ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸಿಪಿ ರವಿ ಚನ್ನಣ್ಣನವರ್ ಹೇಳಿದ ಮಹಿಳಾ ಐಪಿಎಸ್ ಅಧಿಕಾರಿಯ ಯಶೋಗಾಥೆ!

|
Google Oneindia Kannada News

ಯುವಕರಿಗೆ ಸ್ಪೂರ್ತಿ ತುಂಬುವ, ಸಮಾಜಕ್ಕೆ ಆದರ್ಶಪ್ರಾಯರಾಗಿರುವ ವ್ಯಕ್ತಿಗಳ ಬಗ್ಗೆ ಸದಾ ತಮ್ಮ ಭಾಷಣದಲ್ಲಿ ಉಲ್ಲೇಖಿಸುವ ಬೆಂಗಳೂರು ಗ್ರಾಮಾಂತರ ಡಿಸಿಪಿ ರವಿ ಚನ್ನಣ್ಣನವರ್, ತಮಿಳುನಾಡಿನ ವಿವಾಹಿತ ಮಹಿಳೆಯ ಸಾಧನೆಯನ್ನು ಕಾರ್ಯಕ್ರಮವೊಂದರಲ್ಲಿ ವಿವರಿಸಿದ್ದಾರೆ.

ಚನ್ನಣ್ಣನವರ್ ಭಾಷಣದ ಈ ವಿಡಿಯೋ ಸದ್ಯ ವೈರಲ್ ಆಗಿದೆ ಮತ್ತು ಅವರ ಭಾಷಣದ ಅಂಶ ಹೀಗಿದೆ. ಹದಿನಾಲ್ಕು ವರ್ಷದ ಹುಡುಗಿ, ಆಕೆಯ ಹೆಸರು ಅಂಬಿಕಾ. ತಮಿಳುನಾಡಿನ ದಿಂಡಿಗಲ್ ಮೂಲದವಳು. ಹದಿನಾಲ್ಕನೇ ವರ್ಷಕ್ಕೇ ಅವಳಿಗೆ ಮದುವೆಯಾಗುತ್ತದೆ. ಹದಿನೆಂಟು ವರ್ಷಕ್ಕೆ ಆಕೆಗೆ ಇಬ್ಬರು ಮಕ್ಕಳಾಗುತ್ತಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರವಿ ಚನ್ನಣ್ಣನವರ್ ಅಬ್ಬರಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರವಿ ಚನ್ನಣ್ಣನವರ್ ಅಬ್ಬರ

ಆಕೆಯ ಗಂಡ ಪೊಲೀಸ್ ಪೇದೆ. ಒಂದು ದಿನ ಪೊಲೀಸ್ ಪೆರೇಡ್ ನಡೆದಿರುತ್ತದೆ. ದಿನಾ ಬರುವ ಸಮಯಕ್ಕೆ ಗಂಡ ಮನೆಗೆ ತಿಂಡಿಗೆ ಬರದೇ ಇದ್ದಾಗ, ಎರಡೂ ಮಕ್ಕಳ ಜೊತೆ, ಆಕೆ ಪೆರೇಡ್ ನಡೆಯುವ ಸ್ಥಳಕ್ಕೆ ಬರುತ್ತಾಳೆ. ದೊಡ್ಡ ಸಾಹೇಬರು ನಿಂತಿರುತ್ತಾರೆ, ನೂರಾರು ಜನ ಪೊಲೀಸರು ಅವರಿಗೆ ಸೆಲ್ಯೂಟ್ ಹೊಡೆದು ಮುಂದಕ್ಕೆ ಹೋಗುತ್ತಿರುತ್ತಾರೆ.

ಜನಸ್ನೇಹಿಯಾದ ತೀರ್ಮಾನ ಕೈಗೊಂಡ ರವಿ ಚನ್ನಣ್ಣನವರ್ಜನಸ್ನೇಹಿಯಾದ ತೀರ್ಮಾನ ಕೈಗೊಂಡ ರವಿ ಚನ್ನಣ್ಣನವರ್

ಗಂಡ ಮನೆಗೆ ಬಂದಾಗ, ಆಕೆ ಕೇಳುತ್ತಾಳೆ, 'ಸೆಲ್ಯೂಟ್ ಸ್ವೀಕರಿಸುತ್ತಿದ್ದವರು ಯಾರು'. ಅದಕ್ಕೆ ಗಂಡ, 'ಅವರು ನಮ್ಮ ರಾಜ್ಯದ ಪೊಲೀಸ್ ಮುಖ್ಯಸ್ಥ, ಐಪಿಎಸ್ ಅಧಿಕಾರಿ' ಎಂದು ಹೇಳುತ್ತಾನೆ. ಆ ರಾತ್ರಿ ಆಕೆಗೆ ನಿದ್ದೆನೇ ಬರುವುದಿಲ್ಲ. ಬೆಳಗ್ಗೆ ಎದ್ದು ಗಂಡನಿಗೆ ಹೇಳುತ್ತಾಳೆ, ನಾನೂ ಐಪಿಎಸ್ ಅಧಿಕಾರಿಯಾಗಬೇಕೆಂದು.

ತಮಿಳು ಮೀಡಿಯಂನಲ್ಲಿ external ಕೋರ್ಸ್

ತಮಿಳು ಮೀಡಿಯಂನಲ್ಲಿ external ಕೋರ್ಸ್

ಅದಕ್ಕೆ ಗಂಡ ಒಪ್ಪಿಗೆ ಸೂಚಿಸಿ, ಆಕೆಯ ಬೆನ್ನಿಗೆ ನಿಲ್ಲುತ್ತಾನೆ. ಎಸ್ ಎಸ್ ಎಲ್ ಸಿ, ಪಿಯುಸಿ, ಡಿಗ್ರಿ ಎಲ್ಲವನ್ನೂ ತಮಿಳು ಮೀಡಿಯಂನಲ್ಲಿ external ಕೋರ್ಸ್ ಮೂಲಕ ಅಂಬಿಕಾ ಕಂಪ್ಲೀಟ್ ಮಾಡುತ್ತಾಳೆ. ಇದನ್ನೆಲ್ಲಾ ಮುಗಿಸಿದ ಮೇಲೆ, 'ದಿಂಡಿಗಲ್ ನಲ್ಲಿ ನಾನು ಇನ್ನೂ ಹೆಚ್ಚು ಓದಲು ಸಾಧ್ಯವಾಗುತ್ತಿಲ್ಲ, ನಾನು ಚೆನ್ನೈಗೆ ಹೋಗುತ್ತೇನೆ' ಎಂದು ಹೇಳುತ್ತಾಳೆ.

ಚೆನ್ನೈನಲ್ಲಿ ಪಿಜಿ ವ್ಯವಸ್ಥೆಯನ್ನು ಮಾಡುತ್ತಾನೆ

ಚೆನ್ನೈನಲ್ಲಿ ಪಿಜಿ ವ್ಯವಸ್ಥೆಯನ್ನು ಮಾಡುತ್ತಾನೆ

ಪೇದೆ ಗಂಡ, ಮಕ್ಕಳ ಜವಾಬ್ದಾರಿಯನ್ನು ತಾನೇ ತೆಗೆದುಕೊಂಡು, ಆಕೆಗೆ ಚೆನ್ನೈನಲ್ಲಿ ಪಿಜಿ ವ್ಯವಸ್ಥೆಯನ್ನು ಮಾಡುತ್ತಾನೆ. ಆದರೆ, ಒಂದು, ಎರಡು, ಮೂರು ವರ್ಷವಾದರೂ, ಎಷ್ಟೇ ಓದಿದರೂ ಆಕೆ ಪಾಸ್ ಆಗುವುದಿಲ್ಲ. ನಾಲ್ಕನೇ ವರ್ಷಕ್ಕೆ ಗಂಡ ಎರಡು ಮಕ್ಕಳನ್ನು ಕರದುಕೊಂಡು ಚೆನ್ನೈಗೆ ಬರುತ್ತಾನೆ.

ರಿಟೈರ್ಡ್ ಆಗುವ ಮೊದಲು ನನಗೂ ಎರಡು ಸ್ಟಾರ್ ಬರುತ್ತೆ

ರಿಟೈರ್ಡ್ ಆಗುವ ಮೊದಲು ನನಗೂ ಎರಡು ಸ್ಟಾರ್ ಬರುತ್ತೆ

'ಮಕ್ಕಳನ್ನು ನೋಡಿಕೊಳ್ಳುವುದು ನನಗೆ ಕಷ್ಟವಾಗುತ್ತಿದೆ. ಸರಕಾರ ಕ್ವಾಟ್ರಸ್ ಕೊಟ್ಟಿದೆ. ರಿಟೈರ್ಡ್ ಆಗುವ ಮೊದಲು ನನಗೂ ಎರಡು ಸ್ಟಾರ್ ಬರುತ್ತೆ, ವಾಪಸ್ ಊರಿಗೆ ಬಾ' ಎಂದು ಕರೆಯುತ್ತಾನೆ. ಆಗ ಅಂಬಿಕಾ, ಹೇಗೂ ಮೂರು ವರ್ಷ ಬಿಟ್ಟಿದ್ದೀರಿ, ಇನ್ನು ಒಂದು ವರ್ಷ ನನ್ನನ್ನು ಬಿಡಿ. ಹೇಗಾದರೂ ಮಾಡಿ ಐಪಿಎಸ್ ಮುಗಿಸುತ್ತೇನೆ. ಆಗದಿದ್ದರೆ, ಟೀಚರ್ ಆಗಿ ಊರಿನಲ್ಲೇ ಇರುತ್ತೇನೆ' ಎಂದು ಗಂಡನಿಗೆ ಮನವಿ ಮಾಡುತ್ತಾಳೆ.

ಗಂಡ, ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ವಾಪಸ್ ದಿಂಡಿಗಲ್ ಗೆ ಹೋಗುತ್ತಾನೆ

ಗಂಡ, ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ವಾಪಸ್ ದಿಂಡಿಗಲ್ ಗೆ ಹೋಗುತ್ತಾನೆ

ಹೆಂಡತಿಯ ಕೋರಿಕೆಯನ್ನು ಒಪ್ಪಿ ಗಂಡ, ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ವಾಪಸ್ ದಿಂಡಿಗಲ್ ಗೆ ಹೋಗುತ್ತಾನೆ. ಅಂಬಿಕಾ, ನಾಲ್ಕನೇ ವರ್ಷಕ್ಕೆ ಪರೀಕ್ಷೆ, ಇಂಟರ್ವ್ಯೂ ಪಾಸ್ ಆಗಿ ಐಪಿಎಸ್ ಅಧಿಕಾರಿಯಾಗುತ್ತಾಳೆ. ಅವಳೇ ನನ್ನ ಬ್ಯಾಚ್ ಮೇಟ್ ಮುಂಬೈ ಉತ್ತರದ ಡಿಸಿಪಿ ಎನ್ ಅಂಬಿಕಾ. ಈಕೆಯ ಯಶೋಗಾಥೆಯನ್ನು ಗೂಗಲ್ ನಲ್ಲಿ ಸರ್ಚ್ ಮಾಡಿ ಒಮ್ಮೆ ನೋಡಿ ಎಂದು ರವಿ ಚನ್ನಣ್ಣನವರ್ ಸಭಿಕರಲ್ಲಿ ಮನವಿ ಮಾಡುತ್ತಾರೆ.

ನನ್ನ ಬ್ಯಾಚ್ ಮೇಟ್ ಮುಂಬೈ ಉತ್ತರದ ಡಿಸಿಪಿ ಎನ್ ಅಂಬಿಕಾ

ನನ್ನ ಬ್ಯಾಚ್ ಮೇಟ್ ಮುಂಬೈ ಉತ್ತರದ ಡಿಸಿಪಿ ಎನ್ ಅಂಬಿಕಾ

"ಇದೊಂದು ಕಟ್ಟುಕಥೆಯಲ್ಲ. ನಾನು ಮತ್ತು ಆಕೆ ಐಪಿಎಸ್ ಟ್ರೈನಿಂಗ್ ಅನ್ನು ಜೊತೆಯಾಗಿಯೇ ಮಾಡಿದ್ದೆವು. ಹಿಮಾಲಯದ ಗೋಮುಖದಲ್ಲಿ ನಾವು ಟ್ರೆಕ್ಕಿಂಗ್ ಮಾಡಿದ್ದೆವು. ತಮಿಳು ಭಾಷೆಯಲ್ಲಿ ಓದಿ, ಒಬ್ಬ ಪೇದೆಯ ಹೆಂಡತಿ, ಒಬ್ಬ ಮಹಿಳೆಯ ಈ ಸಾಧನೆಯ ಬಗ್ಗೆ ನಮ್ಮ ಇಡೀ ಪೊಲೀಸ್ ವ್ಯವಸ್ಥೆಗೆ ಹೆಮ್ಮೆಯಿದೆ" ಎಂದು ರವಿ ಚನ್ನಣ್ಣನವರ್ ಹೇಳುತ್ತಾರೆ.

English summary
Bengaluru Rural DCP Ravi Channannavar Briefing How DCP N Ambika Passed IPS. Ambika Now Serving As DCP - North Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X