ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈಕ್‌ನಲ್ಲಿ ಕಾರ್ಗಿಲ್‌ಗೆ ತೆರಳಿ ಸೈನಿಕರಿಗೆ ಗೌರವ ಸಲ್ಲಿಸಿದ ಬೆಂಗಳೂರು ಯೋಧರು

By Manjunatha
|
Google Oneindia Kannada News

ಬೆಂಗಳೂರು, ಜುಲೈ 25: ಬೆಂಗಳೂರಿನಿಂದ 6 ಜನ ಯೋಧರ ಗುಂಪೊಂದು ಕಾರ್ಗಿಲ್‌ಗೆ ತಮ್ಮ ಮೋಟರ್‌ ಸೈಕಲ್‌ನಲ್ಲಿ ಪ್ರಯಾಣ ಮಾಡಿ ಗಮ್ಯ ತಲುಪಿದ್ದಾರೆ.

ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರಿಗೆ ಗೌರವ ಸಲ್ಲಿಸಬೇಕೆಂದ ಉದಾತ್ತ ಧ್ಯೇಯ ಇರಿಸಿಕೊಂಡು ಬೈಕ್ ಸವಾರಿ ಮಾಡಿದ್ದ ಈ ಸೈನಿಕರು. ಕಾರ್ಗಿಲ್ ತಲುಪಿ ಯೋಧರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದ್ದಾರೆ.

ಕಾರ್ಗಿಲ್ ವಿಜಯೋತ್ಸವಕ್ಕಾಗಿ ಬೆಂಗಳೂರು-ಕಾರ್ಗಿಲ್ ಬೈಕ್ ಪ್ರಯಾಣಕಾರ್ಗಿಲ್ ವಿಜಯೋತ್ಸವಕ್ಕಾಗಿ ಬೆಂಗಳೂರು-ಕಾರ್ಗಿಲ್ ಬೈಕ್ ಪ್ರಯಾಣ

ಮಡಿದ ಸೈನಿಕರಿಗೆ ಗೌರವ ಮಾತ್ರವಲ್ಲದೆ, ಯುವಕರನ್ನು ಸೇನೆ ಸೇರಲು ಉತ್ತೇಜನ ನೀಡುವ ಮಹತ್ ಉದ್ದೇಶವೂ ಅವರ ಬೈಕ್ ಪ್ರಯಾಣದಲ್ಲಿ ಅಡಕವಾಗಿತ್ತು.

Bengaluru Army bases team went Kargil in bike to pay homage to Soldiers

ಸೇನಾ ಪೊಲೀಸ್‌ನ ಮೋಟಾರ್ ಸೈಕಲ್ ಪರಿಣತರ 'ಶ್ವೇತಾಶ್ವ' ಪಡೆ ಜುಲೈ 02ರ ಸೋಮವಾರ ಬೆಳಿಗ್ಗೆ ಬೆಂಗಳೂರಿನಿಂದ ಹೊರಟಿತ್ತು. ಬೆಳಗಾವಿ, ಪುಣೆ, ಮುಂಬೈ, ವಡೋದರ, ಉದಯಪುರ, ನಜಿರಾಬಾದ್, ನವದೆಹಲಿ, ಚಂಡಿಗಡ, ಮನಾಲಿ, ಸರ್ಚು ಮತ್ತು ಲೆಹ್ ಮೂಲಕ ಈ ಪಡೆ ಕಾರ್ಗಿಲ್ ತಲುಪಿದೆ.

Bengaluru Army bases team went Kargil in bike to pay homage to Soldiers

ಟಿವಿಎಸ್ ಅಪಾಚೆ 200 ಸಿಸಿ ಬೈಕ್‌ನಲ್ಲಿ ಬೆಂಗಳೂರಿನಿಂದ ಕಾರ್ಗಿಲ್ ವರೆಗೆ ಸುಮಾರು 3,250 ಕಿ.ಮೀಟರ್ ದೂರವನ್ನು ಈ ಸೈನಿಕರು ಕ್ರಮಿಸಿದ್ದಾರೆ. ಧೈರ್ಯಶಾಲಿ ಬೆಂಗಳೂರಿನ ಯೋಧರ ಮುಡಿಗೆ ಈ ಮಹತ್ ಕಾರ್ಯ ಮತ್ತೊಂದು ಗರಿಯನ್ನು ಪೋಣಿಸಿದೆ.

English summary
Bengaluru Army base's team went to Kargil in bikes to pay homage to martyr Soldiers of Kargil. 6 army jawans went in TVS Apache 200 cc bikes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X