ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು-ಚೆನ್ನೈ ನಡುವೆ 120 ಕಿಮೀ ವೇಗದಲ್ಲಿ ಚಲಿಸಿ

|
Google Oneindia Kannada News

ಬೆಂಗಳೂರು, ಮಾ. 31 : ವಿವಿಧ ರಾಷ್ಟ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ರಾಜ್ಯಕ್ಕೆ ಸಂಬಂಧಿಸಿದ ವಿವಿಧ ರಸ್ತೆ ಯೋಜನೆಗಳಿಗೆ ಬೆಂಗಳೂರಿನಲ್ಲಿ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಬಗ್ಗೆ ಮಾಹಿತಿ ನೀಡಿದರು.

ಬೆಂಗಳೂರು-ಚೆನ್ನೈ ಹೆದ್ದಾರಿಯನ್ನು ಎಕ್ಸ್ ಪ್ರೆಸ್ ಹೈವೆ ಯಾಗಿ ಪರಿವರ್ತನೆ ಮಾಡುವುದು ನಮ್ಮ ಮೊದಲ ಆದ್ಯತೆ ಎಂದು ಹೇಳಿದರು. 240 ಕಿಮೀ ಉದ್ದದ ರಸ್ತೆ ಇಂಡಸ್ಟ್ರಿಯಲ್ ಕಾರಿಡಾರ್ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ. ವಾಹನಗಳು 120 ಕಿಮೀ ವೇಗದಲ್ಲಿ ಓಡಾಡಲು ಸಾಧ್ಯವಿದೆ. ಅಲ್ಲದೇ ಇದು ಬೆಂಗಳೂರು-ಮುಂಬೈ ಕಾರಿಡಾರ್ ಗೂ ಸಂಪರ್ಕ ಕಲ್ಪಿಸಲಿದೆ ಎಂದು ಹೇಳಿದರು.[ಬೆಂಗಳೂರು-ಮೈಸೂರು ಹೆದ್ದಾರಿಗೆ ಟೋಲ್ ಕಟ್ಟಿ]

gadkari

ರಾಷ್ಟ್ರೀಯ ಹೆದ್ದಾರಿ 218 (ಬಿಜಾಪುರ-ಗುಲ್ಬರ್ಗ-ಹುಮ್ನಾಬಾದ್) ರಾಷ್ಟ್ರೀಯ ಹೆದ್ದಾರಿ 234 (ಮಧುಗಿರಿ-ಚಿಕ್ಕಬಳ್ಳಾಪುರ-ಚಿಂತಾಮಣಿ-ಮುಳುಬಾಗಿಲು) ಹೆದ್ದಾರಿ ಮೇಲ್ದರ್ಜೆಗೇರಲಿದೆ. ರಸ್ತೆ ನಿರ್ಮಾಣಕ್ಕೆ ಎಷ್ಟು ಹಣ ಬೇಕಾಗುತ್ತದೆ ಎಂಬುದು ಮುಖ್ಯವಲ್ಲ. ಸುಮಾರು 5 ಲಕ್ಷ ಕೋಟಿ ವೆಚ್ಚದಲ್ಲಿ ದೇಶದ ಹೆದ್ದಾರಿಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಮಗ್ರ ರಸ್ತೆ ನಿರ್ಮಾಣಕ್ಕೆ ಅಪಾರ ಪ್ರಮಾಣದ ಭೂಮಿ ಅಗತ್ಯವಿದ್ದು ಸರ್ಕಾರ ರೈತರಿಂದ ಭೂಮಿ ವಶಪಡಿಸಿಕೊಳ್ಳಬೇಕಿದೆ. ಎಲ್ಲ ಅಡೆತಡೆಗಳನ್ನು ಮೀರಿದರೆ ಯೋಜನೆಯನ್ನು ಸಾಕಾರ ಮಾಡಬಹುದು ಎಂದು ಹೇಳಿದರು.

ನದಿ ಜೋಡಣೆ ಕೆಲಸಕ್ಕೆ ಕರ್ನಾಟಕ ಕೈ ಜೋಡಿಸಿದರೆ ನೀರಿನ ಸಮಸ್ಯೆಯಿಂದ ಮುಕ್ತಿ ಕಾಣಬಹುದು ಎಂದರು. ಜತೆಗೆ ರಾಜ್ಯಕ್ಕೆ ಸಂಬಂಧಿಸಿದ ಇತರ ಕೆಲ ಹೆದ್ದಾರಿ ಯೋಜನೆಗಳ ಉಲ್ಲೇಖ ಮಾಡಿದರು.

ಹೊಸ ಯೋಜನೆಗಳು
* ಹೊಸಪೇಟೆ-ಚಿತ್ರದುರ್ಗ(120 ಕಿಮೀ, 1000 ಕೋಟಿ)
* ಹೊಸಪೇಟೆ-ಬಳ್ಳಾರಿ(95 ಕಿಮೀ,910 ಕೋಟಿ)
* ಹಾಸನ-ಬಿಸಿ ರಸ್ತೆ(133 ಕಿಮೀ 1500 ಕೋಟಿ)
* ಶಿವಮೊಗ್ಗ-ಮಂಗಳೂರು(190 ಕಿಮೀ, 2300 ಕೋಟಿ)
* ಅಂಕೋಲಾ-ಹುಬ್ಬಳ್ಳಿ(130 ಕಿಮೀ)
* ಹುಬ್ಬಳ್ಳಿ-ಹೋಸಪೇಟೆ-ಬಿಜಾಪುರ-ಗುಲ್ಬರ್ಗ-ಹುಮ್ನಾವಾದ್
* ತಮಿಳುನಾಡು ಗಡಿಯಿಂದ ದಿಂಡಿಘಾಟ್-ಬೆಂಗಳೂರು
* ನೆಲಮಂಗಲ-ತೂಮಕೂರು-ಚಿತ್ರದುರ್ಗ-ಹಾವೇರಿ

English summary
Road transport, highways and shipping minster Nitin Jairam Gadkari announced the Bengaluru-Chennai expressway on the lines of Mumbai-Pune expressway. He was speaking at the foundation stone laying ceremony of upgradation of two national highway projects in Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X