ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರೆಜಿಲ್ ಕಂಪನಿಗಳ ಜೊತೆ ಒಪ್ಪಂದ ಮುರಿದುಕೊಂಡ ಭಾರತ್ ಬಯೋಟೆಕ್

|
Google Oneindia Kannada News

ನವದೆಹಲಿ, ಜುಲೈ 24: ಭಾರತೀಯ ಲಸಿಕಾ ಉತ್ಪಾದನಾ ಸಂಸ್ಥೆ ಭಾರತ್ ಬಯೋಟೆಕ್, ಲಸಿಕೆ ಪೂರೈಕೆ ಸಂಬಂಧ ಬ್ರೆಜಿಲ್‌ನ ಎರಡು ಸಂಸ್ಥೆಗಳೊಂದಿನ ಒಪ್ಪಂದವನ್ನು ಅಂತ್ಯಗೊಳಿಸಿದೆ.

ಕೋವ್ಯಾಕ್ಸಿನ್ ಲಸಿಕೆಯನ್ನು ಬ್ರೆಜಿಲ್‌ನಲ್ಲಿ ಪರಿಚಯಿಸಲು ಮುಂದಾಗಿದ್ದ ಪ್ರೆಸಸಾ ಮೆಡಿಸಮೆಂಟೋಸ್ ಹಾಗೂ ಎನ್ವಿಕ್ಸಿಯಾ ಫಾರ್ಮಾಸ್ಯುಟಿಕಲ್ಸ್ ಎಲ್‌ಎಲ್‌ಸಿ ಜೊತೆಗಿನ ಒಪ್ಪಂದವನ್ನು ಕೊನೆಗಾಣಿಸಿದೆ.

"ಕೋವ್ಯಾಕ್ಸಿನ್ ಲಸಿಕೆಯನ್ನು ಬ್ರೆಜಿಲ್‌ನಲ್ಲಿ ಪರಿಚಯಿಸುವ ಉದ್ದೇಶದೊಂದಿಗೆ ಪ್ರೆಸಸಾ ಮೆಡಿಸಮೆಂಟೋಸ್ ಹಾಗೂ ಎನ್ವಿಕ್ಸಿಯಾ ಫಾರ್ಮಾಸ್ಯುಟಿಕಲ್ಸ್ ಎಲ್‌ಎಲ್‌ಸಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ತಕ್ಷಣವೇ ಜಾರಿಗೆ ಬರುವಂತೆ ಒಪ್ಪಂದವನ್ನು ರದ್ದುಗೊಳಿಸಲಾಗಿದೆ" ಎಂದು ಭಾರತ್ ಬಯೋಟೆಕ್ ಮಾಹಿತಿ ನೀಡಿದೆ.

Bharat Biotech Cancels Contracts With Brazil Firms Over Covaxin Supply

ಜಾಗತಿಕ ಲಸಿಕಾ ಪೂರೈಕೆಯಡಿಯಲ್ಲಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಬ್ರೆಜಿಲ್‌ಗೆ ಕೋವ್ಯಾಕ್ಸಿನ್ ಲಸಿಕೆ ಪೂರೈಸುವುದಾಗಿ ತಿಳಿಸಿತ್ತು. ಬ್ರೆಜಿಲ್‌ಗೆ ಒಂದು ಡೋಸ್ ಲಸಿಕೆಗೆ 15 ಡಾಲರ್ ನಿಗದಿ ಮಾಡಲಾಗಿತ್ತು. ಆದರೆ ಇದುವರೆಗೂ ಸರ್ಕಾರದ ಕಡೆಯಿಂದ ಯಾವುದೇ ಮುಂಗಡ ಹಣ ಕಂಪನಿಗೆ ಬಂದಿಲ್ಲ ಎಂಬುದು ತಿಳಿದುಬಂದಿದೆ.

ಬ್ರೆಜಿಲ್ ಜೊತೆಗಿನ ಕೊವ್ಯಾಕ್ಸಿನ್ ಒಪ್ಪಂದ ರದ್ದು: ಭಾರತ್ ಬಯೋಟೆಕ್ ಹೇಳಿದ್ದೇನು?ಬ್ರೆಜಿಲ್ ಜೊತೆಗಿನ ಕೊವ್ಯಾಕ್ಸಿನ್ ಒಪ್ಪಂದ ರದ್ದು: ಭಾರತ್ ಬಯೋಟೆಕ್ ಹೇಳಿದ್ದೇನು?

ಈಚೆಗೆ ಭಾರತದ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆ ಖರೀದಿಗೆ ಸಂಬಂಧಿಸಿದಂತೆ ಬ್ರೆಜಿಲ್‌ನಲ್ಲಿ ವಿವಾದ ಸೃಷ್ಟಿಯಾಗಿತ್ತು. ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೋ ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಭಾರತದಿಂದ ಪೂರೈಕೆಯಾಗದಿರುವ ಕೋವ್ಯಾಕ್ಸಿನ್ ಲಸಿಕೆ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ 45 ಮಿಲಿಯನ್ ಡಾಲರ್ ಹಣ ಬಿಡುಗಡೆ ಮಾಡಲಾಗಿದೆ ಎಂಬ ವಿವಾದ ಉಂಟಾಗಿತ್ತು. ಈ ಬೆನ್ನಲ್ಲೇ 32.4 ಕೋಟಿ ರೂ ಮೌಲ್ಯದ ಲಸಿಕೆ ಒಪ್ಪಂವನ್ನು ಬ್ರೆಜಿಲ್ ಕೈಬಿಟ್ಟಿತ್ತು.

ಒಟ್ಟು 20 ಮಿಲಿಯನ್ ಡೋಸ್ ಕೋವ್ಯಾಕ್ಸಿನ್ ಲಸಿಕೆ ಖರೀದಿಗೆ ಭಾರತ್ ಬಯೋಟೆಕ್ ಸಂಸ್ಥೆ ಜೊತೆಗೆ ಬ್ರೆಜಿಲ್ ಒಪ್ಪಂದ ಮಾಡಿಕೊಂಡಿತ್ತು.

ಇದೀಗ ಭಾರತ್ ಬಯೋಟೆಕ್ ಬ್ರೆಜಿಲ್‌ ಸಂಸ್ಥೆಗಳೊಂದಿಗಿನ ಒಪ್ಪಂದಗಳನ್ನು ಮುರಿದುಕೊಂಡಿದೆ.

English summary
Hyderabad based bharath biotech on friday said that it has canceled its contract with two brazilian companies
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X