• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Fact Check: ಪಿಎಂ ಕೇರ್ಸ್ ದೇಣಿಗೆ ನೀಡುವ ಮುನ್ನ ಫೇಕ್ ಐಡಿ ಬಗ್ಗೆ ಗಮನಿಸಿ

|

ನವದೆಹಲಿ, ಮಾರ್ಚ್ 30: ಕೊರೊನಾವೈರಸ್ ವಿರುದ್ಧ ನಿರ್ಣಾಯಕ ಹೋರಾಟ ಮುಂದುವರೆಸಿರುವ ಕೇಂದ್ರ ಸರ್ಕಾರವು ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಹಾಗೂ ನೆರವು ನೀಡುತ್ತಾ ಬಂದಿದೆ. ಈ ನಡುವೆ ಸರ್ಕಾರಿ ವೆಬ್ ತಾಣ ಹಾಗೂ ಸಾಮಾಜಿಕ ಜಾಲ ತಾಣಗಳನ್ನು ಹೋಲುವ ನಕಲಿ ತಾಣಗಳ ಹಾವಳಿ ಹೆಚ್ಚಾಗಿದೆ. ಈಗ ಕೊವಿಡ್19 ವಿರುದ್ಧ ಹೋರಾಟಕ್ಕೆ ದೇಣಿಗೆ ಬೇಡಿರುವ ಪಿಎಂ ಕೇರ್ಸ್ ಫಂಡ್ ಗೂ ಈ ಕಾಟ ಶುರುವಾಗಿದೆ.

   ದೇಶದ ಜನರಲ್ಲಿ ಕ್ಷಮೆಯಾಚಿಸಿದ ಪ್ರಧಾನಿ ಮೋದಿ | Modi | Oneindia Kannada

   ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಕೊರೊನಾ ವಿರುದ್ಧ ಹೋರಾಡಲು ಪಿಎಂಕೇರ್ ಫಂಡ್ ಗೆ ದೇಣಿಗೆ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆದರೆ, ಕೆಲವು ದುಷ್ಕರ್ಮಿಗಳು ನಕಲಿ ಯುಪಿಐ ಐಡಿ ಸೃಷ್ಟಿಸಿ, ಸಾರ್ವಜನಿಕರು ಕಳಿಸುವ ಹಣವನ್ನು ಲಪಟಾಯಿಸುವ ಕ್ರಿಯೆಯಲ್ಲಿ ತೊಡಗಿರುವುದು ಕಂಡು ಬಂದಿದೆ.

   ಈ ಕೊರೊನಾ ವೆಬ್ ತಾಣಗಳು ಫೇಕ್ ಎಂದ ಸೈಬರ್ ಕ್ರೈಂ ಸೆಲ್ ಈ ಕೊರೊನಾ ವೆಬ್ ತಾಣಗಳು ಫೇಕ್ ಎಂದ ಸೈಬರ್ ಕ್ರೈಂ ಸೆಲ್

   ಯಾವುದು ನಕಲಿ ಐಡಿ: ಪಿಎಂ ಕೇರ್ಸ್ ಫಂಡ್ ಯುಪಿಐ ಐಡಿ ಎಂದು pmcare@upi ಎಂಬ ಹೆಸರಿನಲ್ಲಿ ಹಣ ಕಳಿಸುವಂತೆ ಮನವಿ ಬಂದರೆ ಅಥವಾ ಯಾವುದೇ ಡಿಜಿಟಲ್ ಪೇಮೆಂಟ್ ನಲ್ಲಿ ಈ ಐಡಿಗೆ ಹಣ ಕಳಿಸಬೇಡಿ ಇದು ನಕಲಿ ಎಂದು ಕೇಂದ್ರ ಸರ್ಕಾರ ಸ್ಪಷ್ಟಣೆ ನೀಡಿದೆ.

   ಯಾವುದು ಸರಿಯಾದ ಐಡಿ: PM Cares Fundನ ಯುಪಿಐ ಐಡಿ pmcares@sbi. ಈ ಐಡಿಗೆ ಪೇಮೆಂಟ್ ಮಾಡಬಹುದು. ನಕಲಿ ಐಡಿಯನ್ನು ಭುವನೇಶ್ವರ್ ಕುಮಾರ್ ಎಂಬಾತ ಬಳಸುತ್ತಿರುವುದು ಕಂಡು ಬಂದಿದ್ದು, ಪೊಲೀಸರು ಆತನ ಹುಡುಕಾಟದಲ್ಲಿ ತೊಡಗಿದ್ದಾರೆ. ಹೀಗಾಗಿ, ಡಿಜಿಟಲ್ ಪೇಮೆಂಟ್ ನಲ್ಲಿ ಅಧಿಕೃತ ಖಾತೆಯನ್ನು ಖಾತ್ರಿ ಪಡಿಸಿಕೊಂಡು ದೇಣಿಗೆ ನೀಡಿ, ಯಾವುದೋ ವಾಟ್ಸಾಪ್ ಸಂದೇಶಕ್ಕೆ ಮರುಳಾಗಿ ಹಣ ಕಳೆದುಕೊಳ್ಳಬೇಡಿ.

   English summary
   In the backdrop of Prime Minister Narendra Modi calling on the people to donate towards fighting the spread of the coronavirus, seamsters have already started circulating a fake UPI ID.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X