ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡೋ ಮುನ್ನ ನಕಲಿ ಖಾತೆ ಬಗ್ಗೆ ಎಚ್ಚರವಿರಲಿ!

|
Google Oneindia Kannada News

ಮುಂಬೈ, ಜುಲೈ 12: ಇದು ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವ ಸಮಯ. ಈ ಸಮಯದಲ್ಲಿ ಐಟಿ ಇಲಾಖೆಯ ರೀತಿಯಲ್ಲೇ ಹಲವು ನಕಲಿ ಖಾತೆಗಳಿಂದ ನಿಮಗೆ ಇ ಮೇಲ್ ಬರಬಹುದು.

ಇದು ಥೇಟ್ ಸರ್ಕಾರದ ಐಟಿ ಇಲಾಖೆಯಿಂದ ಬರುವ ಮೇಲ್ ನಂತೆಯೇ ಇರುತ್ತದೆ. ಅಕಸ್ಮಾತ್ ಈ ಇಮೇಲ್ ಅನ್ನು ಸರಿಯಾಗಿ ಪರಿಶೀಲಿಸದೆ, ಅಗತ್ಯ ವಿವರಗಳನ್ನು ಸಲ್ಲಿಸಿದ್ದೇ ಆದರೆ ಸಂಕಷ್ಟ ಕಟ್ಟಿಟ್ಟಬುತ್ತಿ!

ಫಾರ್ಮ್ 16 ಇಲ್ಲದೆ ಆದಾಯ ತೆರಿಗೆ ಇ ರಿಟರ್ನ್ಸ್ ಹೇಗೆ?ಫಾರ್ಮ್ 16 ಇಲ್ಲದೆ ಆದಾಯ ತೆರಿಗೆ ಇ ರಿಟರ್ನ್ಸ್ ಹೇಗೆ?

[email protected] ಎಂಬ ಐಡಿಯಿಂದ ನಿಮಗೆ ಇಮೇಲ್ ಬಂದಿದ್ದರೆ ಅದರ ಸ್ಪೆಲಿಂಗ್ ಗಳನ್ನು ಸರಿಯಾಗಿ ಗಮನಿಸಿ. ಆದಾಯ ಇಲಾಖೆಯ ಐಡಿಯಿಂದ ಬಂದಿದ್ದಾದರೆ, [email protected] ಎಂಬ ಐಡಿಯಿಂದ ಮೇಲ್ ಬರುತ್ತದೆ. ಈ ಎರಡೂ ಮೇಲ್ ಗಳೂ ಒಂದೇ ರೀತಿ ಅನ್ನಿಸುತ್ತವಾದರೂ, ಸರಿಯಾಗಿ ಪರಿಶೀಲಿಸಿದರೆ ವ್ಯತ್ಯಾಸ ತಿಳಿಯುತ್ತದೆ.

Beware of fake mails while filing IT returns

ನಕಲಿ ಐಡಿ([email protected])ಯಲ್ಲಿ efiling ಬದಲು ಕೇವಲ filling ಎಂದಿದೆ. ಅಷ್ಟೇ ಅಲ್ಲ, filing ಬದಲು filling ಎಂದಿದೆ. ಇವನ್ನು ಪರಿಶೀಲಿಸಿದ ನಂತರವೇ ಮುಂದುವರಿಯಿರಿ.

ಈ ಕುರಿತು ಈಗಾಗಲೇ ಐಟಿ ಇಲಾಖೆ ಎಲ್ಲಾ ತೆರಿಗೆದಾರರಿಗೂ ತನ್ನ ವೆಬ್ ಸೈಟ್ ಮೂಲಕ, ಸಾಮಾಜಿಕ ಮಾಧ್ಯಮಗಳ ಮೂಲಕ, ಮೆಸೇಜ್ ಗಳ ಮೂಲಕ ಮಾಹಿತಿ ನೀಡಿದ್ದು, ಎಚ್ಚರಿಕೆ ವಹಿಸುವಂತೆ ಕೇಳಿಕೊಂಡಿದೆ.

ಚಾರ್ಟರ್ಡ್ ಅಕೌಂಟಂಟ್ ಗಳು ಈಗಾಗಲೇ ತಮ್ಮ ಗ್ರಾಹಕರಿಗೆ ವಾಟ್ಸಾಪ್ ಮೂಲಕ ಈ ಕುರಿತು ಮಾಹಿತಿ, ಮುನ್ನೆಚ್ಚರಿಕೆ ನೀಡಿದ್ದಾರೆ. "ಒಂದು ಪ್ರಮುಖ ಪ್ರಕಟಣೆ: ಈಗಾಗಲೇ ರಿಟರ್ನ್ಸ್ ಫೈಲ್ ಮಾಡಿರುವವರಿಗೆ ರೀಫಂಡ್ ಲೆಕ್ಕಾಚಾರದಲ್ಲಿ ಸ್ವಲ್ಪ ದೋಷವಾಗಿದೆ ಎಂಬ ಇಮೇಲ್ ಬಂದರೆ ಅದು ನಕಲಿ ಇ ಮೇಲ್. ಹ್ಯಾಕರ್ ಗಳು ಕಳಿಸಿದ್ದು. ಅಕಸ್ಮಾತ್ ಈ ಇಮೇಲ್ ನಲ್ಲಿರುವ ಲಿಂಕ್ ಅನ್ನೇನಾದರೂ ಕ್ಲಿಕ್ ಮಾಡಿದರೆ ನೆಟ್ ಬ್ಯಾಂಕಿಂಗ್ ಪೇಜ್ ಓಪನ್ ಆಗುತ್ತೆ. ಇಲ್ಲಿ ನಿಮ್ಮ ನೆಟ್ ಬ್ಯಾಂಕಿಂಗ್ ಡಿಟೇಲ್ಸ್ ನೀಡಿದರೆ, ನಿಮ್ಮ ಬ್ಯಾಂಕ್ ಖಾತೆಯನ್ನೇ ಹ್ಯಾಕ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಆದ್ದರಿಂದ ಇಂಥ ಈ ಮೇಲ್ ಬಗ್ಗೆ ಹುಷಾರಾಗಿರಿ. ಐಟಿ ಇಲಾಖೆಯಿಂದ ಇಂಥ ಯಾವುದೇ ಇಮೇಲ್ ಬಂದಿಲ್ಲ" ಎಂದು ಈ ಪ್ರಕಟಣೆಯಲ್ಲಿ ಹೇಳಲಾಗಿದೆ.

ಆದ್ದರಿಂದ ಐಟಿ ರಿಟರ್ನ್ಸ್ ಫೈಲ್ ಮಾಡುವವರು ಹುಷಾರಾಗಿರಿ.

English summary
Taxpayers are receiving emails from addresses remarkably similar to the original government IT department email addres. Taxpayers please beware of those mails.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X