• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಾಳದಿಂದ ಬೆಂಗಳೂರು : ನಕಲಿ ನೋಟು ಜಾಲ ವಿಸ್ತರಿಸಿದ್ದ ಅಕ್ಬರ್

|

ನವದೆಹಲಿ, ಅಕ್ಟೋಬರ್ 19: ರಾಷ್ಟ್ರೀಯ ತನಿಖಾ ದಳ(ಎನ್ಐಎ) ದವರು ಇತ್ತೀಚೆಗೆ ಮೊಹಮ್ಮದ್ ಅಕ್ಬರ್ ಎಂಬಾತನನ್ನು ನಕಲಿ ನೋಟು ಜಾಲ ಪ್ರಕರಣದಲ್ಲಿ ಬಂಧಿಸಿದ್ದರು.

ಅಪನಗದೀಕರಣದಿಂದ ನಕಲಿ ನೋಟುಗಳ ಹಾವಳಿಗೆ ಭರ್ತಿ ಪೆಟ್ಟು: ಇಲ್ಲಿದೆ ಲೆಕ್ಕಾಚಾರ

ವಿಶಾಖಪಟ್ಟಣಂನಲ್ಲಿ 2015ರಲ್ಲಿ ಬಂಧಿತನಾಗಿದ್ದ ಸದ್ದಾಂ ಹುಸೇನ್ ಎಂಬಾತನ ಜಾಲಕ್ಕೂ ಅಕ್ಬರ್ ಜಾಲಕ್ಕೂ ಸಂಪರ್ಕವಿರುವ ಬಗ್ಗೆ ಎನ್ಐಎ ಖಚಿತಪಡಿಸಿದೆ. ಸದಾಂನಿಂದ 5,01,500 ರು ಮೌಲ್ಯದ ಉತ್ತಮ ಗುಣಮಟ್ಟದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಮೈಸೂರು ದಸರಾ - ವಿಶೇಷ ಪುರವಣಿ

ಪಶ್ಚಿಮ ಬಂಗಾಳದ ಮಾಲ್ಡದಿಂದ ಬೆಂಗಳೂರಿನ ತನಕ ಜಾಲ ವಿಸ್ತರಿಸಿದ್ದು ಸದ್ದಾಂ, ಇದಕ್ಕೆ ಅಮಿರುಲ್ ಹಕ್ ನಿರ್ದೇಶಕ ನಾಗಿದ್ದ. ಇದನ್ನು ಬೆಂಗಳೂರಿನಲ್ಲಿ ಹಂಚಿಕೆ ಮಾಡುವ ಕೆಲಸ ನಂತರ ನನಗೆ ಸಿಕ್ಕಿತು ಎಂದು ಅಕ್ಬರ್ ಹೇಳಿದ್ದಾನೆ. ಅಂತಾರಾಷ್ಟ್ರೀಯ ಗಡಿಭಾಗಗಳಲ್ಲಿ Fake Indian Currency Note (ಎಫ್ಐಸಿಎನ್) ಹಂಚುತ್ತಿದ್ದರು.

2007ರಲ್ಲಿ ಅಸ್ಸಾಂನಿಂದ ಬೆಂಗಳೂರಿಗೆ ಬಂದ ಅಕ್ಬರ್, ಹೂ ಮಾರಾಟಗಾರರ ಜತೆ ಸೇರಿ ಅಂಗಡಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಎಫ್ ಐಸಿಎನ್ ವ್ಯವಹಾರಕ್ಕೆ ಈತನನ್ನು ದೂಡಿದ್ದು ಅದೇ ಹಕೀಂ, ಈ ಹಕೀಂ ಬೇರೆ ಯಾರು ಅಲ್ಲ ಅಕ್ಬರ್ ಅಲಿಯ ಅಂಕಲ್.

ನಕಲಿ ನೋಟು ಪ್ರಕರಣದಲ್ಲಿ ಮಲಯಾಳಂ ನಟಿ ಬಂಧನ

ಅಕ್ಬರ್ ಅಲಿ ನಂತರ ಬೆಂಗಳೂರಿನಲ್ಲಿ ಎಫ್ ಐ ಸಿಎನ್ ಗ್ಯಾಂಗ್ ರೂಪಿಸಿ, ಜಾಲವನ್ನು ವಿಸ್ತರಣೆ ಮಾಡಿದ. ಮಾಲ್ಡದಿಂದ ಬೆಂಗಳೂರಿಗೆ ಈ ಜಾಲವನ್ನು ಬೆಳೆಸಿದ.

ಬೆಚ್ಚಿಬೀಳಿಸುವ ಸುದ್ದಿ! ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಕಲಿನೋಟಿನ 3 ಕಾರ್ಖಾನೆ!

ತನಿಖೆ ಕೈಗೊಂಡಾಗ ಮಾಲ್ಡ ಹಾಗೂ ಬೆಂಗಳೂರಿನ ಬ್ಯಾಂಕ್ ಖಾತೆಗಳಲ್ಲಿ ನಕಲಿ ನೋಟುಗಳನ್ನು ಜಮೆ ಮಾಡಿರುವುದು ಕಂಡು ಬಂದಿದೆ. ಈ ಬಗ್ಗೆ ತನಿಖೆ ತೀವ್ರಗೊಂಡಿದ್ದು, ಗ್ಯಾಂಗಿನ ಇತರೆ ಸದಸ್ಯರ ಹೆಸರಗಳು ಬಹಿರಂಗಗೊಳ್ಳುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The National Investigation Agency has arrested one Mohammad Akbar in connection with a fake currency case. The case relates to the seizure High Quality Fake Indian Currency of the face value Rs.5,01,500 from the possession of one Saddam Hossain in September, 2015 at Visakhapatnam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more