ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್ ಬಂದ್ : ರಾಜ್ಯದ ಹಲವೆಡೆ ತಟ್ಟದ ಬಂದ್ ಬಿಸಿ

|
Google Oneindia Kannada News

ಬೆಂಗಳೂರು, ಜನವರಿ 08: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಮತ್ತು ಬುಧವಾರ(ಜ.8-9), ಕಾರ್ಮಿಕ ಸಂಘಟನೆಗಳು ಕರೆನೀಡಿರುವ 'ಭಾರತ್ ಬಂದ್' ಗೆ ವ್ಯಾಪಕ ಬೆಂಬಲ ವ್ಯಕ್ತವಾಗುವ ನಿರೀಕ್ಷೆಯಿದೆ.

ಜನವರಿ 8 ಮತ್ತು 9ರಂದು ಕೆಎಸ್ಆರ್‌ಟಿಸಿ ನೌಕರರ ಮುಷ್ಕರ ಜನವರಿ 8 ಮತ್ತು 9ರಂದು ಕೆಎಸ್ಆರ್‌ಟಿಸಿ ನೌಕರರ ಮುಷ್ಕರ

ಒಟ್ಟು 12 ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶವ್ಯಾಪಿ ಮುಷ್ಕರ ನಡೆಸಲಾಗುತ್ತಿದ್ದು, ಜನವರಿ 8 ರ ಬೆಳಿಗ್ಗೆ 6 ರಿಂದ ಜನವರಿ 9 ರ ಸಂಜೆ 5 ರವರೆಗೆ ಬಂದ್ ನಡೆಯಲಿದೆ.

ಭಾರತ್ ಬಂದ್ ವೇಳೆ ಕಂಡ ಚಿತ್ರಣಗಳು

Bharat Bandh on Jan 8 and 9: LIVE updates

ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವೂ ಬಂದ್ ಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಸಂಸ್ಥೆಗಳು ಬಂದ್ ಗೆ ಬೆಂಬಲ ನೀಡಿದ್ದು, ಉಬರ್ ಮತ್ತು ಓಲಾ ಕ್ಯಾಬ್ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿಲ್ಲ.

ಜನವರಿ 8, 9ಕ್ಕೆ ದೇಶವ್ಯಾಪಿ ಮುಷ್ಕರ : ಏನಿರುತ್ತೆ, ಏನಿರಲ್ಲ?ಜನವರಿ 8, 9ಕ್ಕೆ ದೇಶವ್ಯಾಪಿ ಮುಷ್ಕರ : ಏನಿರುತ್ತೆ, ಏನಿರಲ್ಲ?

ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಶಾಪ್, ಆಂಬುಲೆನ್ಸ್ ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಭಾರತ್ ಬಂದ್ ಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಕನ್ನಡ ನೀಡಲಿದೆ.

Newest FirstOldest First
1:52 PM, 8 Jan

ಪರಿಸ್ಥತಿ ಗಮನಿಸಿ ನಾಳೆಯೂ ಶಾಲೆ-ಕಾಲೇಜುಗಳಿಗೆ ರಜೆ ನೀಡಬೇಕೋ ಬೇಡವೋ ಎಂಬ ಬಗ್ಗೆ ಆಯಾ ಶಾಲಾ-ಕಾಲೇಜುಗಳ ಅಡಳಿತ ಮಂಡಳಿ ನಿರ್ಧರಿಸಲಿದೆ .
1:46 PM, 8 Jan

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಂದ್ ಬಿಸಿ ತಟ್ಟಿಲ್ಲ. ಎಂದಿನಂತೆ ಕಾರ್ಯ ನಿರ್ವಹಿಸುತ್ತಿರುವ ಸಾರ್ವಜನಿಕ ಸಾರಿಗೆ
1:44 PM, 8 Jan

ಬೆಂಗಳೂರಿನಲ್ಲಿ ಕೆಲವೆಡೆ ಸಂಚರಿಸುತ್ತಿರುವ ಕೆ ಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಗಳು.
11:54 AM, 8 Jan

ಹಲವೆಡೆ ಚಲನಚಿತ್ರ ಪ್ರದರ್ಶನ ರದ್ದು
11:52 AM, 8 Jan

ವಿಜಯಪುರದಿಂದ ಬೆಂಗಳೂರಿಗೆ ಮಗುವಿನ ಕಣ್ಣಿನ ಚಿಕಿತ್ಸೆಗೆಂದು ಬಂದಿದ್ದ ದಂಪತಿ, ನಾರಾಯಣ ನೇತ್ರಾಲಯಕ್ಕೆ ತೆರಳಲು ವಾಹನವಿಲ್ಲದೆ ಪರದಾಡಿದ ಘಟನೆ ವರದಿಯಾಗಿದೆ.
11:51 AM, 8 Jan

ಬಳ್ಳಾರಿಯ ರಾಯಲ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಶಾಂತಿಯುತ ಪ್ರತಿಭಟನೆ
11:01 AM, 8 Jan

ಬೃಹನ್ಮುಂಬೈ ಇಲೆಕ್ಟ್ರಿಸಿಟಿ ಸಪ್ಲೈ ಮತ್ತು ಟ್ರಾನ್ಸ್ ಪೋರ್ಟ್ ಬಸ್ ಗಳು ಮುಷ್ಕರಕ್ಕೆ ಬೆಂಬಲ ನೀಡಿರುವುದರಿಂದ ಮುಂಬೈಯಲ್ಲಿ ಸಾರಿಗೆ ಸಂಚಾರ ಸ್ತಬ್ಧವಾಗಿದೆ.
Advertisement
10:42 AM, 8 Jan

ರಾಜ್ಯದಲ್ಲಿ ಕೆಲೆವೆಡೆ ಒತ್ತಾಯ ಪೂರ್ವಕವಾಗಿ ಬಂದ್ ಆಚರಿಸಲು ಒತ್ತಾಯಿಸುತ್ತಿರುವ ಪ್ರತಿಭಟನಕಾರರು.
10:34 AM, 8 Jan

ಮಾಲ್ ಗಳೆಲ್ಲ ಖಾಲಿ ಖಾಲಿ. ಬಂದ್ ಭಯಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಮನೆಯಿಂದ ಹೊರ ಸುಳಿಯದ ಜನ
10:14 AM, 8 Jan

ಯಾದಗಿರಿಯಲ್ಲಿ ಬಸ್ ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ
9:50 AM, 8 Jan

ಬಂದ್ ಹಿನ್ನೆಲೆಯಲ್ಲಿಪ್ರಯಾಣಿಕರಿಂದ ಹೆಚ್ಚು ಹಣ ವಸೂಲು ಮಾಡುತ್ತಿರುವ ಆಟೋ, ಕ್ಯಾಬ್ ಚಾಲಕರು
9:45 AM, 8 Jan

ಪರಿಸ್ಥಿತಿ ನೋಡಿಕೊಂಡು ಸಾರಿಗೆ ಸಂಚಾರವನ್ನು ಆರಂಭಿಸಲು ಪ್ರಯತ್ನಿಸುತ್ತೇವೆ: ಡಿಸಿ ತಮ್ಮಣ್ಣ, ಸಾರಿಗೆ ಸಚಿವ
Advertisement
9:30 AM, 8 Jan

ಮುಂಜಾಗ್ರತಾ ಕ್ರಮವಾಗಿ ಹುಬ್ಬಳ್ಳಿ, ದಾವಣಗೆರೆಯಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಿದ ಕೆಎಸ್ ಆರ್ ಟಿಸಿ
9:15 AM, 8 Jan

ಬಣಗುಡುತ್ತಿರುವ ಬಸ್ ನಿಲ್ದಾಣಗಳಲ್ಲಿ ಕ್ರಿಕೆಟ್ ಆಡುತ್ತಿರುವ ಯುವಕರು!
9:04 AM, 8 Jan

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಬಸ್ ಗಳಿಲ್ಲದೆ ಪರದಾಟ
8:57 AM, 8 Jan

ಹುಬ್ಬಳ್ಳಿಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತ ಬಂದ್ ಬೆಂಬಲಿಸುತ್ತಿರುವ ಕಾರ್ಮಿಕ ಸಂಘಟನೆಗಳು
8:29 AM, 8 Jan

ಎಂದಿನಂತೆ ತೆರೆದಿರುವ ಇಂದಿರಾ ಕ್ಯಾಂಟೀನ್
8:26 AM, 8 Jan

ಬಲವಂತವಾಗಿ ಬಂದ್ ಮಾಡಿಸಿದರೆ ಕ್ರಮ ತೆಗೆದುಕೊಳ್ಳುವುದಾಗಿ ಡಿಜಿಪಿ & ಐಜಿ ನೀಲಮಣಿ ರಾಜು ಎಚ್ಚರಿಕೆ
8:22 AM, 8 Jan

ಕೆಎಸ್ ಆರ್ ಟಿಸಿ ಡಿಪೋ ಬಳಿ ಸಿಪಿಐಎಂ ಕಾರ್ಯಕರ್ತರ ಪ್ರತಿಭಟನೆ
8:21 AM, 8 Jan

ಧಾರವಾಡದಲ್ಲಿ ಬಸ್ ಘಟಕ 1ರಲ್ಲಿ ಧರಣಿ
8:20 AM, 8 Jan

ಮಲ್ಲೇಶ್ವರದಲ್ಲಿ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ
7:57 AM, 8 Jan

ಬೆಂಗಳೂರಿನಾದ್ಯಂತ ಬಿಗಿ ಭದ್ರತೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರ ಕಟ್ಟೆಚ್ಚರ
7:29 AM, 8 Jan

ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಕಾರ್ಮಿಕರ ಪ್ರತಿಭಟನೆ
7:28 AM, 8 Jan

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷೆಗಳು ಮುಂದೂಡಿಕೆ
7:27 AM, 8 Jan

ಅರಿಶಿನಕುಂಟೆಯಲ್ಲಿ ಬಿ ಎಂಟಿಸಿ ಬಸ್ ಮೇಲೆ ಕಲ್ಲುತೂರಾಟ
7:27 AM, 8 Jan

ರಾಜ್ಯದ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ತಬ್ಧ. ಮನೆಯಿಂದ ಆಚೆ ಹೋಗುವವರು ಸ್ವಂತ ವಾಹನ ಬಳಸುವುದು ಉತ್ತಮ
7:26 AM, 8 Jan

ಪ್ರತಿಭಟನಕಾರರು ಹೊಸ ಪಿಂಚಣಿ ವ್ಯವಸ್ಥೆಯನ್ನು ವಿರೋಧಿಸಿ ಮತ್ತು ಹಳೆ ಪಿಂಚಣಿ ವ್ಯವಸ್ಥೆಯನ್ನೇ ಮತ್ತೆ ಜಾರಿಗೆ ತರುವಂತೆ ಒತ್ತಾಯಿಸಿದ್ದಾರೆ. ಸಾರ್ವತ್ರಿಕ ಸಾಮಾಜಿಕ ಭದ್ರತೆ, ಕಾರ್ಮಿಕರ ವೇತನ ಹೆಚ್ಚಳ, ಸಾರ್ವಜನಿಕ ಮತ್ತು ಸರ್ಕಾರಿ ವಿಭಾಗಗಳನ್ನು ಖಾಸಗೀಕರಣಗೊಳಿಸುವುದನ್ನು ವಿರೋಧಿಸಿಯೂ ಬಂದ್ ನಡೆಯುತ್ತಿದೆ.
7:22 AM, 8 Jan

ಬಾಗಲಕೋಟೆ ಜಿಲ್ಲೆಯಾದ್ಯಂತ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
7:21 AM, 8 Jan

ಎಐಟಿಯುಸಿ, ಸಿಐಟಿಯು, ಐಎನ್ ಟಿಯುಸಿ, ಎಲ್‌ಪಿಎಫ್ ಸೇರಿದಂತೆ ಇತರೆ ಕಾರ್ಮಿಕ ಸಂಘಟನೆಗಳು ಎರಡು ದಿನಗಳ ರಾಷ್ಟ್ರವ್ಯಾಪ್ತಿ ಸಾರ್ವತ್ರಿಕ ಮುಷ್ಕರವನ್ನು ಹಮ್ಮಿಕೊಂಡಿವೆ.
7:20 AM, 8 Jan

ಆಂಬುಲೆನ್ಸ್ ಗೆ ದಾರಿ ಬಿಡದಿರುವುದಕ್ಕೆ ರೂ.10 ಸಾವಿರ ದಂಡ ಮತ್ತು 6 ತಿಂಗಳ ಜೈಲು ವಿಧಿಸಲಾಗುತ್ತದೆ. ವಿಮೆ ಇಲ್ಲದೆ ಚಾಲನೆಗೆ ರೂ.2 ಸಾವಿರ ದಂಡ ಮತ್ತು ಆರು ತಿಂಗಳ ಜೈಲು ವಿಧಿಸಲಾಗುತ್ತದೆ ಇದಕ್ಕೆ ಮುಷ್ಕರನಿರತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
READ MORE

English summary
Trade unions call 2 days bharat bandh on Jan 8 and 9. Here are the LIVE updates in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X