ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕೊವಿಡ್ 19 ಮೃತರ ಸಂಖ್ಯೆ ಮತ್ತೊಮ್ಮೆ 300ಕ್ಕಿಂತ ಕಡಿಮೆ

|
Google Oneindia Kannada News

ನವದೆಹಲಿ, ಡಿಸೆಂಬರ್ 26: ಭಾರತದಲ್ಲಿ ಜೂನ್‌ ತಿಂಗಳ ನಂತರ ಇದೇ ಮೊದಲ ಬಾರಿಗೆ ಸತತವಾಗಿ ಒಂದು ದಿನದಲ್ಲಿ ಮೃತಪಟ್ಟವರ ಸಂಖ್ಯೆಯನ್ನು 300ಕ್ಕಿಂತ ಕಡಿಮೆಗಿಳಿಸಲಾಗಿದೆ.

ಶನಿವಾರದಂದು ಒಂದು ದಿನದಲ್ಲಿ 300ಕ್ಕಿಂತ ಕಡಿಮೆ ಕೊರೊನಾ ವೈರಸ್ ಸಾವು ದಾಖಲಾಗಿತ್ತು. ದೇಶದಲ್ಲಿ ಶುಕ್ರವಾರ 251 ಮಂದಿ ಸೋಂಕಿತರು ಸಾವಿಗೀಡಾಗಿದ್ದರು. ಭಾನುವಾರ ಬೆಳಗ್ಗೆ ಲಭ್ಯ ಅಂಕಿ ಅಂಶದಂತೆ, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 279 ಮಂದಿ ಮೃತಪಟ್ಟಿದ್ದಾರೆ. ಒಟ್ಟಾರೆ, ಮೃತಪಟ್ಟವರ ಸಂಖ್ಯೆ 1,47,622ಕ್ಕೇರಿಕೆ. ಕಳೆದ ಜೂನ್ ತಿಂಗಳಿನಿಂದ ಇದೇ ಮೊದಲ ಬಾರಿ 300ಕ್ಕಿಂತ ಕಡಿಮೆ ಪ್ರಕರಣ ದಾಖಲಾಗಿದೆ.

ಅಮೆರಿಕದ ಮಾಡೆರ್ನಾ ಲಸಿಕೆ ಪಡೆದ ವೈದ್ಯರಲ್ಲಿ ತೀವ್ರ ಅಲರ್ಜಿ ಅಮೆರಿಕದ ಮಾಡೆರ್ನಾ ಲಸಿಕೆ ಪಡೆದ ವೈದ್ಯರಲ್ಲಿ ತೀವ್ರ ಅಲರ್ಜಿ

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 18,732 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿವೆ. ಭಾರತದ ಒಟ್ಟು ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 1,01,87,850ಕ್ಕೆ ಏರಿಕೆಯಾಗಿದೆ. ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ21,430 ಮಂದಿ ಸೋಂಕಿತರು ಬಿಡುಗಡೆಯಾಗಿದ್ದಾರೆ. ಇದರಿಂದ ಒಟ್ಟು ಬಿಡುಗಡೆಯಾದವರ ಸಂಖ್ಯೆ 97,61,538ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳು 2,78, 690 ಇದ್ದು, ಈ ಪ್ರಮಾಣವೂ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.

Below 300 Covid 19 Deaths Reported again Dec 27

ದೇಶದಲ್ಲಿ ಡಿಸೆಂಬರ್ 26ರವರೆಗೂ 16,81,02,657 ಮಾದರಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. ಶನಿವಾರ ಒಂದೇ ದಿನ 9,43,368 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ.

ಕೊರೊನಾ ವೈರಸ್ ರೂಪಾಂತರದ ಬಗ್ಗೆ ಏಮ್ಸ್ ಕೊಟ್ಟ ಎಚ್ಚರಿಕೆಕೊರೊನಾ ವೈರಸ್ ರೂಪಾಂತರದ ಬಗ್ಗೆ ಏಮ್ಸ್ ಕೊಟ್ಟ ಎಚ್ಚರಿಕೆ

Recommended Video

Wistronಕಂಪನಿ ಕಾರ್ಮಿಕರ ದಾಂಧಲೆ ಪ್ರಕರಣ ಕುರಿತು ಸುದ್ದಿಘೋಷ್ಠಿ ನಡೆಸಿದ ಸಚಿವ Shivaram Hebbar |Oneindia Kannada

ದೇಶದ ಒಟ್ಟಾರೆ ಚೇತರಿಕೆ ಪ್ರಮಾಣ ಶೇ 95.77ಕ್ಕೆ ಸುಧಾರಣೆಯಾಗಿದೆ. ಮುಂಬೈನಲ್ಲಿ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಿದ್ದ ಧಾರಾವಿಯಲ್ಲಿ ಕಳೆದ ಎಂಟು ತಿಂಗಳಿನಲ್ಲಿಯೇ ಮೊದಲ ಬಾರಿಗೆ ಒಂದು ಪ್ರಕರಣ ದಾಖಲಾಗಿಲ್ಲ. ಭಾರತದಲ್ಲಿ ಮುಂದಿನ ವಾರದಲ್ಲಿ ಆಕ್ಸ್ ಫರ್ಡ್ ಕೊವಿಶೀಲ್ಡ್ ಲಸಿಕೆ ಬಳಕೆಗೆ ಅನುಮತಿ ಸಿಗುವ ಸಾಧ್ಯತೆಯಿದೆ.

English summary
India has reported 18,732, new coronavirus cases and 279 deaths in last 24 hours. Below 300 deaths again since June.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X