ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ 20 ಕ್ರಿಯಾತ್ಮಕ ನಗರಗಳು: ಬೆಂಗಳೂರು ನಂಬರ್ 1, ಮುಂಬೈ ಇಲ್ವೇ ಇಲ್ಲ!

|
Google Oneindia Kannada News

ಬೆಂಗಳೂರು, ಜನವರಿ 21: ಜಾಗತಿಕವಾಗಿ ಮನ್ನಣೆ ಗಳಿಸಿರುವಂತಹ ಶಾಂಘೈ ಭಾರತದ ವಾಣಿಜ್ಯನಗರ ಮುಂಬೈ, ಹೈದರಾಬಾದ್ ನ್ನು ಹಿಂದಿಕ್ಕಿ ಬೆಂಗಳೂರು ಡೈನಾಮಿಕ್ ನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಬೆಂಗಳೂರಲ್ಲಿ ಸ್ಟಾರ್ಟ್‌ಅಪ್, ರಿಯಲ್ ಎಸ್ಟೇಟ್ ಉದ್ಯಮ ಹಾಗೂ ಇತರೆ ಮೂಲಸೌಕರ್ಯವನ್ನಾಧರಿಸಿ ಈ ಸ್ಥಾನವನ್ನು ನೀಡಲಾಗಿದೆ. ಸದ್ಯ ರಿಯಲ್ ಎಸ್ಟೇಟ್ ಸಲಹಾ ಸಮಿತಿ ಜೆಎಲ್‌ಎಲ್‌ ಬಿಡುಗಡೆ ಮಾಡಿರುವ ವಿಶ್ವದ ಡೈನಾಮಿಕ್ ನಗರಗಳ ಪಟ್ಟಿಯಲ್ಲಿ ಪೂರ್ವ, ಪಶ್ಚಿಮ ರಾಷ್ಟ್ರಗಳ ಬೆಳವಣಿಗೆ ದರವನ್ನು ವಿಭಾಗಿಸಲಾಗಿದೆ. ಈ ಬಾರಿ ಆಯ್ಕೆಯಾದ 20 ನಗರಗಳಲ್ಲಿ 19 ನಗರಗಳು ಭಾರತದ್ದಾಗಿವೆ.

 ಡೈನಾಮಿಕ್ ಸಿಟಿ, ಮಾನದಂಡ ಏನು?

ಡೈನಾಮಿಕ್ ಸಿಟಿ, ಮಾನದಂಡ ಏನು?

ಡೈನಾಮಿಕ್ ಸಿಟಿ ಎಂದು ಆಯ್ಕೆಮಾಡಲು ಮಾನದಂಡಗಳನ್ನು ಏನೇನು ಅನುಸರಿಸಲಾಗಿದೆ ಎನ್ನುವುದರ ಬಗ್ಗೆಯೂ ಗಮನಿಸಬೇಕಿದೆ. ವಿಶ್ವದ 131 ನಗರಗಳು ವೇಗವಾಗಿ ಬೆಳವಣಿಗೆಯನ್ನು ಹೊಂದುತ್ತಿವೆ. ನಿತ್ಯ ನೂರಾರು ಸ್ಟಾರ್ಟ್‌ಅಪ್ ಕಂಪನಿಗಳು ತಲೆ ಎತ್ತುತ್ತಿವೆ., ಲಕ್ಷಾಂತರ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಯಾಗುತ್ತಿದೆ. ಈ ನಗರಗಳ ಒಟ್ಟು ತಾಂತ್ರಿಕತೆ, ಆರ್ಥಿಕ ಮತ್ತು ಸಾಮಾಜಿಕ ಶ್ರೇಣಿ ಮತ್ತು ನಾವೀನ್ಯ ಪರಿಸರ ವ್ಯವಸ್ಥೆ ಹಾಗೂ ರಿಯಲ್ ಎಸ್ಟೇಟ್ ಉದ್ಯಮದಲ್ಲಾಗುತ್ತಿರುವ ಬೆಳವಣಿಗೆ ಆಧರಿಸಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

 ಎಲೆಕ್ಟ್ರಾನಿಕ್ ಮತ್ತು ತಂತ್ರಜ್ಞಾನ ವ್ಯವಸ್ಥೆಯೂ ಒಂದು ಕಾರಣ

ಎಲೆಕ್ಟ್ರಾನಿಕ್ ಮತ್ತು ತಂತ್ರಜ್ಞಾನ ವ್ಯವಸ್ಥೆಯೂ ಒಂದು ಕಾರಣ

ಈ 20 ನಗರಗಳು ಕ್ರಿಯಾತ್ಮಕ ನಗರಗಳು ಎಂದು ಕರೆಸಿಕೊಳ್ಳಲು ತಂತ್ರಜ್ಞಾನವು ಕೂಡ ಕಾರಣವಾಗಿದೆ. ತಂತ್ರಜ್ಞಾನ ಕ್ಷೇತ್ರವೇ ಬೆಂಗಳೂರಿನ ಗೌರವನ್ನು ಹೆಚ್ಚಿಸಿದೆ. ಬೆಂಗಳೂರು ಸ್ಟಾರ್ಟ್‌ ಅಪ್‌ ಉದ್ಯಮಗಳಿಗೆ ನೀಡುವ ಆದ್ಯತೆ. ಇನ್ನು ಹೈದರಾಬಾದ್‌ ಎರಡನೇ ಸ್ಥಾನ ಗಳಿಸಿದೆ. ಕಾರಣ ತಾಂತ್ರಜ್ಞಾನ ಆಧಾರಿತ ಯಶಸ್ವಿ ಸ್ಟಾರ್ಟ್‌ಅಪ್‌ಗಳಿಗೆ ಹೈದರಾಬಾದ್‌ ಹೋಂ ಟೌನ್‌ ಆಗಿದೆ.

 ಯುರೋಪ್, ಅಮೆರಿಕಾದ ಯಾವ ನಗರಗಳೂ ಕ್ರಿಯಾತ್ಮಕವಲ್ಲ

ಯುರೋಪ್, ಅಮೆರಿಕಾದ ಯಾವ ನಗರಗಳೂ ಕ್ರಿಯಾತ್ಮಕವಲ್ಲ

ಈಗ ಬಿಡುಗಡೆ ಮಾಡಿರುವ ಜೆಎಲ್‌ಎಲ್‌ ವರದಿ ಪ್ರಕಾರ ಆಯ್ಕೆಯಾಗಿರುವ 20 ನಗರಗಳ ಪೈಕಿ 19 ನಗರಗಳು ಏಷ್ಯಾಫೆಸಿಫಿಕ್ ನಗರಗಳಾಗಿವೆ. ಇಲ್ಲಿನ ಆರ್ಥಿಕ ಬೆಳವಣಿಗೆ ಮತ್ತು ನಗರೀಕರಣವು ಲ್ಯಾಟಿನ್ ಅಮೆರಿಕಾ, ಆಫ್ರಿಕನ್, ಉತ್ತರ ಅಮೇರಿಕಾ ನಗರಗಳಿಗಿಂತ ವೇಗವಾಗಿದೆ.

ಅಗ್ರಗಣ್ಯ ನಗರಗಳ ಪೈಕಿ ವಿಯೆಟ್ನಾಂ, ಫಿಲಿಫೈನ್ಸ್‌ ಮತ್ತು ಥೈಲ್ಯಾಂಡ್‌ ಕೂಡ ಇವೆ. ವಿಶೇಷ ಎಂದರೆ ಯುರೋಪ್‌ ಮತ್ತು ಅಮೆರಿಕದ ಯಾವ ನಗರಗಳೂ ಈ ಪಟ್ಟಿಯಲ್ಲಿ ಇಲ್ಲ. ಏಷ್ಯಾಫೆಸಿಫಿಕ್‌ ಹೊರತಾದ ಒಂದೇ ಒಂದು ರಾಜ್ಯ ಎಂದರೆ ನೈರೋಬಿ ಮಾತ್ರ. ಅಲ್ಲೂ ಏಷ್ಯಾದ ಪ್ರಭಾವ ತೀವ್ರವಾಗಿದೆ.

 ಸ್ಟಾರ್ಟ್‌ಅಪ್ ಸಂಸ್ಕೃತಿಯೂ ಮತ್ತೊಂದು ಕಾರಣ

ಸ್ಟಾರ್ಟ್‌ಅಪ್ ಸಂಸ್ಕೃತಿಯೂ ಮತ್ತೊಂದು ಕಾರಣ

ಜೆಎಲ್‌ಎಲ್‌ ಸಮೀಕ್ಷೆಯಲ್ಲಿ ಈ 20 ನಗರಗಳು ಪ್ರಥಮ ಸ್ಥಾನ ಗಳಿಸಲು ಮೂಲ ಕಾರಣ ಆ ಎಲ್ಲಾ ನಗರಗಳು ತಂತ್ರಜ್ಞಾನ ಮತ್ತು ಹೊಸ ಹೊಸ ಆವಿಷ್ಕಾರಗಳಿಗೆ ನೀಡುವ ಮಹತ್ವ. ತಂತ್ರಜ್ಞಾನಕ್ಕೆ ನೀಡುವ ಪ್ರಾಮುಖ್ಯತೆಯು ಆರ್ಥಿಕತೆ ಮತ್ತು ರಿಯಲ್‌ ಎಸ್ಟೇಟ್‌ ಎರಡೂ ಕ್ಷೇತ್ರದ ಬೆಳವಣಿಗೆಗೆ ಕೀಲಿ ಕೈ. ಜೊತೆಗೆ ಈ ನಗರಗಳಲ್ಲಿ ಉದಯೋನ್ಮುಖ ಉದ್ಯಮಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ ಅದರಲ್ಲೂ ಬೆಂಗಳೂರು, ಹೈದರಾಬಾದ್‌, ನೈರೋಬಿ, ಹೊ ಚಿ ಮಿನ್‌ ಸಿಟಿ ಮತ್ತು ಶೆಂಜೆಹೆನ್‌ಗಳಲ್ಲಿ ಸ್ಟಾರ್ಟ್‌ಅಪ್‌ ವೇಗವೇ ರಾರ‍ಯಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆಯಲು ಕಾರಣ ಎಂದು ಹೇಳಲಾಗಿದೆ.

 ವಿಶ್ವದ 20 ಡೈನಾಮಿಕ ನಗರಗಳ ಪಟ್ಟಿ

ವಿಶ್ವದ 20 ಡೈನಾಮಿಕ ನಗರಗಳ ಪಟ್ಟಿ

ಬೆಂಗಳೂರು
ಹೈದರಾಬಾದ್‌
ಹನೋಯಿ
ದೆಹಲಿ
ಪುಣೆ
ನೈರೋಬಿ
ಚೆನ್ನೈ
ಹೊ ಚಿ ಮಿನ್‌ ಸಿಟಿ
ಕ್ಸಿ-ಯಾನ್‌
ಗುವಾಂಗ್ಹೌ
ನಾಂಜಿಂಗ್‌
ಮನಿಲಾ
ಬೀಜಿಂಗ್‌
ಶಾಂಘೈ
ಕೊಲ್ಕತ್ತಾ
ಚಾಂಗಿಂಗ್‌
ಹಾಂಗ್‌ ಝೌ
ಬ್ಯಾಂಕಾಕ್‌
ಶೆಂಜಹನ್‌
ಚೆಂಗ್ಡು

ವಿಶ್ವದ ಡೈನಾಮಿಕ್ ಸಿಟಿಗಳ ಪಟ್ಟಿಯಲ್ಲಿ ಬೆಂಗಳೂರು ನಂಬರ್ 1ವಿಶ್ವದ ಡೈನಾಮಿಕ್ ಸಿಟಿಗಳ ಪಟ್ಟಿಯಲ್ಲಿ ಬೆಂಗಳೂರು ನಂಬರ್ 1

English summary
With a robust technology and innovation ecosystem in place, Bengaluru has emerged as the world’s most dynamic city, a recent survey said. According to a survey by property consultant JLL, following Bengaluru is Hyderabad that is ranked second with Delhi at fourth, Pune at fifth, Chennai at seventh and Kolkata at fifteenth position featuring in top 20 cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X