ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಭಗತ್ ಕನಸಿನ ಭಾರತ ಬಿಚ್ಚಿಟ್ಟ ಮೊಮ್ಮಗ

|
Google Oneindia Kannada News

ಬೆಂಗಳೂರು, ಅಕ್ಟೋಬರ್. 27: ಯುವಜನತೆಗೆ ಸೂಕ್ತ ಮಾರ್ಗದರ್ಶನ ನೀಡಲು ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಸಿದ್ಧಾಂತಗಳಿಂದ ಮಾತ್ರ ಸಾಧ್ಯ ಎಂದು ಭಗತ್ ಸಿಂಗ್ ಅಣ್ಣನ ಮೊಮ್ಮಗ ಅಭಿತೇಜ್ ಸಿಂಗ್ ಹೇಳಿದರು.

ಪತ್ರಕರ್ತರ ಅಧ್ಯಯನ ಕೇಂದ್ರದ ಬೆಂಗಳೂರು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿ ಅನೇಕ ಹೊಸ ಹೊಸ ವಿಚಾರಗಳನ್ನು ತೆರೆದಿಟ್ಟರು. ಭಗತ್ ಸಿಂಗ್ ಕನಸಿನ ಭಾರತ ಹೇಗಿರಬೇಕು ಎಂಬುದರ ಬಗ್ಗೆಯೂ ತಮ್ಮ ವಿಚಾರಗಳನ್ನು ಹೇಳಿದರು.[ಭಗತ್ ಸಿಂಗ್ ಜನ್ಮ ಸ್ಥಳ ಕಾಪಾಡುತ್ತೇವೆ]

ಸಾಹಿತಿ ಎಂ ಎಂ ಕಲಬುರ್ಗಿ ಅವರ ಹತ್ಯೆಯ ಬಗ್ಗೆ ಖೇದ ವ್ಯಕ್ತಪಡಿಸಿದ ಸಿಂಗ್ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದಂಥ ಪ್ರಕರಣ ಹೆಚಚ್ಚಿರುವುದು ದುರ್ದೈವ ಎಂದು ಆತಂಕ ವ್ಯಕ್ತಪಡಿಸಿದರು. ನಾವು ಇಂದು ಡಿಜಿಟಲ್ ಇಂಡಿಯಾ ಬಗ್ಗೆ ಮಾತನಾಡುತ್ತೇವೆ. ಆದರೆ ದೇಶದ ಸಮಗ್ರ ನಾಗರಿಕರಿಗೆ ಹೊಟ್ಟೆ ಮತ್ತು ಬಟ್ಟೆ ಮೂಲ ಸೌಕರ್ಯ ದೊರೆತಿದೆಯೇ ಎಂದು ಚಿಂತನೆ ಮಾಡುತ್ತಿಲ್ಲ. ದೇಶದ ಎಲ್ಲ ಜನರಿಗೆ ಮೂಲ ಸೌಕರ್ಯ ಒದಗಿಸಿಕೊಟ್ಟರೆ ಅಭಿವೃದ್ಧಿ ತನ್ನಿಂದ ತಾನೇ ಸಾಧ್ಯ ಎಂದು ಹೇಳಿದರು.

ಡೆಮೊಕ್ರೆಟಿಕ್ ಯುತ್ ಫೆಡರೇಷನ್ ಆಫ್ ಇಂಡಿಯಾದ ರಾಜಶೇಖರ ಮೂರ್ತಿ, ಸ್ವಾತಂತ್ರ್ಯ ಹೋರಾಟಗಾರರಾದ ಎನ್. ಆರ್. ಮಾತಾಡ್ ಅಭಿತೇಜ್ ಸಿಂಗ್ ಹಾಜರಿದ್ದರು . ಅಭಿತೇಜ್ ಸಿಂಗ್ ಅವರ ಸಂವಾದದ ಹೈ ಲೈಟ್ಸ್ ಇಲ್ಲಿದೆ...

ಎಲ್ಲ ರಾಜ್ಯಗಳಲ್ಲಿ ಪ್ರವಾಸ

ಎಲ್ಲ ರಾಜ್ಯಗಳಲ್ಲಿ ಪ್ರವಾಸ

ಭಗತ್ ಸಿಂಗ್ ಅವರ ವಿಚಾರಗಳು ಪ್ರಚಾರಕ್ಕೆ ಬಂದಿಲ್ಲ. ಅವರು ತಮ್ಮ 24 ನಾಏ ವರ್ಷದಲ್ಲೇ ದೇಶಕ್ಕೆ ಪ್ರಾಣ ತ್ಯಾಗ ಮಾಡಿದರು. ಅಷ್ಟು ಕಡಿಮೆ ವಯಸ್ಸಿನಲ್ಲಿಯೇ ದೇಶದ ಬೆಳವಣಿಗೆ ಬಗ್ಗೆಕನಸು ಕಂಡಿದ್ದರು, ತಮ್ಮದೇ ಆದ ಧ್ಯೇಯಗಳನ್ನು ಹೊಂದಿದ್ದರು. ಅದನ್ನು ಪ್ರಚಾರ ಮಾಡಲು ಎಲ್ಲ ರಾಜ್ಯಗಳಲ್ಲಿ ಪ್ರವಾಶ ಮಾಡುತ್ತಿದ್ದೇನೆ ಎಂದು ಹೇಳಿದರು.

 ಯಾವ ರಾಜಕೀಯ ಪಕ್ಷಕ್ಕೂ ಸೇರಿಲ್ಲ

ಯಾವ ರಾಜಕೀಯ ಪಕ್ಷಕ್ಕೂ ಸೇರಿಲ್ಲ

ನಮ್ಮ ವಿಚಾರಗಳು ಯಾವ ರಾಜಕೀಯ ಪಕ್ಷಗಳಿಗೂ ಸಂಬಂಧಿಸಿಲ್ಲ. ಅವರ ವಿಚಾರಧಾರೆಗಳು ಬೇರ ಎ ನಮ್ಮ ವಿಚಾರಧಾರೆಗಳು ಬೇರೆ. ದೇಶದ ಅಭಿವೃದ್ಧಿ, ಜನರ ಹಿತಾಸಕ್ತಿ ಇರುವ ಎಲ್ಲ ವಿಚಾರಗಳನ್ನು ಒಪ್ಪಿಕೊಳ್ಳುತ್ತೇವೆ, ಅದು ಬಿಜೆಪಿಯದ್ದಾಗಿರಬಹುದು ಇಲ್ಲವೇ ಕಮ್ಯೂನಿಷ್ಟ್‌ ಅವರದ್ದು ಆಗಿರಬಹುದು ಎಂದು ಹೇಳಿದರು.

ಸಾಹಿತಿಗಳ ಮೇಲೆ ಹಲ್ಲೆ ಸಲ್ಲ

ಸಾಹಿತಿಗಳ ಮೇಲೆ ಹಲ್ಲೆ ಸಲ್ಲ

ವಿಮರ್ಶಕರ ಮೇಲೆ, ಸಂಶೋಧಕರ ಮೇಲೆ ನಡೆದ ಹಲ್ಲೆ ಪ್ರಕರಣಗಳು, ದಾದ್ರಿ ಪ್ರಕರಣದ ಸತ್ಯಾಸತ್ಯೆ ಕಂಡುಹಿಡಿಯಲು ಆಯಾ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದೊಂದಿಗೆ ಒಂದು ಗೂಡಿ ಶ್ರಮಿಸಬೇಕು. ಇಲ್ಲಿ ರಾಜಕಾರಣ ಬೆರೆಸಬಾರದು ಎಂದು ಹೇಳಿದರು

ಹೊಸ ನಾಯಕರು ಹುಟ್ಟಿಕೊಳ್ಳಬೇಕಿದೆ

ಹೊಸ ನಾಯಕರು ಹುಟ್ಟಿಕೊಳ್ಳಬೇಕಿದೆ

ದೇಶದಲ್ಲಿ ಯುವ ನಾಯಕತ್ವದ ಕೊರತೆ ಇದೆ. ಯುವಕರು ರಾಜಕಾರನದಿಂದ ಹಿಂದೆ ಸರಿಯುತ್ತಿದ್ದಾರೆ. ವ್ಯವಸ್ಥೆ ಸಹ ಅವರಿಗೆ ಅಸಹ್ಯ ಬರುವಂತೆ ಮಾಡಿದೆ. ಇದೆಲ್ಲವನ್ನು ಮೀರಿಸಿ ದೇಶ ಮುಂದಕ್ಕೆ ಸಾಗಬೇಕು ಎಂದಾದರೆ ಯುವಕರು ರಾಜಾಕಾರಣದಲ್ಲಿ ಭಾಗವಹಿಸಲೇಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಡತ ಬಹಿರಂಗ ಸ್ವಾಗತಾರ್ಹ

ಕಡತ ಬಹಿರಂಗ ಸ್ವಾಗತಾರ್ಹ

ಸುಭಾಷ್ ಚಂದ್ರಬೋಸ್ ಸಾವಿನ ಕುರಿತಾದ ಕಡತಗಳನ್ನು ಬಹಿರಂಗ ಮಾಡಿರುವ ಪಶ್ಚಿಮ ಬಂಗಾಳ ಸರ್ಕಾರದ ಕ್ರಮವನ್ನು ಸ್ವಾಗತ ಮಾಡುತ್ತೇನೆ. ಇದರಲ್ಲಿ ಮುಚ್ಚಿ ಇಡುವಂಥದ್ದು ಏನಿದೆ? ಕೇಂದ್ರ ಸರ್ಕಾರವೂ ಕಡತ ಬಹಿರಂಗ ಮಾಡಿದರೆ ಉತ್ತಮ ಎಂದು ಹೇಳಿದರು.

English summary
Bengaluru: It is sad that the same system that was being used by the British 66 years ago is still being followed to suppress the voice of citizens," grand-nephew of Bhagat Singh, Abhitej Singh Sandhu said, while Interacting with Press people at Bengaluru on 27 October . 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X