• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಓ ದೇವರೇ, ಅತ್ಯಾಚಾರಿಗಳನ್ನು ಕ್ಷಮಿಸು..!

|

ಕೋಲ್ಕತ್ತ, ಮಾ. 17: ಆಕೆಯ ಮೇಲೆ ಕಾಮಪಿಶಾಚಿಗಳು ಅತ್ಯಾಚಾರ ಎಸಗಿದ್ದರು, ವಯೋವೃದ್ಧ ಮಹಿಳೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತ ಮಲಗಿದ್ದಳು, ಆದರೆ ಎಚ್ಚರಗೊಂಡಾಗ ಆಕೆ ಹೇಳಿದ್ದು ಒಂದೇ ಮಾತು ' ದೇವರೇ ಅತ್ಯಾಚಾರಿಗಳನ್ನು ಕ್ಷಮಿಸು'!

ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದವರನ್ನು ಕ್ಷಮಿಸು ಎಂದು 71 ವರ್ಷದ ಕ್ರೈಸ್ತ ಸನ್ಯಾಸಿನಿ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಹೃದಯದಲ್ಲಿ ನೋವಿದೆ ಆದರೂ ಅವರನ್ನು ಕ್ಷಮಿಸು ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸನ್ಯಾಸಿನಿ ಪ್ರಾರ್ಥಿಸಿದ್ದಾರೆ.[ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಮಾಡಿದ್ದವರ ಬಂಧನ]

ನಾನು ಆಸ್ಪತ್ರೆಯಲ್ಲಿರಬಹುದು, ಆದರೆ ನನಗೆ ನಿಜವಾಗಿ ಚಿಂತೆಯಾಗಿರುವುದು ಕಾನ್ವೆಂಟ್ ಮತ್ತು ಮಕ್ಕಳ ಭದ್ರತೆ ಬಗ್ಗೆ. ಎಲ್ಲರೂ ಸಮಾಜಕ್ಕೆ ಒಳಿತಾಗುವುದನ್ನು ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಆರೋಪಿಗಳು ಇನ್ನು ತಲೆಮರೆಸಿಕೊಂಡಿರುವುದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ. ಮೊದಲು ಬಂಧನ ಮಾಡಿದವರಿಗೂ ಸಿಸಿ ಟಿವಿಯಲ್ಲಿ ಕಾಣಿಸಿಕೊಂಡವರಿಗೂ ಹೋಲಿಕೆಯಿಲ್ಲವಾದ್ದರಿಂದ ಅವರನ್ನು ಬಿಟ್ಟು ಕಳಿಸಲಾಗಿದೆ. ನಿಜ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಕೋಲ್ಕತ್ತದ ಹಲವೆಡೆ ಪ್ರತಿಭಟನೆ ನಡೆಯುತ್ತಿದೆ. ಕಳೆದ ಶನಿವಾರ ಬೆಳಕಿಗೆ ಬಂದ ಅತ್ಯಾಚಾರ ಪ್ರಕರಣ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.[ಅತ್ಯಾಚಾರಿ ಬೆತ್ತಲೆಗೊಳಿಸಿ ಕೊಂದು ಹಾಕಿದ 'ನಾಗಾ'ಗಳು]

ಇದು ಕೇವಲ ಮಹಿಳೆಯೊಬ್ಬರ ಮೇಲೆ ನಡೆದ ಅತ್ಯಾಚಾರವಲ್ಲ. ಒಂದು ಸಮುದಾಯದ ಮೇಲೆ ನಡೆದ ಅತ್ಯಾಚಾರ. ಇಂಥ ಘಟನೆಗಳು ನಿಜಕ್ಕೂ ದೇಶದ ಐಕ್ಯತೆಗೆ ಭಂಗ ತರುತ್ತವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ನೋಯ್ಡಾದ ವೈದ್ಯಾಧಿಕಾರಿ ತಪಸ್ ರಾಯ್ ನೇತೃತ್ವದ ವೈದ್ಯರ ತಂಡ ಸನ್ಯಾಸಿನಿಯ ಆರೋಗ್ಯದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದು, ಆಕೆ ಈಗ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಾಮಾನ್ಯ ಸ್ಥಿತಿಗೆ ಬಂದಿದ್ದಾಳೆ ಎಂದು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The sense of security has all but vanished, but there is no anger in her voice. The 71-year-old nun at a convent school, who was gang-raped by a gang of young men, was a picture of calm and sobriety on Sunday, some 36 hours after the brutal attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more