ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ವಿಕ್ರಂ'ಗಾಗಿ ಪದ್ಯ ಬರೆದ ಬೆಂಗಳೂರು ಪೊಲೀಸರು!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 10: ಚಂದ್ರಯಾನ-2 ಯೋಜನೆಯಲ್ಲಿ ಚಂದ್ರನ ಮೇಲೆ ಇಳಿದಿರುವ ವಿಕ್ರಂ ಲ್ಯಾಂಡರ್ ಇದುವರೆಗೂ ಇಸ್ರೋದೊಂದಿಗೆ ಸಂಪರ್ಕಕ್ಕೆ ಸಿಕ್ಕಿಲ್ಲ. ಸದ್ಯಕ್ಕೆ ಅದರ ಇರುವಿಕೆಯ ಚಿತ್ರ ದೊರೆತಿರುವುದು ಅದರ ಕುರಿತು ತಾಂತ್ರಿಕ ವಿಶ್ಲೇಷಣೆ ನಡೆಸಲಾಗುತ್ತಿದೆ. ಏನೇ ಪ್ರಯತ್ನ ನಡೆಸಿದರೂ ವಿಕ್ರಂ ಲ್ಯಾಂಡರ್ ಮತ್ತೆ ಭೂಮಿಯಲ್ಲಿನ ಕೇಂದ್ರದೊಂದಿಗೆ ಸಂವಹನ ನಡೆಸುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ.

ಈ ನಡುವೆ ವಿಕ್ರಂ ಲ್ಯಾಂಡರ್ ಇಸ್ರೋ ಕೇಂದ್ರದೊಂದಿಗೆ ಸಂಪರ್ಕ ಸಾಧಿಸುವಂತಾಗಲಿ ಭಾರತೀಯರು ಬೇಡಿಕೊಳ್ಳುತ್ತಿದ್ದಾರೆ. ಒಂದು ವೇಳೆ ಇದು ಸಾಧ್ಯವಾದರೆ ಬಾಹ್ಯಾಕಾಶ ಕ್ಷೇತ್ರದಲ್ಲಿಯೇ ಅದ್ಭುತ ಸಾಧನೆ ಮಾಡಿದ ಕೀರ್ತಿ ಭಾರತಕ್ಕೆ ಸಿಗುವುದು ನಿಶ್ಚಿತ.

ವಿಕ್ರಂ ಲ್ಯಾಂಡರ್ ಬಗ್ಗೆ ವಿಭಿನ್ನ ಹೇಳಿಕೆ ನೀಡಿದ ಇಸ್ರೋವಿಕ್ರಂ ಲ್ಯಾಂಡರ್ ಬಗ್ಗೆ ವಿಭಿನ್ನ ಹೇಳಿಕೆ ನೀಡಿದ ಇಸ್ರೋ

ವಿಕ್ರಂ ಲ್ಯಾಂಡರ್ ಸಂಪರ್ಕ ಮತ್ತೆ ಸಿಗುವುದೋ ಇಲ್ಲವೋ ಗೊತ್ತಿಲ್ಲ. ಆದರೆ ಅದಕ್ಕಾಗಿ ಪ್ರತಿಯೊಬ್ಬರ ಮನಸ್ಸು ಮಿಡಿಯುತ್ತಿದೆ ಎಂಬುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯ, ಪ್ರಾರ್ಥನೆಗಳು ಸಾಕ್ಷಿ. ಇದರಲ್ಲಿ ಪೊಲೀಸರೂ ಹಿಂದೆ ಬಿದ್ದಿಲ್ಲ. ಹಾಗೆಯೇ ಸಾಕಷ್ಟು ತಮಾಷೆಯ ಮೀಮ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇವುಗಳಲ್ಲಿ ಹೆಚ್ಚಿನವು ಟ್ರಾಫಿಕ್ ನಿಯಮಗಳನ್ನು ಹೋಲಿಸುವ, ಅದನ್ನು ಟೀಕಿಸುವ ಅಭಿವ್ಯಕ್ತಿಗಳಾಗಿಯೂ ಬಳಕೆಯಾಗುತ್ತಿವೆಸ.

ಮೌನ ಮುರಿದು ಮಾತನಾಡು ಒಮ್ಮೆ

ಮೌನ ಮುರಿದು ಮಾತನಾಡು ಒಮ್ಮೆ

ಪ್ರೀತಿಯ ವಿಕ್ರಮ್,

ಹಗಲಿರುಳ ಶ್ರಮದ ಫಲ ನೀನು,

ನಿನ್ನ ಮಾತಿಗಾಗಿ ಕಾಯುತಿರುವೆ ನಾನು!

ಮೌನ ಮುರಿದು ಮಾತನಾಡು ಒಮ್ಮೆ,

ಆಗುವುದೆಲ್ಲ ಆಗೇ ಬಿಡಲಿ ನಾನಿರುವೆ!

ಇಂತಿ ನಿನ್ನ,

ಭಾರತಾಂಬೆ

ಎಂದು ಬೆಂಗಳೂರು ನಗರ ಪೊಲೀಸರು ಟ್ವಿಟ್ಟರ್‌ನಲ್ಲಿ ಪದ್ಯರೂಪದಲ್ಲಿ ವಿಕ್ರಂ ಲ್ಯಾಂಡರ್ ಇಸ್ರೋದೊಂದಿಗೆ ಸಂಪರ್ಕ ಸಾಧಿಸಲು ಎಂದು ಪ್ರಾರ್ಥಿಸಿದ್ದಾರೆ.

ದಯವಿಟ್ಟು ಪ್ರತಿಕ್ರಿಯಿಸು

ದಯವಿಟ್ಟು ಪ್ರತಿಕ್ರಿಯಿಸು

ನಾಗಪುರ ನಗರ ಪೊಲೀಸರು ಸೋಮವಾರ ಮಾಡಿದ ಟ್ವೀಟ್ ಸಾಕಷ್ಟು ವೈರಲ್ ಆಗಿತ್ತು. 'ಪ್ರಿಯ ವಿಕ್ರಂ, ದಯವಿಟ್ಟು ಪ್ರತಿಕ್ರಿಯೆ ನೀಡು. ಸಿಗ್ನಲ್‌ಗಳನ್ನು ಬ್ರೇಕ್ ಮಾಡಿದ್ದಕ್ಕಾಗಿ ನಿನಗೆ ನಾವು ಚಲನ್ ನೀಡುವುದಿಲ್ಲ' ಎಂದು ನಾಗಪುರ ಪೊಲೀಸರು ಮಾಡಿದ್ದ ಟ್ವೀಟ್‌ಗೆ ಸಾಕಷ್ಟು ತಮಾಷೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಪಂಚೆಯುಟ್ಟು ಬರಿಗಾಲಲ್ಲಿ ಕಾಲೇಜಿಗೆ ಹೋದವರು ಈಗ ಇಸ್ರೋ ಅಧ್ಯಕ್ಷ: ಶಿವನ್ ಯಶೋಗಾಥೆಪಂಚೆಯುಟ್ಟು ಬರಿಗಾಲಲ್ಲಿ ಕಾಲೇಜಿಗೆ ಹೋದವರು ಈಗ ಇಸ್ರೋ ಅಧ್ಯಕ್ಷ: ಶಿವನ್ ಯಶೋಗಾಥೆ

ನಾನೇ ದಂಡ ಕಟ್ಟುತ್ತೇನೆ

ನಾನೇ ದಂಡ ಕಟ್ಟುತ್ತೇನೆ

ಒಂದು ವೇಳೆ ವಿಕ್ರಂ ಪ್ರತಿಕ್ರಿಯಿಸಿದರೆ ನೀವು ಸಿಗ್ನಲ್ ಬ್ರೇಕ್ ಮಾಡಿದ್ದಕ್ಕೆ ಚಲನ್ ಅನ್ನು ನನಗೆ ಕಳುಹಿಸಬಹುದು. ವಿಕ್ರಂ ಬದಲಿಗೆ ನಾನೇ ದಂಡ ಪಾವತಿಸುತ್ತೇನೆ ಎಂದು ಸುನಿಲ್ ಗಾಂಧಿ ಎಂಬುವವರು ನಾಗಪುರ ಪೊಲೀಸರ ಟ್ವೀಟ್‌ಗೆ ಮಾಡಿರುವ ಪ್ರತಿಕ್ರಿಯೆ ಗಮನ ಸೆಳೆದಿದೆ.

ಚಂದ್ರಲೋಕದಲ್ಲಿಯೂ ದಂಡ!

ಚಂದ್ರಲೋಕದಲ್ಲಿಯೂ ದಂಡ!

ಸಿಗ್ನಲ್ ಉಲ್ಲಂಘನೆ ಮಾಡಿದ್ದಕ್ಕೆ ನಿನಗೆ 15,000 ರೂ. ದಂಡ ವಿಧಿಸುತ್ತಿದ್ದೇನೆ ಎಂದು ಟ್ರಾಫಿಕ್ ಪೊಲೀಸ್, ಚಂದ್ರನ ಮೇಲೆ ಇರುವ ವಿಕ್ರಂ ಲ್ಯಾಂಡರ್ ಬಳಿ ನಿಂತು ಚಲನ್ ಬರೆಯುತ್ತಿರುವ ಮೀಮ್ ಹರಿದಾಡುತ್ತಿದ.

ಚಂದ್ರಯಾನ 2: ಇಸ್ರೋದಿಂದ ಮತ್ತೊಂದು ಸಂತಸದ ಸುದ್ದಿ!ಚಂದ್ರಯಾನ 2: ಇಸ್ರೋದಿಂದ ಮತ್ತೊಂದು ಸಂತಸದ ಸುದ್ದಿ!

English summary
Bengaluru Police dedicated a poem for Vikram lander of Chandrayaan 2 praying for its response.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X