ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇನಾಮಿ ಆಸ್ತಿ ಮಾಹಿತಿ ನೀಡಿದವರಿಗೆ 1 ಕೋಟಿ ಇನಾಮು

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 22 : ಬೇನಾಮಿ ಆಸ್ತಿ ಮಾಡಿರುವವರ ಬಗ್ಗೆ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡುವವರಿಗೆ 1 ಕೋಟಿ ರುಪಾಯಿವರೆಗೆ ನಗದು ಇನಾಮು ಕೊಡಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಅಕ್ಟೋಬರ್ ನಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ.

ಬೇನಾಮಿ ಕಾಯ್ದೆಯಡಿ ಲಾಲೂ ಹೆಂಡತಿ ಮಕ್ಕಳ ಮೇಲೆ ಕೇಸ್ಬೇನಾಮಿ ಕಾಯ್ದೆಯಡಿ ಲಾಲೂ ಹೆಂಡತಿ ಮಕ್ಕಳ ಮೇಲೆ ಕೇಸ್

ಈ ಬಗ್ಗೆ ಹಿರಿಯ ತೆರಿಗೆ ಅಧಿಕಾರಿಯೊಬ್ಬರು ಮಾತನಾಡಿ, ಮಾಹಿತಿದಾರರು ಕನಿಷ್ಠ 15 ಲಕ್ಷ ರುಪಾಯಿಯಿಂದ ಗರಿಷ್ಠ 1 ಕೋಟಿಯವರೆಗೆ ಬಹುಮಾನ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

Benami property secret informers to get reward up to 1 Crore

ಸುಳಿವು ನೀಡುವವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ಕೂಡ ಅಧಿಕಾರಿ ಹೇಳಿದ್ದಾರೆ. ಕಳೆದ ವರ್ಷ ಬೇನಾಮಿ ಆಸ್ತಿ ಕಾನೂನು ಪರಿಚಯಿಸಲಾಗಿತ್ತು. ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಹಾಗೂ ಕಂದಾಯ ಗುಪ್ತಚರ ಇಲಾಖೆಯಿಂದ ಮಾಹಿತಿದಾರರಿಗೆ ಬಹುಮಾನ ಕೊಡುವ ಪದ್ಧತಿ ಮುಂಚಿನಿಂದಲೂ ಇದೆ.

ಏಷ್ಯಾ ಖಂಡದಲ್ಲೇ ಭ್ರಷ್ಟಾಚಾರದಲ್ಲಿ ಭಾರತ ನಂಬರ್ ಒನ್: ಸಮೀಕ್ಷೆಏಷ್ಯಾ ಖಂಡದಲ್ಲೇ ಭ್ರಷ್ಟಾಚಾರದಲ್ಲಿ ಭಾರತ ನಂಬರ್ ಒನ್: ಸಮೀಕ್ಷೆ

"ಮಾಹಿತಿದಾರರ ಸಹಾಯ ಪಡೆಯುವುದರಿಂದ ನಮ್ಮ ಕೆಲಸ ಸುಲಭ, ಶೀಘ್ರ ಹಾಗೂ ಪರಿಣಾಮಕಾರಿಯಾಗಿ ಆಗುತ್ತದೆ. ಮಾಹಿತಿ ನೀಡುವವರಿಗೆ ಆಕರ್ಷಕ ಬಹುಮಾನ ನೀಡುವುದರಿಂದ ದೊರೆಯುವ ಮಾಹಿತಿಯು ನಮ್ಮ ಕೆಲಸವನ್ನು ಸಲೀಸು ಮಾಡುತ್ತದೆ. ದೇಶದಾದ್ಯಂತ ಇರುವ ಬೇನಾಮಿದಾರರ ವಿರುದ್ಧ ದಾಳಿಗಳನ್ನು ಶೀಘ್ರವೇ ಆರಂಭಿಸಲಾಗುವುದು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯಕ್ಕೆ ಬಹುಮಾನ ಮೊತ್ತದ ಬಗೆಗಿನ ವಿಚಾರ ಆರ್ಥಿಕ ಸಚಿವಾಲಯದ ಬಳಿ ಇದೆ. ಒಮ್ಮೆ ಅಲ್ಲಿಂದ ಅಂಕಿತ ಬಿದ್ದು, ಕೇಂದ್ರ ಹಣಕಾಸು ಸಚಿವರು ಒಪ್ಪಿಗೆ ಸೂಚಿಸಿದರೆ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ. ಈ ಬಗೆಗಿನ ಘೋಷಣೆ ಅಕ್ಟೋಬರ್ ಕೊನೆಗೆ ಅಥವಾ ನವೆಂಬರ್ ಮೊದಲ ವಾರದಲ್ಲಿ ಆಗುವ ಸಾಧ್ಯತೆ ಇದೆ.

English summary
The Centre is planning to give out cash rewards to the tune of Rs one crore to secret informers who provide tip offs to investigative agencies in connection with Benami Properties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X