ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ತೆಗೆದುಕೊಂಡ ಸಚಿವ ಅನಿಲ್‌ ವಿಜ್‌ಗೆ ಕೋವಿಡ್: ಭಾರತ್ ಬಯೋಟೆಕ್ ಸ್ಪಷ್ಟನೆ

|
Google Oneindia Kannada News

ನವದೆಹಲಿ, ಡಿಸೆಂಬರ್ 5: ಭಾರತ್ ಬಯೋಟೆಕ್‌ನ ಪ್ರಾಯೋಗಿಕ ಕೋವ್ಯಾಕ್ಸಿನ್ ಲಸಿಕೆ ಪಡೆದ ಹರ್ಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಅವರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿರುವ ಬಗ್ಗೆ ಭಾರತ್ ಬಯೋಟೆಕ್ ಸ್ಪಷ್ಟೀಕರಣ ನೀಡಿದೆ. ವ್ಯಕ್ತಿ ಎರಡು ಡೋಸ್ ತೆಗೆದುಕೊಂಡರೆ ಲಸಿಕೆ ಪರಿಣಾಮಕಾರಿಯಾಗುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಅದು ತಿಳಿಸಿದೆ.

'ಎರಡನೆಯ ಡೋಸ್ ನೀಡಿದ 14 ದಿನಗಳ ಬಳಿಕ ಅದರ ಫಲಪ್ರದತೆಯನ್ನು ನಿರ್ಧರಿಸಬಹುದಾಗಿದೆ' ಎಂದು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಶನಿವಾರ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಕೋವ್ಯಾಕ್ಸಿನ್ ಲಸಿಕೆ ಪಡೆದ ಮೇಲೆ ಹರ್ಯಾಣ ಸಚಿವ ಅನಿಲ್‌ ವಿಜ್‌ಗೆ ಕೊರೊನಾ ಸೋಂಕು ಕೋವ್ಯಾಕ್ಸಿನ್ ಲಸಿಕೆ ಪಡೆದ ಮೇಲೆ ಹರ್ಯಾಣ ಸಚಿವ ಅನಿಲ್‌ ವಿಜ್‌ಗೆ ಕೊರೊನಾ ಸೋಂಕು

ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಹರಿಯಾಣದಲ್ಲಿ ಮೊದಲ ಸ್ವಯಂಸೇವಕರಾಗಿ ಲಸಿಕೆ ಪಡೆದುಕೊಂಡಿದ್ದ ಹರ್ಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಅವರು ಕೊರೊನಾ ವೈರಸ್ ಪಾಸಿಟಿವ್‌ಗೆ ಒಳಗಾಗಿದ್ದಾರೆ. ಹೀಗಾಗಿ ಲಸಿಕೆಯ ಗುಣಮಟ್ಟ ಮತ್ತು ದಕ್ಷತೆಯ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ. 'ಲಸಿಕೆ ಅಭಿವೃದ್ಧಿಪಡಿಸುವುದರಲ್ಲಿ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆಯಾಗಿದೆ' ಎಂದು ಕಂಪೆನಿ ಭರವಸೆ ನೀಡಿದೆ.

Bharat Biotech Clarifies After Haryana Minister Anil Vij Tests Covid Positive

Recommended Video

Chahal Jadeja ಅದಲು ಬದಲು ಸರಿ ಇಲ್ಲ ಎಂದ Henriques | Oneindia Kannada

'ಕೋವ್ಯಾಕ್ಸಿನ್ ಪ್ರಾಯೋಗಿಕ ಲಸಿಕೆಯು 28 ದಿನಗಳ ಅವಧಿಯಲ್ಲಿ ಎರಡು ಡೋಸ್‌ಗಳಲ್ಲಿ ನೀಡುವಂತಹದ್ದು. 2ನೇ ಡೋಸ್‌ನ 14 ದಿನಗಳ ಬಳಿಕ ಲಸಿಕೆಯ ಪರಿಣಾಮವನ್ನು ನಿರ್ಧರಿಸಲಾಗುತ್ತದೆ. ಮೂರನೇ ಹಂತದ ಲಸಿಕೆಯಲ್ಲಿ 25 ಜಾಗಗಳಲ್ಲಿ 26,000 ಸ್ವಯಂಸೇವಕರಿಗೆ ಲಸಿಕೆ ನೀಡಲಾಗುತ್ತಿದೆ. ಶೇ 50 ರಷ್ಟು ಜನರಿಗೆ ಲಸಿಕೆ ಮತ್ತು ಶೇ 50ರಷ್ಟು ಮಂದಿಗೆ ಅದರ ನಕಲು ನೀಡಲಾಗುತ್ತಿದೆ' ಎಂದು ಸಂಸ್ಥೆ ತಿಳಿಸಿದೆ.

English summary
Covaxin maker Bharat Biotech has clarified on its efficacy after Haryana health minister Anil Vij, a volunteer tested positive coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X