ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಾಂತಿಕಿಡಿ ಭಗತ್ ಸಿಂಗ್ ಹುಟ್ಟು ಹಬ್ಬ ನೆನಪಿಸಿಕೊಂಡ ಟ್ವಿಟ್ಟಿಗರು

|
Google Oneindia Kannada News

ನವದೆಹಲಿ ಸೆಪ್ಟೆಂಬರ್ 28: ಕ್ರಾಂತಿಕಾರಿ ಹೋರಾಟಗಾರ ಎಂದರೆ ಥಟ್ಟಂಥ ನೆನಪಾಗುವ ಹೆಸರು ಭಗತ್ ಸಿಂಗ್! 1907 ಸೆಪ್ಟೆಂಬರ್ 28 ರಂದು ಜನಿಸಿದ ಭಗತ್ ಸಿಂಗ್ ಬದುಕಿದ್ದು ಕೇವಲ 24 ವರ್ಷವಾದರೂ ಶತಮಾನದ ನಂತರೂ ಅವರು ಭಾರತೀಯ ಯುವಜನಾಂಗದ ಸ್ಫೂರ್ತಿ ಚಿಲುಮೆಯಾಗಿ ನೆನಪಿನಲ್ಲುಳಿದಿದ್ದಾರೆ. ಉಳಿಯುತ್ತಾರೆ ಕೂಡ.

ಚಿತ್ರಗಳಲ್ಲಿ: ವೀರ ಸೇನಾನಿ ಭಗತ್ ಸಿಂಗ್ ಗೆ ನಮನ ಚಿತ್ರಗಳಲ್ಲಿ: ವೀರ ಸೇನಾನಿ ಭಗತ್ ಸಿಂಗ್ ಗೆ ನಮನ

ಇಂದು ಅವರ 110 ನೇ ಜನ್ಮದಿನ. ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಭಾಷ್ಯ ಬರೆದ ಭಗತ್ ಸಿಂಗ್ ಅವರನ್ನು ದೇಶದ ಹಲವು ಗಣ್ಯರು ನೆನಪಿಸಿಕೊಂಡಿದ್ದಾರೆ. ಭಗತ್ ಸಿಂಗ್ ಆದರ್ಶವನ್ನು ಪ್ರತಿ ಭಾರತೀಯರೂ ಪಾಲಿಸುವಂತಾಗಲಿ ಎಂದು ಹಾರೈಸಿದ್ದಾರೆ.

ಚಿತ್ರಗಳಲ್ಲಿ: ಭಗತ್ ಸಿಂಗ್ ನೆನಪಿನ ದಿನಚಿತ್ರಗಳಲ್ಲಿ: ಭಗತ್ ಸಿಂಗ್ ನೆನಪಿನ ದಿನ

ಪ್ರಧಾನಿ ನರೇಂದ್ರ ಮೋದಿಯವರು ಸಹ ಭಗತ್ ಸಿಂಗ್ ಅವರ ಶೌರ್ಯ ಭಾರತೀಯ ಯುವಪೀಳಿಗೆಗೆ ಸ್ಫೂರ್ತಿ ಎಂದು ಟ್ವೀಟ್ ಮಾಡಿದ್ದಾರೆ.

ಭಗತ್ ಸಿಂಗ್ ಶೌರ್ಯ ಸ್ಫೂರ್ತಿಯಾಗಲಿ.

"ನಾನು, ವೀರ ಹುತಾತ್ಮ ಭಗತ್ ಸಿಂಗ್ ಅವರ ಜಯಂತಿಯಂದು ಅವರಿಗೆ ತಲೆ ಬಾಗುತ್ತೇನೆ. ಅವರ ಶ್ರೇಷ್ಠತೆ ಮತ್ತು ಅಪ್ರತಿಮ ಶೌರ್ಯ ಭಾರತೀಯ ಪೀಳಿಗೆಗಳಿಗೆ ಸ್ಫೂರ್ತಿಯಾಗಿದೆ", ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ನಮನಗಳು

ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಮತ್ತು ಹುತಾತ್ಮ ಭಗತ್ ಸಿಂಗ್ ಅವರಿಗೆ, ಜನ್ಮದಿನದಂದು ನಮ್ಮ ನಮನಗಳು ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಅವರ ತ್ಯಾಗ ಮರೆಯುವುದಕ್ಕೆ ಸಾಧ್ಯವಿಲ್ಲ

ಕ್ರಾಂತಿಕಾರಿ ಭಗತ್ ಸಿಂಗ್ ಅವರಿಗೆ ನಮ್ಮ ನಮನಗಳು. ಅವರ ಮಹಾನ್ ತ್ಯಾಗವನ್ನು ಜಗತ್ತು ಎಂದಿಗೂ ಮರೆಯುವುದಿಲ್ಲ ಎಂದು ಕೇಂದ್ರ ಸಚಿವ ಸುರೇಶ್ ಪ್ರಭು ಅವರು ಟ್ವೀಟ್ ಮಾಡಿದ್ದಾರೆ.

ಅನುಪಮ್ ಖೇರ್

ಭಗತ್ ಸಿಂಗ್ ಅವರಿಗೆ ಅವರ ಜನ್ಮ ದಿನದಂದು ನನ್ನ ಸೆಲ್ಯೂಟ್! ಜಗತ್ತಿನ ತುಂಬೆಲ್ಲ ಇರುವ ಭಾರತೀಯರಿಗೆ ಅವರ ಋಣತೀರಿಸುವುದಕ್ಕೆ ಇಂದಿಗೂ ಸಾಧ್ಯವಾಗಿಲ್ಲ.

ಜನ್ಮಭೂಮಿಗಾಗಿ ತ್ಯಾಗ ಮಾಡಿದ ಭಗತ್ ಸಿಂಗ್

ತಮ್ಮ ಜನ್ಮಭೂಮಿಗಾಗಿ ಮಹಾನ್ ತ್ಯಾಗ ಮಾಡಿದ ಭಗತ್ ಸಿಂಗ್ ಅವರಿಗೆ ಅವರ ಜನ್ಮದಿನದಂದು ನಮನಗಳು ಎಂದು ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಟ್ವೀಟ್ ಮಾಡಿದ್ದಾರೆ.

English summary
I bow to the brave Shaheed Bhagat Singh on his Jayanti. His greatness and exemplary courage inspires generations of Indians prime minister Narendra Modi has tweeted. Many Indian leaders remember Bhagat Singh On his birthday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X