ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್ ಬಂದ್; ಹಲವು ರಾಜ್ಯಗಳಲ್ಲಿ ರೈಲು ಸಂಚಾರಕ್ಕೆ ತಡೆ

|
Google Oneindia Kannada News

ನವದೆಹಲಿ, ಡಿಸೆಂಬರ್ 08 : ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ಧ ರೈತರು ನವದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಜೊತೆಗಿನ 5 ಸುತ್ತಿನ ಮಾತುಕತೆಗಳ ವಿಫಲವಾಗಿದೆ. ಮಂಗಳವಾರ ಭಾರತ್ ಬಂದ್ಗೆ ಸಹ ಕರೆ ನೀಡಲಾಗಿದೆ.

ಮಂಗಳವಾರ ಭಾರತ್ ಬಂದ್‌ ಹಿನ್ನಲೆಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ರೈಲುಗಳ ಸಂಚಾರಕ್ಕೆ ತಡೆ ಒಡ್ಡಲಾಗಿದೆ. ಪ್ರತಿಭಟನೆ ನಡೆಸುವವರನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ರೈಲು ಸಂಚಾರಕ್ಕೆ ಅವಕಾಶವನ್ನು ನೀಡಿದ್ದಾರೆ. ಬೆಳಗ್ಗೆ 11 ಗಂಟೆ ಬಳಿಕ ಮತ್ತೆ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.

ಭಾರತ್ ಬಂದ್; ಎರಡು ದೊಡ್ಡ ರೈಲ್ವೆ ಒಕ್ಕೂಟದ ಬೆಂಬಲ ಭಾರತ್ ಬಂದ್; ಎರಡು ದೊಡ್ಡ ರೈಲ್ವೆ ಒಕ್ಕೂಟದ ಬೆಂಬಲ

ಭಾರತ್ ಬಂದ್‌ಗೆ ದೇಶದ ಎರಡು ದೊಡ್ಡ ರೈಲು ಒಕ್ಕೂಟಗಳಾದ ಭಾರತೀಯ ರೈಲ್ವೆ ನೌಕರರ ರಾಷ್ಟ್ರೀಯ ಒಕ್ಕೂಟ (ಎನ್‌ಎಫ್‌ಐಆರ್), ಅಖಿಲ ಭಾರತ ರೈಲ್ವೆಮೆನ್ಸ್ ಫೆಡರೇಶನ್(ಎಐಆರ್‌ಎಫ್) ಬೆಂಬಲ ನೀಡಿವೆ. ಎರಡು ಸಂಘಟನೆಗಳಿಂದ ಸುಮಾರು 13 ಲಕ್ಷ ನೌಕರರು ಇದ್ದಾರೆ.

ಭಾರತ ಬಂದ್: ರಾಷ್ಟ್ರಪತಿಗೆ 9 ಲಕ್ಷ ರೈತರಿಂದ ಪೋಸ್ಟ್‌ಕಾರ್ಡ್ ರವಾನೆ ಭಾರತ ಬಂದ್: ರಾಷ್ಟ್ರಪತಿಗೆ 9 ಲಕ್ಷ ರೈತರಿಂದ ಪೋಸ್ಟ್‌ಕಾರ್ಡ್ ರವಾನೆ

ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯ ತನಕ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರೈತರು ಹೇಳಿದ್ದಾರೆ. ವಿವಿಧ ರಾಜ್ಯಗಳಲ್ಲಿ ಈಗಾಗಲೇ ಪ್ರತಿಭಟನೆ ನಡೆಯುತ್ತಿದೆ. ಬಸ್, ರೈಲುಗಳ ಸಂಚಾರಕ್ಕೆ ಅಡ್ಡಿ ಪಡಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳನ್ನು ರೈತರು ತಡೆಯುತ್ತಿದ್ದಾರೆ.

ಭಾರತ್ ಬಂದ್; ಪುಣೆಯಲ್ಲಿ ಎಪಿಎಂಸಿಯಲ್ಲಿ ವಹಿವಾಟು ಎಂದಿನಂತೆ ಭಾರತ್ ಬಂದ್; ಪುಣೆಯಲ್ಲಿ ಎಪಿಎಂಸಿಯಲ್ಲಿ ವಹಿವಾಟು ಎಂದಿನಂತೆ

ರೈಲು ತಡೆದ ಎಡಪಕ್ಷಗಳು

ರೈಲು ತಡೆದ ಎಡಪಕ್ಷಗಳು

ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಎಡ ಪಕ್ಷಗಳ ಕಾರ್ಯಕರ್ತರು ರೈಲುಗಳ ಸಂಚಾರಕ್ಕೆ ಅಡ್ಡಿ ಪಡಿಸಿದರು. ನಿಲ್ದಾಣದಲ್ಲಿ ರೈಲುಗಳನ್ನು ತಡೆದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ವಿಜಯವಾಡದಲ್ಲಿ ಪ್ರತಿಭಟನೆ

ವಿಜಯವಾಡದಲ್ಲಿ ಪ್ರತಿಭಟನೆ

ಆಂಧ್ರ ಪ್ರದೇಶ ರಾಜ್ಯದ ವಿಜಯವಾಡದಲ್ಲಿ ಎಡಪಕ್ಷಗಳ ಕಾರ್ಯಕರ್ತರು ರೈಲು ನಿಲ್ದಾಣಕ್ಕೆ ನುಗ್ಗಿದರು. ಹಳಿಗಳ ಮೇಲೆ ಧರಣಿ ಕುರಿತು ರೈಲು ಸಂಚಾರಕ್ಕೆ ಅಡ್ಡಿಪಡಿಸಿದರು. ಭಾರತ್ ಬಂದ್‌ಗೆ ಬೆಂಬಲವನ್ನು ಘೋಷಣೆ ಮಾಡಿದರು.

ಓಡಿಶಾದಲ್ಲಿಯೂ ರೈಲು ತಡೆ

ಓಡಿಶಾದಲ್ಲಿಯೂ ರೈಲು ತಡೆ

ಓಡಿಶಾ ರಾಜ್ಯದ ಭುವನೇಶ್ವರದಲ್ಲಿ ಎಡ ಪಕ್ಷಗಳು, ಟ್ರೇಡ್ ಯೂನಿಯನ್ ಸದಸ್ಯರು ರೈಲು ನಿಲ್ದಾಣದ ಮುಂದೆ, ಒಳಗೆ ಪ್ರತಿಭಟನೆ ನಡೆಸಿದರು. ಇದರಿಂದಾಗಿ ರೈಲುಗಳ ಸಂಚಾರಕ್ಕೆ ಕೆಲವು ಕಾಲ ಅಡಚಣೆ ಉಂಟಾಯಿತು.

ಮಹಾರಾಷ್ಟ್ರದಲ್ಲಿಯೂ ತಡೆ

ಮಹಾರಾಷ್ಟ್ರದಲ್ಲಿಯೂ ತಡೆ

ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ರೈಲು ನಿಲ್ದಾಣಕ್ಕೆ ಸ್ವಾಭಿಮಾನಿ ಶಕ್ತಿ ಸಂಘಟನೆ ಸದಸ್ಯರು ನುಗ್ಗಿದರು. ರೈಲುಗಳನ್ನು ತಡೆದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದು, ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

English summary
Various organizations and political party's extend the support for December 8 bharat bandh called by farmers. Trains stopped in several states during the protest in morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X