ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡಿಯಾ ಟುಡೇ ಸಮೀಕ್ಷೆ : ಬೆಸ್ಟ್ ಸಿಎಂ ಯಾರು?

|
Google Oneindia Kannada News

ಇಂಡಿಯಾ ಟುಡೇ ಗ್ರೂಪ್ ದೇಶದ ಅತ್ಯುತ್ತಮ ಮುಖ್ಯಮಂತ್ರಿ ಯಾರು ಎನ್ನುವ ಮೂಡ್ ಆಫ್ ದಿ ನೇಶನ್ ಸಮೀಕ್ಷೆಯನ್ನು ನಡೆಸಿದೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮತ್ತು ವಿವಿಧ ರಾಜ್ಯಗಳ ಅಸೆಂಬ್ಲಿ ಚುನಾವಣೆಯ ಬಳಿಕ ಇಂಡಿಯಾ ಟುಡೇ ನಡೆಸಿದ ಸಮೀಕ್ಷೆ ಇದಾಗಿದೆ.

ಸುಮಾರು ಹನ್ನೆರಡು ಸಾವಿರಕ್ಕೂ ಹೆಚ್ಚು ಜನರ ಅಭಿಪ್ರಾಯವನ್ನು ಕ್ರೋಢೀಕರಿಸಿ ಈ ಸಮೀಕ್ಷೆಯನ್ನು ನಡೆಸಲಾಗಿದೆ.

ಸಮೀಕ್ಷೆಯನ್ವಯ ದೇಶದ ಅತ್ಯುತ್ತಮ ನಾಲ್ಕು ಮುಖ್ಯಮಂತ್ರಿಗಳ ಪೈಕಿ ಕಾಂಗ್ರೆಸ್ ಮತ್ತು ಬಿಜೆಪಿಯ ಯಾವುದೇ ಸಿಎಂ ಇಲ್ಲದಿರುವುದು ಸಮೀಕ್ಷೆಯ ಹೈಲೈಟ್.

ಸಮೀಕ್ಷೆಯ ಪ್ರಕಾರ ದೇಶದ ಬೆಸ್ಟ್ ನಾಲ್ಕು ಮುಖ್ಯಮಂತ್ರಿಗಳು ಯಾರು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಅರವಿಂದ್ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್

ಆಂತರಿಕ ಕಲಹದಿಂದ ಹೈರಾಣವಾಗಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ದೆಹಲಿ ಜನರ ವಿಶ್ವಾಸ ಕಮ್ಮಿಯಾಗಿಲ್ಲ. ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಹನ್ನೆರಡು ಸಾವಿರ ಜನರಲ್ಲಿ ಶೇ. 17% ಜನ ಕೇಜ್ರಿವಾಲ್ ದೇಶದ ಬೆಸ್ಟ್ ಸಿಎಂ ಎಂದಿದ್ದಾರೆ.

ಅಖಿಲೇಶ್ ಯಾದವ್

ಅಖಿಲೇಶ್ ಯಾದವ್

ಉತ್ತರ ಪ್ರದೇಶದ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಬೆಸ್ಟ್ ಸಿಎಂಗಳಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇವರಿಗೆ ಶೇ.8% ಮತಗಳು ಬಂದಿವೆ.

ಚಂದ್ರಬಾಬು ನಾಯ್ಡು

ಚಂದ್ರಬಾಬು ನಾಯ್ಡು

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೂರನೇ ಸ್ಥಾನದಲ್ಲಿದ್ದಾರೆ. ಇವರು ಶೇ. 6 ಮತಗಳನ್ನು ಪಡೆದಿದ್ದಾರೆ.

ನಂತರದ ಸ್ಥಾನದಲ್ಲಿ ಇಬ್ಬರು

ನಂತರದ ಸ್ಥಾನದಲ್ಲಿ ಇಬ್ಬರು

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಒರಿಸ್ಸಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಇಬ್ಬರೂ ಶೇ. 5 ಮತಗಳನ್ನು ಪಡೆದು ನಾಲ್ಕನೇ ಸ್ಥಾನದಲ್ಲಿದ್ದಾರೆ.

ರಾಜ್ಯದಲ್ಲಿ ಸಿದ್ದು ಬೆಸ್ಟ್

ರಾಜ್ಯದಲ್ಲಿ ಸಿದ್ದು ಬೆಸ್ಟ್

ರಾಜ್ಯಗಳನ್ನು ಆಧರಿಸಿದ ಸಮೀಕ್ಷೆಯಲ್ಲಿ ಪ್ರತಿಶತ 69ರಷ್ಟು ಮತಗಳಿಸಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಆ ಪಟ್ಟಿಯಲ್ಲಿ ಮೊದಲಿನಲ್ಲಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಆಧರಿಸಿದ ಸರ್ವೇಯಲ್ಲಿ ಶೇ.38ರಷ್ಟು ಮತ ಪಡೆದಿದ್ದಾರೆ.

English summary
India Today group Mood of the Nation opinion Poll, who is the best Chief Minister of country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X