ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವ್ಯಾಕ್ಸಿನ್ ಲಸಿಕೆ ತುರ್ತು ಬಳಕೆ ಅನುಮತಿಗೆ ಭಾರತ್ ಬಯೋಟೆಕ್ ಮನವಿ

|
Google Oneindia Kannada News

ನವದೆಹಲಿ, ಡಿಸೆಂಬರ್ 7: ಸೆರಮ್ ಸಂಸ್ಥೆಯು ತನ್ನ 'ಕೋವಿಶೀಲ್ಡ್' ಲಸಿಕೆಯನ್ನು ತುರ್ತು ಬಳಕೆಗೆ ಉಪಯೋಗಿಸಲು ಅನುಮತಿ ಕೋರಿದ ಬೆನ್ನಲ್ಲೇ ಸಂಪೂರ್ಣ ಸ್ವದೇಶಿ ನಿರ್ಮಿತ, ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಕೂಡ ಸೋಮವಾರ ತನ್ನ 'ಕೋವ್ಯಾಕ್ಸಿನ್' ಲಸಿಕೆಯ ತುರ್ತು ಬಳಕೆಯ ಅಧಿಕಾರದ (ಇಯುಎ) ಅನುಮತಿಗೆ ಕೋರಿ ಅರ್ಜಿ ಸಲ್ಲಿಸಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಸಹಯೋಗದಲ್ಲಿ ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಅದರ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸುತ್ತಿದೆ.

ಭಾರತದಲ್ಲಿ ಫೈಜರ್ ಬಳಿಕ ಮತ್ತೊಂದು ಕೊರೊನಾ ಲಸಿಕೆ ಅನುಮೋದನೆಗೆ ಮನವಿಭಾರತದಲ್ಲಿ ಫೈಜರ್ ಬಳಿಕ ಮತ್ತೊಂದು ಕೊರೊನಾ ಲಸಿಕೆ ಅನುಮೋದನೆಗೆ ಮನವಿ

ಅಮೆರಿಕದ ಫೈಜರ್ ಸಂಸ್ಥೆ ಮತ್ತು ಬ್ರಿಟನ್ ಮೂಲದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಔಷಧ ಸಂಸ್ಥೆಗಳ ಸಹಯೋಗದಲ್ಲಿ ಭಾರತದಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿರುವ ಸೆರಮ್ ಸಂಸ್ಥೆಗಳು ಈಗಾಗಲೇ ಭಾರತದಲ್ಲಿ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವಂತೆ ಔಷಧ ನಿಯಂತ್ರಕ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದವು. ಈಗ ಭಾರತ್ ಬಯೋಟೆಕ್ ಮೂರನೇ ಲಸಿಕೆಯಾಗಿ ಈ ಪಟ್ಟಿಗೆ ಸೇರಿಕೊಂಡಿದೆ.

Bharat Biotech Applies For Emergency Use Authorisation For Its Covaxin Covid Vaccine

ಕೋವ್ಯಾಕ್ಸಿನ್ ಸಂಪೂರ್ಣ ಸ್ವದೇಶಿ ನಿರ್ಮಿತ ಲಸಿಕೆಯಾಗಿದೆ. 25 ಸ್ಥಳಗಳಲ್ಲಿ ಸುಮಾರು 26,000ಮಂದಿಯನ್ನು ಪ್ರಯೋಗಕ್ಕೆ ಒಳಪಡಿಸುತ್ತಿದ್ದು, ಇದು ದೇಶದ ಅತಿ ದೊಡ್ಡ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಎನಿಸಿದೆ. ಕೋವ್ಯಾಕ್ಸಿನ್ ಎರಡು ಡೋಸ್‌ಗಳ ಲಸಿಕೆಯಾಗಿದ್ದು, ಮೊದಲ ಲಸಿಕೆ ನೀಡಿದ 14 ದಿನದ ಬಳಿಕ ಎರಡನೆಯ ಡೋಸ್ ಅನ್ನು ನಿರ್ಧರಿಸಲಾಗಿತ್ತದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಫೆಬ್ರವರಿಯಲ್ಲಿ ಲಸಿಕೆಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಚೀನಾದಿಂದ ಇಂಡೋನೇಷ್ಯಾಕ್ಕೆ ಬಂತು 12 ಲಕ್ಷ ಕೊವಿಡ್ ಲಸಿಕೆಚೀನಾದಿಂದ ಇಂಡೋನೇಷ್ಯಾಕ್ಕೆ ಬಂತು 12 ಲಕ್ಷ ಕೊವಿಡ್ ಲಸಿಕೆ

ಹರ್ಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದ್ದು, ಕೋವ್ಯಾಕ್ಸಿನ್ ಲಸಿಕೆಯ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿತ್ತು. ವಾರಗಳ ಹಿಂದೆ ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದ ಅನಿಲ್ ವಿಜ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

English summary
Hyderabad based fully indigenous Bharat Biotech has applied for Emergency Use Authorisation for its Covaxin Coronavirus vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X