ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ತಟ್ಟಲಿಲ್ಲ ಭಾರತ್ ಬಂದ್ ಬಿಸಿ!

|
Google Oneindia Kannada News

Recommended Video

Bharat Bandh : ಭಾರತ್ ಬಂದ್ ದಿನವೂ ಕೂಡ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ | Oneindia Kannada

ನವದೆಹಲಿ, ಸೆಪ್ಟೆಂಬರ್ 10: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ದೇಶವ್ಯಾಪಿ ಬಂದ್‌ಗೆ ಕಾಂಗ್ರೆಸ್ ಮತ್ತು ಇತರ ಕೆಲವು ಪಕ್ಷಗಳು ಕರೆ ನೀಡಿವೆ.

ಆದರೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮಾತ್ರ ತನಗೂ ಬಂದ್‌ಗೂ ಸಂಬಂಧವಿಲ್ಲ ಎಂಬಂತೆ ತನ್ನ 'ಏರುವಿಕೆ'ಯನ್ನು ಮುಂದುವರಿಸಿದೆ!

ಭಾರತ್ ಬಂದ್ ನಡುವೆಯೇ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಸೋಮವಾರ ಮತ್ತೆ ಏರಿಕೆ ಕಂಡಿದೆ.

ಭಾರತ್ ಬಂದ್ ಕೇಂದ್ರ ಸರ್ಕಾರದ ವಿರುದ್ಧದ ಷಡ್ಯಂತ್ರ: ಯಡಿಯೂರಪ್ಪ ಭಾರತ್ ಬಂದ್ ಕೇಂದ್ರ ಸರ್ಕಾರದ ವಿರುದ್ಧದ ಷಡ್ಯಂತ್ರ: ಯಡಿಯೂರಪ್ಪ

ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 23 ಮತ್ತು ಡೀಸೆಲ್ 22 ಪೈಸೆಯಷ್ಟು ಏರಿಕೆ ಕಂಡಿದೆ. ಪೆಟ್ರೋಲ್ ಲೀಟರ್‌ಗೆ 80.73 ರೂ. ಇದ್ದರೆ, ಡೀಸೆಲ್ ಬೆಲೆ 72.83 ರೂ.ಗೆ ತಲುಪಿದೆ.

Bharat bandh: petrol and diesel price continue to hike

ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಲೀಟರ್‌ಗೆ 88.12 ಮತ್ತು ಡೀಸೆಲ್ 77.32 ರೂ.ನಂತೆ ಮಾರಾಟವಾಗುತ್ತಿದೆ.

LIVE: ಪ್ರತಿಭಟನೆಗೆ ಸೋನಿಯಾ, ಮನಮೋಹನ್ ಸಿಂಗ್ ಹಾಜರುLIVE: ಪ್ರತಿಭಟನೆಗೆ ಸೋನಿಯಾ, ಮನಮೋಹನ್ ಸಿಂಗ್ ಹಾಜರು

ಬೆಂಗಳೂರಿನಲ್ಲಿ ಭಾನುವಾರ ಪ್ರತಿ ಲೀಟರ್‌ ಪೆಟ್ರೋಲ್‌ 83.12 ರೂ ಹಾಗೂ ಡೀಸೆಲ್ 74.95 ರೂ. ಇತ್ತು. ಸೋಮವಾರ ಇದು ಕ್ರಮವಾಗಿ 83.46 ಮತ್ತು 75.26ಕ್ಕೆ ಏರಿದೆ.

ಚೆನ್ನೈನಲ್ಲಿ ಪೆಟ್ರೋಲ್ ದರ 84.00 ರೂ ಮತ್ತು ಡೀಸೆಲ್ 77.07 ರೂ. ಆಗಿದೆ.

ಭಾರತ್ ಬಂದ್: ಕರಾವಳಿಯಲ್ಲಿ ತಟ್ಟಿದ ಪ್ರತಿಭಟನೆಯ ಬಿಸಿಭಾರತ್ ಬಂದ್: ಕರಾವಳಿಯಲ್ಲಿ ತಟ್ಟಿದ ಪ್ರತಿಭಟನೆಯ ಬಿಸಿ

ಕಾಂಗ್ರೆಸ್ ನೇತೃತ್ವದಲ್ಲಿ ಸುಮಾರು 21 ವಿರೋಧ ಪಕ್ಷಗಳು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ.

English summary
Fuel prices continued to hike on Monday, even the nation is witnessing Bharat bandh against petrol and diesel price rise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X