ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆಗಳ ವ್ಯತಿರಿಕ್ತ ಪರಿಣಾಮಕ್ಕೆ ಕಂಪನಿಗಳೇ ಹೊಣೆ

|
Google Oneindia Kannada News

ನವದೆಹಲಿ, ಜನವರಿ.14: ಕೊರೊನಾವೈರಸ್ ಸೋಂಕು ನಿವಾರಣೆಗೆ ಎರಡು ಖಾಸಗಿ ಕಂಪನಿಗಳು ಸಿದ್ಧಪಡಿಸಿದ ಲಸಿಕೆ ನೀಡಲು ಕೇಂದ್ರ ಸರ್ಕಾರ ಅಣಿಯಾಗಿದೆ. ಜನವರಿ.16ರಂದು ದೇಶಾದ್ಯಂತ ಲಸಿಕೆ ವಿತರಣೆ ಅಭಿಯಾನ ಆರಂಭವಾಗುತ್ತಿರುವ ಹೊಸ್ತಿಲಿನಲ್ಲೇ ಹೊಸ ಆದೇಶ ಹೊರಡಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಭಾರತದಲ್ಲಿ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಈಗಾಗಲೇ ಅನುಮತಿ ನೀಡಲಾಗಿದೆ. ಇದರ ನಡುವೆ ಕೊವಿಶೀಲ್ಡ್ ಲಸಿಕೆಯಿಂದ ಅಪಾಯವಾದರೆ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಕೊವ್ಯಾಕ್ಸಿನ್ ಲಸಿಕೆಯಿಂದ ತೊಂದರೆಯಾದಲ್ಲಿ ಭಾರತ್ ಬಯೋಟೆಕ್ ಇಂಟರ್ ನ್ಯಾಷನಲ್ ಲಿಮಿಟೆಡ್ ಹೊಣೆ ಆಗಿರುತ್ತದೆ ಎಂದು ಸರ್ಕಾರವು ಆದೇಶಿಸಿದೆ.

ಕೊವಿಡ್ ಲಸಿಕೆ ಅಭಿಯಾನ: ಮೊದಲ ದಿನ 3 ಲಕ್ಷ ಕಾರ್ಯಕರ್ತರಿಗೆ ಲಸಿಕೆಕೊವಿಡ್ ಲಸಿಕೆ ಅಭಿಯಾನ: ಮೊದಲ ದಿನ 3 ಲಕ್ಷ ಕಾರ್ಯಕರ್ತರಿಗೆ ಲಸಿಕೆ

ಡ್ರಗ್ ಆಂಡ್ ಕಾಸ್ಮೆಟಿಕ್ಸ್ ಕಾಯ್ದೆ, ಸಿಡಿಎಸ್ ಸಿಓ, ಡಿಸಿಜಿಐ ಕಾಯ್ದೆ ಅಡಿಯಲ್ಲಿ ಲಸಿಕೆಯಿಂದ ಯಾವುದೇ ರೀತಿ ವ್ಯತಿರಿಕ್ತ ಪರಿಣಾಮಗಳು ಆದಲ್ಲಿ ಕಂಪನಿ ಹೊಣೆಯಾಗಿರುತ್ತದೆ ಎಂದು ಅನುಮೋದನೆ ವೇಳೆ ಸ್ಪಷ್ಚವಾಗಿ ಉಲ್ಲೇಖಿಸಲಾಗಿದೆ. ಲಸಿಕೆ ಪಡೆದ ವ್ಯಕ್ತಿಯಲ್ಲಿ ವ್ಯತಿರಿಕ್ತ ಪ್ರಭಾವ ಕಂಡು ಬಂದಲ್ಲಿ ಕಂಪನಿಯನ್ನು ಸಂಪರ್ಕಿಸುವಂತೆ ಭಾರತ್ ಬಯೋಟೆಕ್ ಇಂಟರ್ ನ್ಯಾಷನಲ್ ಲಿಮಿಟೆಡ್ ಅನುಮೋದನೆಯ ಒಪ್ಪಂದದಲ್ಲಿ ಹೇಳಿದೆ.

Bharat Biotech And Serum Institute To Pay Damages In Case Of Adverse Reaction, Inform Govt As Well: Centre

ಸರ್ಕಾರದ ಅಗತ್ಯತೆ ಬಗ್ಗೆ ಹೇಳಿಕ ಅದರ್ ಪೂನಾವಲ್ಲಾ:

ದೇಶದ ಹಲವು ಮೊಕದ್ದಮೆಗಳಿಂದ ಕಂಪನಿಗಳಿಗೆ ಆಗುತ್ತಿರುವ ನಷ್ಟದಿಂದ ಹೊರ ಬರುವುದಕ್ಕೆ ಸರ್ಕಾರದ ಸಹಾಯ ಬೇಕಾಗಿದೆ ಎಂದು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಅದರ್ ಪೂನಾವಲ್ಲಾ ಅಭಿಪ್ರಾಯಪಟ್ಟಿದ್ದಾರೆ. ಲಸಿಕೆ ಮತ್ತು ಔಷಧಿಗಳ ಸಂಶೋಧನೆ ಮತ್ತು ತಯಾರಿಕೆಯಲ್ಲಿ ತೊಡಗಿರುವ ಜನರು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ ಎಂದು ಭಾರತ್ ಬಯೋಟೆಕ್ ಇಂಟರ್ ನ್ಯಾಷನಲ್ ಲಿಮಿಟೆಡ್ ಮತ್ತು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಾಕಷ್ಟು ಬಾರಿ ಪ್ರಸ್ತಾಪಿಸಿತ್ತು. ಸರ್ಕಾರವು ಮಾತ್ರ ಈ ಬಗ್ಗೆ ತಲೆಗೆ ಹಾಕಿಕೊಂಡಿಲ್ಲ ಎಂದು ಉಲ್ಲೇಖಿಸಲಾಗಿದೆ.

English summary
Bharat Biotech And Serum Institute To Pay Damages In Case Of Adverse Reaction, Inform Govt As Well: Centre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X