ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯರ ಒಂದೂವರೆ ವರ್ಷ ಆಯಷ್ಯ ಕಸಿಯುತ್ತಿದೆ ವಾಯುಮಾಲಿನ್ಯ

By Nayana
|
Google Oneindia Kannada News

Recommended Video

ಕುಸಿಯುತ್ತಿದೆ ಭಾರತೀಯರ ಸರಾಸರಿ ಆಯುಷ್ಯ ! | Oneindia Kannada

ಬೆಂಗಳೂರು, ಆಗಸ್ಟ್ 23: ವಾಯುಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯರ ಸರಾಸರಿ ಆಯಸ್ಸು ಒಂದೂವರೆ ವರ್ಷ ಕಡಿಮೆಯಾಗುತ್ತಿದೆ ಎಂದು ಸ್ಫೋಟಕ ಮಾಹಿತಿಯನ್ನು ವರದಿಯೊಂದು ಬಹಿರಂಗಪಡಿಸಿದೆ.

ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ವಾಯುಮಾಲಿನ್ಯ ಮತ್ತು ಮಾನವನ ಆಯುಷ್ಯ ನಡುವೆ ಅಧ್ಯಯನ ಹಾಗೂ ಸಮೀಕ್ಷೆಯನ್ನು ನಡೆಸಲಾಗಿದ್ದು, ಜಗತ್ತಿನ ಎಲ್ಲಾ ರಾಷ್ಟ್ರಗಳ ಒಟ್ಟು ಸರಾಸರಿ ಆಯುಷ್ಯ ಮಾಲಿನ್ಯದಿಂದಾಗಿ 0.59ರಷ್ಟು ಮನುಷ್ಯನ ಆಯುಷ್ಯ ಕುಸಿಯುತ್ತಿದೆ ಎಂದು ವರದಿ ಹೇಳಿದೆ.

ಬೆಂಗಳೂರಲ್ಲಿ ವಾಯು ಗುಣಮಟ್ಟ ನಿಯಂತ್ರಣ ವಲಯ ಅನುಷ್ಠಾನಬೆಂಗಳೂರಲ್ಲಿ ವಾಯು ಗುಣಮಟ್ಟ ನಿಯಂತ್ರಣ ವಲಯ ಅನುಷ್ಠಾನ

ಭಾರತ, ಪಾಕಿಸ್ತಾನ, ಚೀನಾ ಹಾಗೂ ಬಾಂಗ್ಲಾದೇಶ, ಚೀನಾದಂತಹ ಜನಸಂದಣಿ ಇರುವ ರಾಷ್ಟ್ರಗಳಲ್ಲಿ 0.8-1.4 ವರ್ಷ ಮಾನವನ ಒಟ್ಟು ಆಯುಷ್ಯದಲ್ಲಿ ಕಡಮೆಯಾಗುವ ಮಟ್ಟಿಗೆ ವಾಯು ಮಾಲಿನ್ಯ ವಿಕೋಪಕ್ಕೆ ಹೋಗಿದೆ ಎಂದು ವರದಿ ತಿಳಿಸಿದೆ.

Believe it! Air pollution shortens 1.5 yrs of life every Indian!

ಅಮೇರಿಕದ ಟೆಕ್ಸಾಸ್‌ ಯೂನಿವರ್ಸಿಟಿ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶಗಳು ಪತ್ತೆಯಾಗಿದೆ.2.5 ಮೈಕ್ರೋನ್ಸ್ ನಷ್ಟು ವಾಯು ಮಾಲಿನ್ಯ ಉಂಟಾದರೆ ಶಾಸ್ವಕೋಶ ಸಂಬಂಧಿ ರೋಗಗಳು, ಹೃದಯಾಘಾತ, ಕ್ಯಾನ್ಸರ್ ಮತ್ತಿತರೆ ರೋಗಗಳು ಉಂಟಾಗುತ್ತವೆ ಎಂದು ವರದಿ ಹೇಳಿದೆ.

ವಾಯು ಮಾಲಿನ್ಯ: ದೆಹಲಿಯನ್ನೂ ಮೀರಿಸಿದ ಬೆಂಗಳೂರುವಾಯು ಮಾಲಿನ್ಯ: ದೆಹಲಿಯನ್ನೂ ಮೀರಿಸಿದ ಬೆಂಗಳೂರು

ಬಾಂಗ್ಲಾದೇಶದಲ್ಲಿ 1.82 ವರ್ಷ, ಈಜಿಪ್ಟ್‌ 1.5 ವರ್ಷ, ಪಾಕಿಸ್ತಾನ 1.56 ವರ್ಷ, ಸೌದಿ ಅರೇಬಿಯಾ 1.48 ವರ್ಷ, ನೈಜೀರಿಯಾ 1.25 ವರ್ಷ, ಚೀನಾ 1.25 ವರ್ಷ ಜನರ ಆಯುಷ್ಯ ಕಡಿಮೆಯಾಗುತ್ತದೆ.

ಭಾರತದಲ್ಲಿ 1.53 ವರ್ಷ ಕಡಿಮೆಯಾಗುತ್ತದೆ ಎಂದು ವರದಿ ತಿಳಿಸಿದೆ. 90 ಸಾವಿರ ಅಮೇರಿಕನ್ನರು ಹಾಗೂ ಒಂದು ಮಿಲಿಯನ್ ಭಾರತೀಯರು ವಾಯು ಮಾಲಿನ್ಯದಿಂದ ಪ್ರತಿ ವರ್ಷ ಸಾವನ್ನಪ್ಪುತ್ತಿದ್ದಾರೆ. 85 ವರ್ಷದವರೆಗೆ ಬದುಕುವ ಪ್ರಮಾಣ ಶೇ.20ರಷ್ಟು ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.

English summary
Texas University survey has revealed that ambient air pollution is shortening 1.5 years of every Indian as air quality was worsening every day in the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X