗಳನ್ನು ನಡೆಸಲಾಗಿದೆ. ಒಂದು ಪ್ರಯೋಗವನ್ನು ಪ್ರಾಥಮಿಕ ಲಸಿಕೆಗಾಗಿ ಹಾಗೂ ಎರಡನೇ ವೈದ್ಯಕೀಯ ಪ್ರಯೋಗವನ್ನು ಬೂಸ್ಟರ್ ಲಸಿಕೆಯಾಗಿ ನೀಡುವುದರ ಬಗ್ಗೆ ಅಧ್ಯಯನ ನಡೆಸಲಾಯಿತು ಎಂದು ಭಾರತ್ ಬಯೋಟೆಕ್ ಹೇಳಿಕೊಂಡಿದೆ.

ಇಂಟ್ರಾನಸಲ್ ಲಸಿಕೆ ಅನುಮೋದನೆಗಾಗಿ ವರದಿ ಸಲ್ಲಿಕೆ

ಇಂಟ್ರಾನಸಲ್ ಲಸಿಕೆ ಅನುಮೋದನೆಗಾಗಿ ವರದಿ ಸಲ್ಲಿಕೆ

ಭಾರತ್ ಬಯೋಟೆಕ್ ಸಂಸ್ಥೆಯು ಉತ್ಪಾದಿಸಿದ ಇಂಟ್ರಾನಸಲ್ ಕೋವಿಡ್-19 ಲಸಿಕೆಯು ಸುರಕ್ಷತೆಯ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮೂರು ಹಂತಗಳಲ್ಲಿ ನಡೆಸಿದ ವೈದ್ಯಕೀಯ ಪ್ರಯೋಗಗಳ ಫಲಿತಾಂಶದ ಕುರಿತು ವರದಿಯನ್ನು ರಾಷ್ಟ್ರೀಯ ಔಷಧಿ ನಿಯಂತ್ರಣ ಪ್ರಾಧಿಕಾರಕ್ಕೆ ಸಲ್ಲಿಕೆ ಮಾಡಲಾಗಿತ್ತು. ಆ ಮೂಲಕ ಇಂಟ್ರಾನಸಲ್ ಲಸಿಕೆಯು ಪರಿಣಾಮಕಾರಿ ಆಗಿ ಕೆಲಸ ಮಾಡುತ್ತದೆ ಎಂಬುದನ್ನು ಉಲ್ಲೇಖಿಸಿ, ಅನುಮೋದನೆಗಾಗಿ ಮನವಿ ಸಲ್ಲಿಸಲಾಗಿತ್ತು.

ದೇಶದ ಮೊದಲ ಇಂಟ್ರಾನಸಲ್ ಲಸಿಕೆ ಬಗ್ಗೆ ಸಂಸ್ಥೆಯ ಮಾತು

ದೇಶದ ಮೊದಲ ಇಂಟ್ರಾನಸಲ್ ಲಸಿಕೆ ಬಗ್ಗೆ ಸಂಸ್ಥೆಯ ಮಾತು

"ಇಂಟ್ರಾನಸಲ್ ಲಸಿಕೆಗೆ ಅನುಮೋದನೆ ಸಿಕ್ಕಿದ್ದೇ ಆದಲ್ಲಿ ಅದು ಕೋವಿಡ್-19 ಲಸಿಕೆ ವಿತರಣೆಗೆ ವೇಗ ನೀಡುತ್ತದೆ. ಈ ಇಂಟ್ರಾನಸಲ್ ಲಸಿಕೆಯು ಸೂತ್ರೀಕರಣ ಮತ್ತು ವಿತರಣಾ ಸಾಧನವನ್ನು ನಿರ್ವಹಿಸಲು ಸುಲಭವಾದ ಸಾಮೂಹಿಕ ಪ್ರತಿರಕ್ಷಣೆ ಅಭಿಯಾನಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೊರೊನಾವೈರಸ್ ಸೋಂಕಿನ ರೂಪಾಂತರ ಹಾಗೂ ಹೊಸ ತಳಿಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಈ ಲಸಿಕೆಯು ಹೊಂದಿರುತ್ತದೆ," ಎಂದು ಭಾರತ್ ಬಯೋಟೆಕ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸುಚಿತ್ರಾ ಕೆ ಎಲಾ ಹೇಳಿದ್ದಾರೆ.

English summary
Bharat Biotech gets emergency use authorization from DCGI for Intranasal Covid 19 vaccine. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X